
ವಡೋದರ: ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿ ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ವಡೋದರಾದ ಅಂತಾರಾಷ್ಟೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಿದ ಆರ್ ಸಿಬಿ 8 ವಿಕೆಟ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ ತಂಡದ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸಲು ಹರಸಾಹಸಪಟ್ಟ ಡೆಲ್ಲಿ ತಂಡ 19.3 ಓವರ್ ಗಳಲ್ಲಿ 141 ರನ್ ಗಳಿಗೆ ಸರ್ವಪತನ ಕಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ 34 (22) ರನ್, ಸಾರಾ ಬ್ರೈಸ್ 23 (19) ರನ್, ಅನ್ನಾಬೆಲ್ ಸದರ್ಲ್ಯಾಂಡ್ 19 (13) ರನ್ ಗಳಿಸಿದರು.
ಸಾಧಾರಣ ರನ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಪರ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 81 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಉಳಿದಂತೆ ಡ್ಯಾನಿ ವ್ಯಾಟ್-ಹಾಡ್ಜ್ 33 ಎಸೆತಗಳಲ್ಲಿ 42 ರನ್ ಗಳಿಸಿದರೆ, ರಿಚಾ ಘೋಶ್ 5 ಎಸೆತಗಳಲ್ಲಿ 11 ರನ್ ಗಳಿಸಿದರು.
ಬೌಲಿಂಗ್ ವಿಭಾಗದಲ್ಲಿ 24 ರನ್ ನೀಡಿ 3 ವಿಕೆಟ್ ಗಳಿಸಿದ ರೇಣುಕಾ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement