
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈಗೆ 168 ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಇನ್ನು ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ನ್ಯಾಟ್ ಸ್ಕಿವರ್-ಬ್ರಂಟ್ 42, ಹರ್ಮನ್‌ಪ್ರೀತ್ ಕೌರ್ 50 ರನ್ ಬಾರಿಸಿ ಔಟಾದರು. ಅಂತಿಮವಾಗಿ ಅಮನ್‌ಜೋತ್ ಕೌರ್ ಅಜೇಯ 34 ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರ್‌ಸಿಬಿ ಪರ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಜೋಡಿ ಮೈದಾನಕ್ಕಿಳಿಯಿತು. ಈ ಜೋಡಿ ಮೊದಲ ವಿಕೆಟ್‌ಗೆ 29 ರನ್‌ಗಳ ಜೊತೆಯಾಟವಾಡಿತು. ಸ್ಮೃತಿ ಮಂಧಾನ 13 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಔಟಾದರು. ಡೇನಿಯಲ್ 9 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರ್ರಿ ಅತಿ ಹೆಚ್ಚು ರನ್ ಗಳಿಸಿದರು. 43 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 81 ರನ್ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ಆರು ಬೌಲರ್‌ಗಳಲ್ಲಿ.. ಅಮನ್‌ಜೋತ್ ಕೌರ್ 3 ವಿಕೆಟ್ ಪಡೆದರು. ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸಿವರ್ ಬ್ರಂಟ್, ಹಿಲ್ಲಿ ಮ್ಯಾಥ್ಯೂಸ್ ಮತ್ತು ಸಂಸ್ಕೃತ ಗುಪ್ತಾ ತಲಾ ಒಂದು ವಿಕೆಟ್ ಪಡೆದರು.
Advertisement