
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಸೋಲುವ ಮೂಲಕ ಭಾರತ ತಂಡ ಅಪರೂಪದ ದಾಖಲೆಗೆ ಪಾತ್ರವಾಗಿದ್ದು, ನೆದರ್ಲೆಂಡ್ ದಾಖಲೆ ಹಿಂದಿಕ್ಕಿದೆ.
ಹೌದು.. ಇಂದು ದುಬೈನ ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. 49.4 ಓವರ್ ನಲ್ಲಿ ಪಾಕಿಸ್ತಾನ 241 ರನ್ ಗಳಿಗೆ ಆಲೌಟ್ ಆಯಿತು. ಅಂತೆಯೇ ಭಾರತಕ್ಕೆ ಗೆಲ್ಲಲು 242 ರನ್ ಗುರಿ ನೀಡಿದೆ.
ಟಾಸ್ ಸೋಲಿನಲ್ಲೂ ಭಾರತ ದಾಖಲೆ
ಇನ್ನು ಇಂದಿನ ಪಂದ್ಯದ ಟಾಸ್ ಸೋಲಿನ ಮೂಲಕ ಭಾರತ ತಂಡ ಅಪರೂಪದ ದಾಖಲೆಗೆ ಪಾತ್ರವಾಗಿದೆ. ಐಸಿಸಿ ಟೂರ್ನಿಗಳಲ್ಲಿ ಅತೀ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ದಾಖಲೆಗೆ ಭಾರತ ಪಾತ್ರವಾಗಿದೆ.
ಇಂದಿನ ಪಾಕಿಸ್ತಾನ ವಿರುದ್ಧದ ಪಂದ್ಯವೂ ಸೇರಿದಂತೆ 2023ರ ವಿಶ್ವಕಪ್ ಫೈನಲ್ ನಂತರದ ಐಸಿಸಿ ಟೂರ್ನಿಗಳಲ್ಲಿ ಭಾರತ ಸತತ 12 ಬಾರಿ ಟಾಸ್ ಸೋತಿದೆ. ಇದಕ್ಕೂ ಮೊದಲು ನೆದರ್ಲೆಂಡ್ ತಂಡ 11 ಟಾಸ್ ಸೋತು ದಾಖಲೆ ನಿರ್ಮಿಸಿತ್ತು. ಮಾರ್ಚ್ 2011ರ ಮಾರ್ಚ್ ನಿಂದ 2013ರ ಆಗಸ್ಟ್ ವರೆಗೆ ನೆದರ್ಲೆಂಡ್ ಒಟ್ಟು 11 ಪಂದ್ಯಗಳಲ್ಲಿ ಟಾಸ್ ಸೋತಿತ್ತು.
Advertisement