2nd ODI: ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ; ಕೊನೆಗೂ ಫಾರ್ಮ್ ಗೆ ಮರಳಿದ Rohit Sharma!

ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು
Rohit Sharma Slams 32nd Century
ರೋಹಿತ್ ಶರ್ಮಾ ಶತಕ
Updated on

ಕಟಕ್: ಸುದೀರ್ಘ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೊನೆಗೂ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದು, ಇಂಗ್ಲೆಂಡ್ ವಿರುದ್ಧ ಆಕರ್ಷಕ ಶತಕ ಸಿಡಿಸಿದ್ದಾರೆ.

ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೇವಲ 76 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ ದೀರ್ಘ ಕಾಲದಿಂದ ಕಳಪೆ ಫಾರ್ಮ್ ನಿಂದ ಒದ್ದಾಡುತ್ತಿದ್ದ ರೋಹಿತ್ ಶರ್ಮಾ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದಾರೆ.

ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು. ಅಂತೆಯೇ ಇದು ರೋಹಿತ್ ಶರ್ಮಾ ಅವರ 32 ಏಕದಿನ ಶತಕವಾಗಿದೆ.

ಇನ್ನು ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 26.4 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿದ್ದು, ಭಾರತದ ಪರ 115 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು 14 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮುಂದವರೆಸಿದ್ದಾರೆ. ಭಾರತ ತಂಡ ಗೆಲ್ಲಲು ಇನ್ನೂ 105 ರನ್ ಗಳ ಅವಶ್ಯಕತೆ ಇದ್ದು, ಇನ್ನೂ 8 ವಿಕೆಟ್ ಗಳಿವೆ.

Rohit Sharma Slams 32nd Century
2nd ODI: 'ತಲೆ ಸರಿ ಇಲ್ವಾ..'; ಓವರ್ ಥ್ರೋ ಎಸೆದ Harshit Rana, ಮೈದಾನದಲ್ಲೇ Rohit Sharma ಫುಲ್ ಕ್ಲಾಸ್! video Viral

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com