
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದ ಭಾರತ ಅರ್ಹವಾಗಿಯೇ ಸೆಮೀಸ್ ಗೆ ಲಗ್ಗೆ ಇಟ್ಟಿದೆ. ಆದರೆ ಭಾರತದ ಗೆಲುವನ್ನು ಜೀರ್ಣಿಸಿಕೊಳ್ಳಲಾಗದ ಪಾಕಿಸ್ತಾನ ಮಾಧ್ಯಮಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿವೆ.
ಹೌದು.. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕಳಪೆ ಬ್ಯಾಟಿಂಗ್ ಮಾಡಿ ಕೇವಲ 241 ರನ್ಗಳನ್ನು ಮಾತ್ರ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಭಾರತ ಕೇವಲ 42.3 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತ್ತು.
ಟೀಮ್ ಇಂಡಿಯಾದ ಈ ಭರ್ಜರಿ ಗೆಲುವಿನ ಬಳಿಕ ಪಾಕಿಸ್ತಾನದ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿದ್ದು, ಒಂದು ಮಾಧ್ಯಮವಂತೂ ಭಾರತ ತನ್ನ ಗೆಲುವಿಗಾಗಿ ಮಾಟ-ಮಂತ್ರದ ಮೊರೆ ಹೋಗಿತ್ತು ಎಂದು ಗಂಭೀರ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದೆ. ಡಿಸ್ಕವರ್ ಪಾಕಿಸ್ತಾನ ಎಂಬ ಚಾನೆಲ್ ನಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಪ್ಯಾನಲಿಸ್ಟ್ ಓರ್ವ ಲೈವ್ ನಲ್ಲಿಯೇ ಇಂತಹ ಗಂಭೀರ ಆರೋಪ ಮಾಡಿದ್ದಾನೆ.
'ಭಾರತವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 22 ಹಿಂದೂ ಪುರೋಹಿತರನ್ನು (ಪಂಡಿತರು) ಕರೆತಂದು ಮಾಟಮಂತ್ರ ಮಾಡಿಸಿದೆ. ಮಾಟ ಮಂತ್ರ ಮಾಡಲೆಂದೇ ಅವರನ್ನು ಕರೆಸಿದೆ. ಇದರಿಂದ ಪಾಕಿಸ್ತಾನ ಆಟಗಾರರ ಗಮನವನ್ನು ಬೇರೆಡೆಗೆ ಸೆಳೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮತ್ತೋರ್ವ ಪ್ಯಾನೆಲಿಸ್ಟ್ ಭಾರತ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಲು ಇದೇ ಕಾರಣ ಎಂದೂ ಆರೋಪಿಸಿದ್ದಾನೆ. ಅಲ್ಲದೆ ಪಂದ್ಯಕ್ಕೂ ಮುನ್ನ ಪೂಜೆ ಮಾಡಬೇಕಿತ್ತು. ಪಾಕಿಸ್ತಾನದಲ್ಲಿ ಪಂದ್ಯ ನಡೆದಿದ್ದರೆ, ಅದು ಸಾಧ್ಯವಿಲ್ಲ. ಹೀಗಾಗಿ ಭಾರತ ಬೇಕೆಂದೇ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸಿಕೊಂಡಿದೆ. ದುಬೈನಲ್ಲಿ ನಡೆದ ಪಂದ್ಯಕ್ಕೂ ಮುನ್ನ ದಿನ ಏಳು ಪುರೋಹಿತರು ಮೈದಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಪಾಕಿಸ್ತಾನ ಮಾಧ್ಯಮದ ಚರ್ಚೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಕ್ಷುಲ್ಲಕ ಆರೋಪ ಇದೇ ಮೊದಲೇನಲ್ಲ..
ಇನ್ನು ಕುಣಿಯಲಾರದವರು ನೆಲ ಡೊಂಕು ಎಂದರಂತೆ ಎನ್ನುವ ಗಾದೆ ಮಾತಿನಂತೆ ಪಂದ್ಯ ಗೆಲ್ಲಲಾಗದೇ ಹತಾಶ ಮನಸ್ಥಿತಿಯ ಪಾಕ್ ಮಾಧ್ಯಮಗಳು ಇಂತಹ ಆರೋಪಗಳ ಮಾಡುತ್ತಾ ಬಂದಿದೆ. ಈ ಹಿಂದೆ ಸಾಕಷ್ಟು ಬಾರಿ ಇಂತಹ ಆರೋಪಗಳ ಮಾಡಿವೆ.
ಕಳೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾಗೆ ಐಸಿಸಿ ವಿಶೇಷ ಚೆಂಡುಗಳನ್ನು ನೀಡುತ್ತಿದೆ. ಹೀಗಾಗಿ ಭಾರತೀಯ ಬೌಲರ್ಗಳು ಯಶಸ್ಸು ಗಳಿಸುತ್ತಿದ್ದಾರೆ ಎಂದು ಪಾಕ್ ತಂಡದ ಮಾಜಿ ಆಟಗಾರ ಹಸನ್ ರಾಜಾ ಲೈವ್ ಚರ್ಚೆಯಲ್ಲಿ ಆರೋಪಿಸಿದ್ದರು. ಅವರ ಆರೋಪಕ್ಕೆ ಪಾಕ್ ಮಾಜಿ ಕ್ರಿಕೆಟಿಗರೇ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ವಾಗ್ದಾಳಿ ನಡೆಸಿದ್ದ
Advertisement