
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯ 2ನೇ ಪಂದ್ಯದಲ್ಲಿ ಭಾರತದ ಬೌಲಿಂಗ್ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರಿಸಿ ಹೋಗಿದ್ದು, 2 ಕಳಪೆ ದಾಖಲೆಗೆ ಪಾತ್ರವಾಗಿದೆ.
ಹೌದು.. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಬಾಂಗ್ಲಾದೇಶ ಭಾರತಕ್ಕೆ ಸವಾಲಿನ ಗುರಿ ನೀಡುವ ಹುಮ್ಮಸ್ಸಿನಲ್ಲಿತ್ತು. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆಯ ಕರಾರುವಕ್ಕಾದ ದಾಳಿಯಿಂದಾಗಿ ಭಾರತ ಮೇಲುಗೈ ಸಾಧಿಸಿದೆ.
ಕೇವಲ 35 ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಅರ್ಧಶತಕದ ಹೊಸ್ತಿಲಲ್ಲಿರುವ ತೌಹೀದ್ ಹೃದೋಯ್ (48ರನ್) ಮತ್ತು ಜೇಕರ್ ಅಲಿ (49 ರನ್) ಬಾಂಗ್ಲಾದೇಶಕ್ಕೆ ನೆರವಾಗಿ ನಿಂತಿದ್ದಾರೆ.
ಭಾರತದ ಬೌಲಿಂಗ್ ಆರ್ಭಟ
ಇನ್ನು ಈ ಪಂದ್ಯದಲ್ಲಿ ಭಾರತದ ಪರ ಮಹಮದ್ ಶಮಿ ಮತ್ತು ಅಕ್ಸರ್ ಪಟೇಲ್ ಅಕ್ಷರಶಃ ವಿಜೃಂಭಿಸಿದರು. ಶಮಿ 2 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಕೂಡ 2 ವಿಕೆಟ್ ಪಡೆದರು. ಉದಯೋನ್ಮುಖ ಆಟಗಾರ ಹರ್ಷಿತ್ ರಾಣ 1 ವಿಕೆಟ್ ಪಡೆದರು.
ಕಳಪೆ ದಾಖಲೆ ನಿರ್ಮಾಣ!
ಇನ್ನು ಇಂದಿನ ಕಳಪೆ ಬ್ಯಾಟಿಂಗ್ ಮೂಲಕ ಬಾಂಗ್ಲಾದೇಶ 2 ಕಳಪೆ ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಐಸಿಸಿ ಏಕದಿನ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಬಾಂಗ್ಲಾದೇಶ ಮೊದಲ 10 ಓವರ್ ನಲ್ಲಿ 4ನೇ ಕಳಪೆ ರನ್ ದಾಖಲೆ ನಿರ್ಮಿಸಿದೆ. ವಿಕೆಟ್ ಮತ್ತು ರನ್ ಗಳ ಲೆಕ್ಕಾಚಾರದಲ್ಲಿ ಬಾಂಗ್ಲಾದೇಶದ ಇಂದಿನ ಪಂದ್ಯದ ನಾಲ್ಕನೇ ಸ್ಥಾನ ಪಡೆದಿದೆ. ಈ ಹಿಂದೆ 2002ರಲ್ಲಿ ಕೊಲಂಬೋದಲ್ಲಿ ಮೊದಲ 10 ಓವರ್ ನಲ್ಲಿ ಇದೇ ಬಾಂಗ್ಲಾದೇಶ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 44 ರನ್ ಕಲೆಹಾಕಿತ್ತು.
Most wickets lost in first 10 overs in Champions Trophy games
44/6 Ban vs NZ Colombo SSC 2002
27/6 Pak vs SA Mohali 2006
26/5 Ban vs WI Southampton 2004
39/5 Ban vs Ind Dubai 2025
ಶಮಿ ದಾಖಲೆ
ಇನ್ನು 2015ರ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಮಹಮದ್ ಶಮಿ 2ನೇ ಸ್ಥಾನಕ್ಕೇರಿದ್ದಾರೆ. ಅವರು ಒಟ್ಟು 20 ವಿಕೆಟ್ ಪಡೆದಿದ್ದು, 26 ವಿಕೆಟ್ ಪಡೆದಿರುವ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದಾರೆ.
Most Powerplay wickets in WC & CT since 2015 (SR)
26 Trent Boult (33.6)
20 Mohammed Shami (19.8)
19 Mitchell Starc (32.8)
14 Chris Woakes (40.2)
13 Josh Hazlewood (38.3)
Advertisement