ಸಚಿನ್ Record ಉಡೀಸ್: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಧೂಳಿಪಟ ಮಾಡಿದ Virat Kohli!

ವಿರಾಟ್ ಕೊಹ್ಲಿ ಏಷ್ಯಾದ ಎಲ್ಲಾ ಸ್ವರೂಪಗಳಲ್ಲಿ 16000 ರನ್ ಗಳಿಸಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Virat Kohli
ವಿರಾಟ್ ಕೊಹ್ಲಿ
Updated on

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾದ ಎಲ್ಲಾ ಸ್ವರೂಪಗಳಲ್ಲಿ 16000 ರನ್ ಗಳಿಸಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ, ಕಿಂಗ್ ಕೊಹ್ಲಿ ಏಷ್ಯನ್ ಕ್ರಿಕೆಟ್‌ನಲ್ಲಿ 16000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾದಲ್ಲಿ 16000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್

340 ಇನ್ನಿಂಗ್ಸ್ - ವಿರಾಟ್ ಕೊಹ್ಲಿ

353 ಇನ್ನಿಂಗ್ಸ್ - ಸಚಿನ್ ತೆಂಡೂಲ್ಕರ್

360 ಇನ್ನಿಂಗ್ಸ್ - ಕುಮಾರ್ ಸಂಗಕ್ಕಾರ

401 ಇನ್ನಿಂಗ್ಸ್ - ಮಹೇಲ ಜಯವರ್ಧನೆ

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕೊಹ್ಲಿ

ವಿರಾಟ್ ಕೊಹ್ಲಿ ಬಹಳ ದಿನಗಳಿಂದ ಕಳಪೆ ಫಾರ್ಮ್‌ನಲ್ಲಿದ್ದರು. ಭಾರತ vs ಇಂಗ್ಲೆಂಡ್ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ತಮ್ಮ 73ನೇ ಏಕದಿನ ಅರ್ಧಶತಕ ಗಳಿಸಿದರು. ಕೊಹ್ಲಿ 55 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಈ ಮೂಲಕ ಅವರು ಏಷ್ಯಾದಲ್ಲಿ ಎಲ್ಲಾ ಸ್ವರೂಪಗಳಲ್ಲಿ 16025 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ ತೆಂಡೂಲ್ಕರ್ ಏಷ್ಯಾದಲ್ಲಿ 353 ಇನ್ನಿಂಗ್ಸ್‌ಗಳಲ್ಲಿ 16000 ಅಂತಾರಾಷ್ಟ್ರೀಯ ರನ್ ಗಳಿಸಿದ್ದರು. ಆದರೆ ಕೊಹ್ಲಿ ಕೇವಲ 340 ಇನ್ನಿಂಗ್ಸ್‌ಗಳಲ್ಲೇ ಈ ದಾಖಲೆ ಬರೆದಿದ್ದಾರೆ. ಕೊಹ್ಲಿ ಈಗ ಏಷ್ಯಾದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

Virat Kohli
3rd ODI: ಗಿಲ್ ಸ್ಫೋಟಕ ಶತಕ; ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ; ಸರಣಿ ವೈಟ್‌ವಾಶ್ ಮಾಡಿದ ರೋಹಿತ್ ಪಡೆ!

ಇಷ್ಟೇ ಅಲ್ಲ, 52 ರನ್‌ಗಳ ಇನ್ನಿಂಗ್ಸ್‌ನಲ್ಲಿ, ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್ ಗಳಿಸಿದ ಮೊದಲ ಭಾರತೀಯ ಮತ್ತು ಒಟ್ಟಾರೆಯಾಗಿ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಇಂಗ್ಲೆಂಡ್ ವಿರುದ್ಧ 41.23 ಸರಾಸರಿಯಲ್ಲಿ ಎಂಟು ಶತಕಗಳು ಮತ್ತು 23 ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com