
ಕಟಕ್: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ಮೂಲಕ ಭಾರತದ ವರುಣ್ ಚಕ್ರವರ್ತಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದು, ಆ ಮೂಲಕ 1974ರ ಬಳಿಕ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ 33 ವರ್ಷದ ವರುಣ್ ಚಕ್ರವರ್ತಿ ಕಣಕ್ಕಿಳಿದಿದ್ದು, ಇದು ಅವರ ಪದಾರ್ಪಣೆ ಏಕದಿನ ಪಂದ್ಯವಾಗಿದೆ. ಆ ಮೂಲಕ 1974ರ ಬಳಿಕ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ ಮೊದಲ ಹಿರಿಯ ಆಟಗಾರ ಎಂಬ ಕೀರ್ತಿಗೆ ವರುಣ್ ಚಕ್ರವರ್ತಿ ಭಾಜನರಾಗಿದ್ದಾರೆ.
ವರುಣ್ ಚಕ್ರವರ್ತಿ ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಓವರ್‌ಗಳ ಸ್ವರೂಪದ ಪಂದ್ಯದಲ್ಲಿ ತಮ್ಮ ಚೊಚ್ಚಲ ಕ್ಯಾಪ್ ಪಡೆದರು. ಕಟಕ್‌ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವರುಣ್ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಆ ಮೂಲಕ 33 ವರ್ಷ ವಯಸ್ಸಿನ ಕೋಲ್ಕತ್ತಾ ನೈಟ್ ರೈಡರ್ಸ್ ತಾರೆ ಈ ಪ್ರಕ್ರಿಯೆಯಲ್ಲಿ ಇತಿಹಾಸ ಬರೆದಿದ್ದು, 1974 ರ ಬಳಿಕ ದೇಶದ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಭಾರತಕ್ಕಾಗಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಫಾರೋಖ್ ಎಂಜಿನಿಯರ್ ನಂ. 1 ಸ್ಥಾನದಲ್ಲಿದ್ದು, ಅವರು 1974 ರಲ್ಲಿ ಚೊಚ್ಚಲ ಪಂದ್ಯವನ್ನಾಡಿದಾಗ ಅವರ ವಯಸ್ಸು 36 ವರ್ಷ ಮತ್ತು 138 ದಿನಗಳಾಗಿತ್ತು.
ಇಂದು ವರುಣ್ ಗೆ ಸ್ಥಾನ ಕಲ್ಪಿಸಲು ಕುಲದೀಪ್ ಯಾದವ್ ಗೆ ವಿಶ್ರಾಂತಿ ನೀಡಲಾಯಿತು.
Advertisement