
ನಾಗ್ಪುರ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಕಟಕ್‌ನಲ್ಲಿ ಉತ್ತಮ ಇನ್ನಿಂಗ್ಸ್ ಬರಲಿಲ್ಲ. ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದ್ದಾಗಲೂ ರಾಹುಲ್ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗದೇ ಕೇವಲ 10 ರನ್ ಗಳಿಸಿ ಔಟಾದರು. ನಾಗ್ಪುರ ಮತ್ತು ಕಟಕ್‌ನಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ವಿಫಲ ಕುರಿತಂತೆ ಅಭಿಮಾನಿಗಳು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಎಲ್ಲಾ ತಪ್ಪಿಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನೇ ಹೊಣೆ ಮಾಡಿದ್ದಾರೆ. ಮುಖ್ಯ ತರಬೇತುದಾರರ ಬುದ್ಧಿಹೀನ ಪ್ರಯೋಗದಿಂದಾಗಿ ಕೆಎಲ್ ರಾಹುಲ್ ವಿಫಲರಾಗುತ್ತಿದ್ದು ಅವರು ಸಂಪೂರ್ಣವಾಗಿ ಬ್ಯಾಟಿಂಗ್ ಲಯ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಎಲ್ ರಾಹುಲ್ ವೈಫಲ್ಯಕ್ಕೆ ಗಂಭೀರ್ ಕಾರಣನಾ?
ಎರಡೂ ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಕಳುಹಿಸಿರುವುದಕ್ಕೆ ಶ್ರೀಕಾಂತ್ ತೆಗಳಿದ್ದಾರೆ. 'ಕೆಎಲ್ ರಾಹುಲ್ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ಅಕ್ಷರ್ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ರಾಹುಲ್ ಜೊತೆ ಅವರು ಮಾಡುತ್ತಿರುವುದು ಸರಿಯಲ್ಲ. ಅವರ ದಾಖಲೆಯನ್ನು ನೋಡಿ, ಅವರು 5ನೇ ಸ್ಥಾನದಲ್ಲಿ ಅತ್ಯುತ್ತಮರು. ಅವರ ಅಂಕಿಅಂಶಗಳು ಅನೇಕ ಆಟಗಾರರಿಗಿಂತ ಉತ್ತಮವಾಗಿವೆ. ಆದರೆ ತಂಡದ ಆಡಳಿತ ಮಂಡಳಿ ಅವರ ಮೇಲೆ ಏನು ಪ್ರಯೋಗ ಮಾಡುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಅವರಿಗೆ ಐದನೇ ಸ್ಥಾನದಲ್ಲಿ ಅವಕಾಶ ನೀಡುವ ಬದಲು, ಆರನೇ ಸ್ಥಾನದಲ್ಲಿ ಆಡುವಂತೆ ಮಾಡಲಾಗುತ್ತಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಗಂಭೀರ್ ವಿರುದ್ಧ ನೇರ ಆರೋಪ
ಗೌತಮ್ ಗಂಭೀರ್ ಅವರ ಹೆಸರನ್ನು ಉಲ್ಲೇಖಿಸಿ, ಶ್ರೀಕಾಂತ್ ಅವರು ಮಾಡುತ್ತಿರುವುದು ಸಂಪೂರ್ಣವಾಗಿ ಸರಿಯಲ್ಲ ಎಂದು ಹೇಳಿದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೆ. ಅದು ತಂಡಕ್ಕೆ ಸರಿಯಲ್ಲ. ಟಾಪ್ 4ರಲ್ಲಿ ನಿಮಗೆ ಎಡ-ಬಲ ಸಂಯೋಜನೆ ಬೇಕು. ಆದರೆ ಅದರ ನಂತರ ಈ ತಂತ್ರ ತಪ್ಪಾಗಿದೆ ಎಂದು ಶ್ರೀಕಾಂತ್ ಹೇಳಿದರು. ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾದರೆ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು ಎಂದು ಶ್ರೀಕಾಂತ್ ಹೇಳಿದರು. ರಾಹುಲ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
Advertisement