
ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಉತ್ತರ ಪ್ರದೇಶ ಮಹಿಳಾ ತಂಡದ ವಿರುದ್ಧ ಆರ್ ಸಿಬಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 181 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಅರ್ಧಶತಕ ಸಿಡಿಸಿದ್ದು ತಂಡ ಬೃಹತ್ ಮೊತ್ತ ಕಲೆಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ 6 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ 94 ರನ್ ಗಳ ಜೊತೆಯಾಟವಾಡಿದರು. ಡ್ಯಾನಿ 57 ರನ್ ಗಳಿಸಿ ಔಟಾದರು. ಆದರೆ ಎಲ್ಲಿಸ್ ಪೆರ್ರಿ 55 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿ ಸೇರಿದಂತೆ ಅಜೇಯ 90 ರನ್ ಕಲೆಹಾಕಿದರು.
ಉತ್ತರ ಪ್ರದೇಶ ವಾರಿಯರ್ಸ್ ಪರ ಬೌಲಿಂಗ್ ನಲ್ಲಿ ಹೆನ್ರಿ, ದೀಪ್ತಿ ಶರ್ಮಾ ಮತ್ತು ತಹ್ಲಿಯಾ ಮೆಕ್‌ಗ್ರಾತ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
Advertisement