Champions Trophy 2025: ಭಾರತವನ್ನು ಸೋಲಿಸೋದು ಮುಖ್ಯವಲ್ಲ! ಪಾಕಿಸ್ತಾನ ಉಪ-ನಾಯಕನ ಅಚ್ಚರಿಯ ಹೇಳಿಕೆ

ಭಾರತವನ್ನು ಸೋಲಿಸುವುದು ಮುಖ್ಯವೇ ಅಥವಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮುಖ್ಯವೇ ಎಂದು ಕೇಳಿದ ಪ್ರಶ್ನೆಗೆ ಆಘಾ ಸಲ್ಮಾನ್ ಉತ್ತರಿಸಿದ್ದಾರೆ.
ಪಿಸಿಬಿ ಪಾಡ್‌ಕಾಸ್ಟ್‌ನಲ್ಲಿ ಅಘಾ ಸಲ್ಮಾನ್
ಪಿಸಿಬಿ ಪಾಡ್‌ಕಾಸ್ಟ್‌ನಲ್ಲಿ ಅಘಾ ಸಲ್ಮಾನ್
Updated on

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದ್ದು. ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ಫೆಬ್ರುವರಿ 23 ರಂದು ದುಬೈನಲ್ಲಿ ಸೆಣಸಲಿವೆ.

ಉಭಯ ದೇಶಗಳ ಕ್ರಿಕೆಟ್ ಪ್ರೇಮಿಗಳಿಗೆ ಇದು ಕೇವಲ ಪಂದ್ಯ ಮಾತ್ರವಲ್ಲ, ಅದೊಂದು ಭಾವನಾತ್ಮಕ ವಿಚಾರ. ಈ ಪಂದ್ಯದ ಮಹತ್ವದ ಬಗ್ಗೆ ಪಾಕಿಸ್ತಾನದ ಉಪನಾಯಕ ಅಘಾ ಸಲ್ಮಾನ್ ಅವರನ್ನು ಕೇಳಿದಾಗ, ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವು ಸಾಧಿಸುವುದಕ್ಕಿಂತ ಕೇವಲ ಒಂದು ಪಂದ್ಯದಲ್ಲಿ ಭಾರತವನ್ನು ಸೋಲಿಸುವುದು ಮುಖ್ಯವಲ್ಲ ಎಂದಿದ್ದಾರೆ.

'ನಾನು ಚಾಂಪಿಯನ್ಸ್ ಟ್ರೋಫಿಗಾಗಿ ಉತ್ಸುಕನಾಗಿದ್ದೇನೆ. ಏಕೆಂದರೆ, ಪಾಕಿಸ್ತಾನವು ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುವುದು ವಿಶೇಷವಾಗಿದೆ. ಲಾಹೋರ್‌ನವನಾಗಿದ್ದು, ನನ್ನ ತವರಿನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯುವುದು ನನ್ನ ಕನಸಾಗಿದೆ. ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಾಮರ್ಥ್ಯವಿದೆ' ಎಂದು ಪಿಸಿಬಿ ಪಾಡ್‌ಕಾಸ್ಟ್‌ನಲ್ಲಿನ ಚಾಟ್‌ನಲ್ಲಿ ಸಲ್ಮಾನ್ ಹೇಳಿದ್ದಾರೆ.

'ಭಾರತ-ಪಾಕಿಸ್ತಾನ ಪಂದ್ಯದ ವಾತಾವರಣವು ತುಂಬಾ ವಿಭಿನ್ನವಾಗಿದೆ. ಹಲವರು ಹೇಳುವಂತೆ ಇದು ವಿಶ್ವದ ಅತಿದೊಡ್ಡ ಆಟವಾಗಿದೆ. ಆದರೆ, ನಿಜವಾದ ವಿಷಯವೆಂದರೆ ಅದು ಕೇವಲ ಒಂದು ಪಂದ್ಯವಾಗಿದೆ. ಆ ಒಂದು ಪಂದ್ಯವನ್ನು ಗೆಲ್ಲುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವುದು ಹೆಚ್ಚು ಮುಖ್ಯವಾಗಿದೆ' ಎಂದು ಹೇಳಿದರು.

ಪಿಸಿಬಿ ಪಾಡ್‌ಕಾಸ್ಟ್‌ನಲ್ಲಿ ಅಘಾ ಸಲ್ಮಾನ್
ICC Champions Trophy 2025: ವಿಜೇತ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು? ಇಲ್ಲಿದೆ ಮಾಹಿತಿ...

ಚಾಂಪಿಯನ್ಸ್ ಟ್ರೋಫಿಯಲ್ಲಿ ಟ್ರೋಫಿ ಗೆಲ್ಲುವವರೆಗೆ ತಂಡಕ್ಕೆ ಸಲ್ಮಾನ್ ಅವರು ತಮ್ಮ ಕೈಲಾದಷ್ಟು ಮತ್ತು ಭಾರತವನ್ನು ಸೋಲಿಸುವಲ್ಲಿ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಆದರೆ, ನಾವೆಲ್ಲರೂ ಭಾರತ ವಿರುದ್ಧದ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ ಮತ್ತು ನಾವು ಗೆಲ್ಲಲು ಪ್ರಯತ್ನಿಸುತ್ತೇವೆ. ಭಾರತ ತಂಡದ ವಿರುದ್ಧ ನಾನು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದು ಸಲ್ಮಾನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com