
ಮುಂಬೈ: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆಂಗ್ಲರಿಗೆ ಗೆಲ್ಲಲು 248 ರನ್ ಗಳ ಬೃಹತ್ ಗುರಿ ನೀಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಸಿಡಿಸಿದ್ದು, ಇಂಗ್ಲೆಂಡ್ ಗೆ ಗೆಲ್ಲಲು 248ರನ್ ಗಳ ಬೃಹತ್ ಗುರಿ ನೀಡಿದೆ.
ಭಾರತದ ಪರ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 135 ರನ್ ಸಿಡಿಸಿದರು.
ಉಳಿದಂತೆ ಶಿವಂ ದುಬೆ 30ರನ್, ತಿಲಕ್ ವರ್ಮಾ 24 ರನ್ ಹಾಗೂ ಅಕ್ಸರ್ ಪಟೇಲ್ 15 ರನ್ ಗಳಿಸಿದರು.
ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸೆ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಜೋಫ್ರಾ ಆರ್ಚರ್, ಜೇಮಿ ಓವರ್ಟನ್ ಮತ್ತು ಅದಿಲ್ ರಷೀದ್ ತಲಾ 1 ವಿಕೆಟ್ ಪಡೆದರು.
ದುಬಾರಿಯಾದ ಇಂಗ್ಲೆಂಡ್ ಬೌಲರ್ ಗಳು
ಇನ್ನು ಭಾರತ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರಕ್ಕೆ ಅಕ್ಷರಶಃ ಇಂಗ್ಲೆಂಡ್ ಬೌಲರ್ ಗಳ ಹೈರಾಣಾದರು. ವೇಗಿ ಜೋಫ್ರಾ ಆರ್ಚರ್ 4 ಓವರ್ ಗೆ 55ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಅಂತೆಯೇ ಜೇಮಿ ಓವರ್ಟನ್ 48ರನ್ ನೀಡಿದರೆ, ಅದಿಲ್ ರಷೀದ್ 41, ಬ್ರೈಡನ್ ಕಾರ್ಸೆ 38 ರನ್, ಮಾರ್ಕ್ ವುಡ್ 32 ರನ್ ಮತ್ತು ಲಿವಿಂಗ್ ಸ್ಟೋನ್ 29ರನ್ ನೀಡಿದರು. ಇದು ಇಂಗ್ಲೆಂಡ್ ತಂಡಕ್ಕೆ ದುಬಾರಿಯಾಯಿತು.
Advertisement