Champions Trophy 2025: ಗಿಲ್ ಅಬ್ಬರ, ಶಮಿ ಮ್ಯಾಜಿಕ್; ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ!

ಈ ಪಂದ್ಯದಲ್ಲಿ ಶುಭ್ಮನ್ ಗಿಲ್ 101 (129 ಎಸೆತ) ತಮ್ಮ 8 ನೇ ಒಡಿಐ ಶತಕ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗಿಲ್ ಗೆ ಕೆಎಲ್ ರಾಹುಲ್ (41 ರನ್) ಸಾಥ್ ನೀಡಿದರು.
Shubhman gill
ಶುಭ್ಮನ್ ಗಿಲ್online desk
Updated on

ದುಬೈ ನಲ್ಲಿ ನಡೆದ ಭಾರತ- ಬಾಂಗ್ಲಾದೇಶದ ನಡುವಿನ 2 ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿನಲ್ಲಿ ಭಾರತ 6 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, 49.4 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 228 ರನ್ ಗಳಿಸಿತು. ಭಾರತ ಈ ಗುರಿಯನ್ನು ಕೇವಲ 46.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ 6 ವಿಕೆಟ್ ಗಳ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಶುಭ್ಮನ್ ಗಿಲ್ 101 (129 ಎಸೆತ) ತಮ್ಮ 8 ನೇ ಒಡಿಐ ಶತಕ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗಿಲ್ ಗೆ ಕೆಎಲ್ ರಾಹುಲ್ (41 ರನ್) ಸಾಥ್ ನೀಡಿದರು.

Shubhman gill
ICC Champions Trophy 2025: ದಾಖಲೆ ಬರೆದ Mohammed Shami; ಈ ಸಾಧನೆ ಮಾಡಿದ ಮೊದಲ ವೇಗಿ!

ಬಾಂಗ್ಲಾದೇಶದ ಪರ ತೌಹಿದ್‌ ಹೃದಾಯ್‌ 100 ರನ್ (118 ಎಸೆತ) ಹಾಗೂ ಜಾಕರ್ ಅಲಿ 68 ರನ್ (114 ಎಸೆತಗಳು). ಹೆಚ್ಚು ರನ್ ಗಳಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಷಿತ್ ರಾಣಾ 3 ವಿಕೆಟ್ ಮತ್ತು ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com