75 ಎಸೆತಗಳಲ್ಲಿ 157 ರನ್: BCCI ಆಯ್ಕೆದಾರರಿಗೆ ಸಂದೇಶ ರವಾನೆ; ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್!

ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರ ಈ ಇನಿಂಗ್ಸ್ ಜನವರಿ 11 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಯ್ಕೆದಾರರಿಗೆ ನೀಡಿರುವ ಸಂದೇಶ ಎಂದೇ ಭಾವಿಸಲಾಗುತ್ತಿದೆ.
Sarfaraz Khan
ಸರ್ಫರಾಜ್ ಖಾನ್
Updated on

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಯ್ಕೆದಾರರಿಗೆ ಸರ್ಫರಾಜ್ ಖಾನ್ ಭರ್ಜರಿ ಸಂದೇಶವನ್ನು ಕಳುಹಿಸಿದ್ದಾರೆ. ಬುಧವಾರ ಗೋವಾ ವಿರುದ್ಧ ಮುಂಬೈನ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕೇವಲ 75 ಎಸೆತಗಳಲ್ಲಿ 157 ರನ್ ಗಳಿಸಿದ್ದಾರೆ. 28 ವರ್ಷದ ಸರ್ಫರಾಜ್ ಅದ್ಭುತ ಫಾರ್ಮ್‌ನಲ್ಲಿದ್ದು, 14 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.

ಗೋವಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ವಾಸುಕಿ ಕೌಶಿಕ್ ಅವರು ಅಂಗ್ಕ್ರಿಶ್ ರಘುವಂಶಿ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಪ್ರಗತಿ ಸಾಧಿಸಿದರು. ಯಶಸ್ವಿ ಜೈಸ್ವಾಲ್ ಮತ್ತು ಮುಶೀರ್ ಖಾನ್ ತಂಡದ ಇನಿಂಗ್ಸ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡಿದರು. ನಂತರ ಬಂದ ಸರ್ಫರಾಜ್ ತುಂಬಾ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಂದ್ಯವನ್ನು ತಂಡದತ್ತ ತಿರುಗಿಸಿದರು. ಎದುರಾಳಿ ತಂಡದ ಮೇಲೆ ಹಿಡಿತ ಸಾಧಿಸಿದರು ಮತ್ತು ಮೇಲುಗೈ ಸಾಧಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರ ಈ ಇನಿಂಗ್ಸ್ ಜನವರಿ 11 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಯ್ಕೆದಾರರಿಗೆ ನೀಡಿರುವ ಸಂದೇಶ ಎಂದೇ ಭಾವಿಸಲಾಗುತ್ತಿದೆ.

ಕೊನೆಯ ಪಂದ್ಯದಲ್ಲಿ, ಶಾರ್ದೂಲ್ ಠಾಕೂರ್ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರಂಭದಲ್ಲಿ ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಕಿತ್ತು ಛತ್ತೀಸ್‌ಗಢದ ಅಗ್ರ ಕ್ರಮಾಂಕವನ್ನು ಕೆಡವಿದರು. ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಒಂಬತ್ತು ವಿಕೆಟ್‌ಗಳಿಂದ ಆರಾಮವಾಗಿ ಗೆದ್ದಿತು. ಈ ಗೆಲುವು ವಿಜಯ್ ಹಜಾರೆ ಟ್ರೋಫಿಯ ಗುಂಪು ಹಂತದಲ್ಲಿ ಅವರ ಸತತ ಮೂರನೇ ಗೆಲುವಾಗಿತ್ತು.

ಮುಂಬೈ 12 ಅಂಕಗಳೊಂದಿಗೆ ಗ್ರೂಪ್ ಸಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್

ಸರ್ಫರಾಜ್ ಖಾನ್ ತಮ್ಮ ವೈಟ್-ಬಾಲ್ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆ ಬರೆದಿದ್ದಾರೆ. 2024ರ ನವೆಂಬರ್ 1 ರಿಂದ ದೇಶಕ್ಕಾಗಿ ಆಡದ ಭಾರತೀಯ ಅಂತಾರಾಷ್ಟ್ರೀಯ ಆಟಗಾರ ವಿಜಯ್ ಹಜಾರೆ ಟ್ರೋಫಿಯಲ್ಲಿ (ವಿಎಚ್‌ಟಿ) ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂಬೈ ಪರ ನಾಲ್ಕನೇ ಸುತ್ತಿನ ಪಂದ್ಯದಲ್ಲಿ, ಕೇವಲ 75 ಎಸೆತಗಳಲ್ಲಿ 157 ರನ್ ಗಳಿಸಿ ಮುಂಬೈ ಪರ ಅತ್ಯಂತ ವೇಗದ ಲಿಸ್ಟ್-ಎ ಶತಕ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಸರ್ಫರಾಜ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಕಳೆದ ವಾರ ಸಿಕ್ಕಿಂ ವಿರುದ್ಧ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಹಿಟ್‌ಮ್ಯಾನ್ ಈ ದಾಖಲೆ ಬರೆದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ರೋಹಿತ್ 94 ಎಸೆತಗಳಲ್ಲಿ 155 ರನ್ ಗಳಿಸಿದರು. ಈಗ, ಗೋವಾ ವಿರುದ್ಧ, ಸರ್ಫರಾಜ್ ಖಾನ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com