Ind vs Eng, 1st ODI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರೆ ಎಂದ ಮಾಜಿ ಕ್ರಿಕೆಟಿಗ!

ರೋಹಿತ್ ಶರ್ಮಾ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಆಡಿದಂತೆ ಆಡುತ್ತಾರೆಯೇ ಎಂಬುದು ಒಂದೇ ಒಂದು ಕುತೂಹಲಕಾರಿ ಸಂಗತಿಯಾಗಿದೆ.
Rohit Sharma-Virat Kohli
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
Updated on

ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಮತ್ತು ನಂತರದ ರಣಜಿ ಟ್ರೋಫಿ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ವೃತ್ತಿಜೀವನದಲ್ಲಿ ಹಿನ್ನಡೆಯಾಗಿ ಪರಿಣಮಿಸಿದೆ. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಿಕ್ಕಿರುವ ಉತ್ತಮ ಅವಕಾಶವಾಗಿದೆ. ಸದ್ಯ ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ರೋಹಿತ್‌ ತಮ್ಮ ಫಾರ್ಮ್ ಅನ್ನು ಮರಳಿ ಪಡೆಯುವ ಅನಿವಾರ್ಯ ಎದುರಾಗಿದೆ.

ಭಾರತದ ಮಾಜಿ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್, ಟೀಂ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮಾ ಇದೀಗ ತೀವ್ರ ಒತ್ತಡಕ್ಕೆ ಸಿಲುಕಲಿದ್ದಾರೆ. ಆರಂಭಿಕರಾಗಿ ಬ್ಯಾಟಿಂಗ್ ಮಾಡುವ ಅವರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಇದೀಗ ನೋಡಲು ಆಸಕ್ತಿದಾಯಕವಾಗಿದೆ ಎಂದಿದ್ದಾರೆ.

'ರೋಹಿತ್ ಶರ್ಮಾ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಆಡಿದಂತೆ ಆಡುತ್ತಾರೆಯೇ ಎಂಬುದು ಒಂದೇ ಒಂದು ಕುತೂಹಲಕಾರಿ ಸಂಗತಿಯಾಗಿದೆ. ಅವರು ತಂಡಕ್ಕೆ ಉತ್ತಮ ಆರಂಭವನ್ನು ನೀಡುತ್ತಿದ್ದರು. ಇದೀಗ ಅವರು ದೊಡ್ಡ ಸ್ಕೋರ್ ಮಾಡಲೇಬೇಕಿರುವ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸ್ಪಲ್ಪಮಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ' ಎಂದು ಮಂಜ್ರೇಕರ್ ESPNCricinfo ನಲ್ಲಿ ಹೇಳಿದ್ದಾರೆ.

'ರೋಹಿತ್ ಶರ್ಮಾ ಅವರು ಓಪನರ್ ಆಗಿರುವುದರಿಂದ, ಎದುರಾಳಿ ತಂಡವು 2-3 ವಿಕೆಟ್ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಇಂಗ್ಲೆಂಡ್‌ಗೆ ಹಲವಾರು ವೇಗಿಗಳ ಆಯ್ಕೆಗಳಿವೆ. ಪಿಚ್‌ನಲ್ಲಿ ಸ್ವಲ್ಪ ನೆರವು ಇದ್ದರೆ, ಅದು ರೋಹಿತ್ ಶರ್ಮಾಗೆ ಸ್ವಲ್ಪ ಪರೀಕ್ಷೆ ಎದುಗಾಗಬಹುದು. ಆದರೆ, ರೋಹಿತ್ ಶರ್ಮಾ ಈ ಸರಣಿಯಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುತ್ತಾರೆ ಮತ್ತು ತಾವು ಒತ್ತಡದಲ್ಲಿದ್ದರೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆಯಿದೆ' ಎಂದರು.

Rohit Sharma-Virat Kohli
Ind vs Eng; ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ODIಗೆ ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ ಪದಾರ್ಪಣೆ

ರೋಹಿತ್ ಮಾತ್ರವಲ್ಲ, ವಿರಾಟ್ ಕೊಹ್ಲಿ ಕೂಡ ಇದೀಗ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಕಾನಿಕ್ ಬ್ಯಾಟರ್‌ನ ಫಾರ್ಮ್ ಅನ್ನು ಟೀಕಿಸಿದವರಲ್ಲಿ ಮಂಜ್ರೇಕರ್ ಕೂಡ ಒಬ್ಬರು. 'ರೋಹಿತ್ ಅವರಂತೆ ಕೊಹ್ಲಿ ಅವರಿಗೆ ಯಾವುದೇ ಒತ್ತಡದಲ್ಲಿ ಇರುವುದಿಲ್ಲ. ವಿರಾಟ್ ಕೊಹ್ಲಿಗೆ ಯಾವುದೇ ಸವಾಲು ಇಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವರು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಹೊಂದಿಕೊಳ್ಳಲು ಸಾಕಷ್ಟು ಫಾರ್ಮ್ ಮತ್ತು ಫಿಟ್ನೆಸ್ ಹೊಂದಿದ್ದಾರೆ' ಎನ್ನುತ್ತಾರೆ.

'ಇದು ಏಕದಿನ ಕ್ರಿಕೆಟ್ ಮತ್ತು ODIಗಳಲ್ಲಿ ಅವರ ದಾಖಲೆ ಅದ್ಭುತವಾಗಿದೆ. ಏಕದಿನ ಮಾದರಿಗಳಿಂದ ಅವರನ್ನು ಕೈಬಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಯಶಸ್ವಿ ಜೈಸ್ವಾಲ್ ಕಾಯಬೇಕಾಗಿದೆ. ಇಂತಹ ಗುಣಮಟ್ಟದ ಆಟಗಾರ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿರುವುದು ಒಂದು ರೀತಿಯಲ್ಲಿ ಭಾರತಕ್ಕೆ ಒಳ್ಳೆಯ ಸುದ್ದಿಯೇ ಆಗಿದೆ. ಇದು ಭಾರತಕ್ಕೆ ಒಂದು ಆಯ್ಕೆಯಾಗಿದೆ' ಎಂದು ಅವರು ಹೇಳಿದರು.

'ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳುತ್ತಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾದರಿಯು ನಿಮಗೆ ಸಮಯ ಮತ್ತು ಆರಂಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿರುವಂತೆ ಎದುರಾಳಿ ಕೂಡ ನಿಮ್ಮನ್ನು ಔಟ್ ಮಾಡಲು ಆತುರಪಡುವುದಿಲ್ಲ. ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಅತ್ಯುತ್ತಮವಾದ ಮಾದರಿಯಾಗಿದೆ' ಎಂದು ಮಂಜ್ರೇಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com