2nd ODI: ಶತಕದಲ್ಲೂ ದಾಖಲೆ ಬರೆದ Rohit Sharma; ದ್ರಾವಿಡ್ ರೆಕಾರ್ಡ್ ಪತನ; ಕ್ರಿಸ್ ಗೇಯ್ಲ್ ಸಿಕ್ಸರ್ ದಾಖಲೆಯೂ ಉಡೀಸ್!

76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು.
Rohit Sharma Slams 32nd Century
ರೋಹಿತ್ ಶರ್ಮಾ ಶತಕ
Updated on

ಕಟಕ್: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಫಾರ್ಮ್ ಗೆ ಮರಳಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಮೋಘ ಶತಕದಲ್ಲೂ ದಾಖಲೆ ನಿರ್ಮಿಸಿದ್ದಾರೆ.

ಹೌದು.. ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೇವಲ 76 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಆ ಮೂಲಕ ದೀರ್ಘ ಕಾಲದಿಂದ ಕಳಪೆ ಫಾರ್ಮ್ ನಿಂದ ಒದ್ದಾಡುತ್ತಿದ್ದ ರೋಹಿತ್ ಶರ್ಮಾ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದಾರೆ. ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು. ಅಂತೆಯೇ ಇದು ರೋಹಿತ್ ಶರ್ಮಾ ಅವರ 32 ಏಕದಿನ ಶತಕವಾಗಿದೆ.

2ನೇ ವೇಗದ ಶತಕ

ಇನ್ನು ರೋಹಿತ್ ಶರ್ಮಾ ಸಿಡಿಸಿರುವ ಈ ಶತಕ ಅವರ ವೃತ್ತಿ ಜೀವನದ 2ನೇ ವೇಗದ ಶತಕವಾಗಿದೆ. ಈ ಹಿಂದೆ 2023ರಲ್ಲಿ ರೋಹಿತ್ ದೆಹಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಅವರ ಏಕದಿನ ವೃತ್ತಿ ಜೀವನದ ವೇಗದ ಶತಕವಾಗಿದೆ. ಇಂದು ಇಂಗ್ಲೆಂಡ್ ವಿರುದ್ಧ ರೋಹಿತ್ 76 ಎಸೆತಗಳಲ್ಲಿ ಶತಕ ಸಿಡಿಸಿದ್ದು ಇದು ಅವರ 2ನೇ ವೇಗದ ಶತಕವಾಗಿ ದಾಖಲಾಗಿದೆ.

Fastest ODI 100s for Rohit Sharma (by balls)

  • 63 vs Afg Delhi 2023

  • 76 vs Eng Cuttack 2025 *

  • 82 vs Eng Nottingham 2018

  • 82 vs NZ Indore 2023

  • 84 vs WI Guwahati 2018

Rohit Sharma Slams 32nd Century
2nd ODI: ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ; ಕೊನೆಗೂ ಫಾರ್ಮ್ ಗೆ ಮರಳಿದ Rohit Sharma!

ಶತಕದ ವೇಳೆಗೆ 7 ಸಿಕ್ಸರ್

ಇನ್ನು ಈ ಶತಕ ಸಿಡಿಸುವ ವೇಳೆಗೆ ರೋಹಿತ್ ಶರ್ಮಾ ಖಾತೆಯಲ್ಲಿ ಬರೊಬ್ಬರಿ 7 ಸಿಕ್ಸರ್ ಗಳು ದಾಖಲಾಗಿದ್ದು, ಇದು ಶತಕದಲ್ಲಿ ಬ್ಯಾಟರ್ ಓರ್ವ ಸಿಡಿಸಿರುವ ಗರಿಷ್ಠ ಸಿಕ್ಸರ್ ಗಳಾಗಿವೆ.

Seven sixes is the most hit by Rohit at the time of reaching 100.

ದ್ರಾವಿಡ್, ದಾಖಲೆ ಧೂಳಿಪಟ

ಅಂತೆಯೇ ರೋಹಿತ್ ಶರ್ಮಾಗೆ ಇದು 49 ನೇ ಅಂತರರಾಷ್ಟ್ರೀಯ ಶತಕವಾಗಿದ್ದು, ಆ ಮೂಲಕ ರೋಹಿತ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ರೋಹಿತ್, ವಿರಾಟ್ ಕೊಹ್ಲಿ (81) ಮತ್ತು ಸಚಿನ್ ತೆಂಡೂಲ್ಕರ್ (100) ನಂತರದ ಸ್ಥಾನದಲ್ಲಿದ್ದಾರೆ.

ಗೇಯ್ಲ್ ಸಿಕ್ಸರ್ ದಾಖಲೆಯೂ ಉಡೀಸ್

ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಒಟ್ಟು 7 ಸಿಕ್ಸರ್ ಸಿಡಿಸಿದ್ದು, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಕ್ರಿಸ್ ಗೇಲ್ ಅವರನ್ನೂ ಹಿಂದಿಕ್ಕಿದ್ದಾರೆ. ಭಾರತದ ನಾಯಕ ಇಂದಿನ 7 ಸಿಕ್ಸರ್ ಗಳ ಸೇರಿದಂತೆ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು ಒಟ್ಟು 332ಕ್ಕೆ ಏರಿಕೆ ಮಾಡಿಕೊಂಡಿದ್ದು, ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ 331 ಸಿಕ್ಸರ್‌ಗಳನ್ನು ಸಿಡಿಸಿದ್ದು, ಪಾಕಿಸ್ತಾನದ ಶಾಹಿದ್ ಅಫ್ರಿದಿ 351 ಏಕದಿನ ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com