
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ನ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದ್ದು, ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್ ಆಜಂರನ್ನು ಫ್ರಾಡ್ (ಮೋಸಗಾರ) ಎಂದು ಮಾಜಿ ವೇಗಿ ಶೊಯೆಬ್ ಅಖ್ತರ್ ಟೀಕಿಸಿದ್ದಾರೆ.
ಪಾಕಿಸ್ತಾನ ಸತತ ಮೂರು ವರ್ಷಗಳ ಕಾಲ ಕಷ್ಟ ಪಟ್ಟು ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ತನ್ನ ದೇಶದಲ್ಲಿ ಅದಾವ ಪುರುಷಾರ್ಥಕ್ಕೆ ಆಯೋಜಿಸಿತೋ ತಿಳಿಯುತ್ತಿಲ್ಲ. ಸುಮಾರು 6 ತಿಂಗಳ ಕಾಲ ಕಷ್ಟಪಟ್ಟು ತನ್ನ ಎಲ್ಲ ಕ್ರಿಕೆಟ್ ಮೈದಾನಗಳನ್ನು ಮೇಲ್ಗರ್ಜೆಗೇರಿಸಿತು.
ಆದರೆ ತನ್ನದೇ ತಂಡ ಟೂರ್ನಿ ಆಯೋಜನೆಯಾದ ಐದೇ ದಿನಗಳಲ್ಲಿ ಟೂರ್ನಿಯಿಂದ ಹೊರಬಿತ್ತು. ಅಲ್ಲದೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಇತ್ತೀಚಿನ ಸೋಲು ದೊಡ್ಡ ಸವಾಲನ್ನೇ ಸೃಷ್ಟಿಸಿದ್ದು, 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಪಾಕಿಸ್ತಾನ ಭಾರತ ವಿರುದ್ಧ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ.
ಭಾನುವಾರದ ಸೋಲಿನೊಂದಿಗೆ, ಪಾಕಿಸ್ತಾನವು ಅವರು ಆಯೋಜಿಸುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ರ ಪಂದ್ಯಾವಳಿಯಿಂದ ಗುಂಪು ಹಂತದಿಂದಲೇ ಹೊರಗುಳಿಯುವ ಅಪಾಯದಲ್ಲಿದೆ.
ಈ ನಡುವೆ ಪಾಕಿಸ್ತಾನ ತಂಡದ ಈ ಹೀನಾಯ ಪ್ರದರ್ಶನಕ್ಕೆ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ರನ್ನ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತಿದ್ದು, ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಟೀಕಾಪ್ರಹಾರವನ್ನೇ ನಡೆಸಿದ್ದಾರೆ.
ಮೊದಲಿನಿಂದಲೂ ನೀನು ಫ್ರಾಡೇ: ಶೊಯೆಬ್ ಅಖ್ತರ್
ಇನ್ನು ಪಾಕಿಸ್ತಾನ ತಂಡದ ಇತ್ತೀಚಿನ ವೈಫಲ್ಯದ ಕುರಿತು ಪಿಟಿವಿ ಜೊತೆ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕ್ ಸ್ಟಾರ್ ಆಟಗಾರ ಬಾಬರ್ ಅಜಮ್ ಅವರನ್ನು ತೀವ್ರವಾಗಿ ಟೀಕಿಸಿದರು. ವಿರಾಟ್ ಕೊಹ್ಲಿಯ ಉದಾಹರಣೆಯನ್ನು ನೀಡಿದ ಅಖ್ತರ್, 'ವಿರಾಟ್ ಕೊಹ್ಲಿಯನ್ನು ಸ್ವಲ್ಪ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸೋಣ. ಈಗ ಹೇಳಿ, ವಿರಾಟ್ ಕೊಹ್ಲಿಯ ಸ್ಪೂರ್ತಿ ಯಾರು? ಸಚಿನ್ ತೆಂಡೂಲ್ಕರ್.. ಸಚಿನ್ 100 ಶತಕಗಳನ್ನು ಗಳಿಸಿದ್ದಾರೆ ಮತ್ತು ವಿರಾಟ್ ಅವರ ಪರಂಪರೆಯನ್ನು ಬೆನ್ನಟ್ಟುತ್ತಿದ್ದಾರೆ.. ಈಗಾಗಲೇ 80ಕ್ಕೂ ಅಧಿಕ ಶತಕಗಳನ್ನು ಸಿಡಿಸಿದ್ದಾರೆ ಎಂದರು.
ಅಂತೆಯೇ ಪಾಕಿಸ್ತಾನದ "ಬಾಬರ್ ಅಜಮ್ ಅವರ ಹೀರೋ ಯಾರು? ಟಕ್ ಟಕ್ (ಯಾವುದೇ ಕ್ರಿಕೆಟಿಗನ ಹೆಸರಿಸದೆ). ನೀವು ತಪ್ಪು ಹೀರೋಗಳನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಆಲೋಚನಾ ಪ್ರಕ್ರಿಯೆಯೇ ತಪ್ಪು. ನೀವು ಆರಂಭದಿಂದಲೂ ಮೋಸಗಾರರಾಗಿದ್ದಿರಿ. ನಿಮ್ಮನ್ನು ಆರಂಭದಿಂದಲೂ ಹಿಡಿಯಲಾಗಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೇ 'ನಾನು ಒಂದೂವರೆ ದಿನಗಳಿಗೆ ನಂಬರ್ 1 ಆಗಿದ್ದೇನೆ. ನೀವು ನಂಬರ್ 1 ಅಲ್ಲ. ನೀವು ತಪ್ಪು ಜನರನ್ನು ಪ್ರಚಾರ ಮಾಡಿದ್ದೀರಿ' ಎಂದು ನೀವು ಸ್ಪಷ್ಟಪಡಿಸಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.
Advertisement