
ನವದೆಹಲಿ: ಹಾರ್ದಿಕ್ ಪಾಂಡ್ಯಾ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಭಾರತದ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಪರಸ್ಪರ ಬೇರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರಿ ವರ್ಮಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹ ಹಲವು ದಿನಗಳಿಂದ ಸದ್ದು ಮಾಡುತ್ತಿದೆ.
ಈ ಇಬ್ಬರ ವಿಚ್ಛೇದನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರಿದಾಡುತ್ತಿರುವಂತೆಯೇ ಇತ್ತ ಇದಕ್ಕೆ ಇಂಬು ನೀಡುವಂತೆ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಚಹಲ್ ತಾವಿಬ್ಬರೂ ಜೊತೆಗಿದ್ದ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನೂ ಕೂಡ ಡಿಲೀಟ್ ಮಾಡಿದ್ದಾರೆ.
ಆದರೆ ಧನಶ್ರೀ ವರ್ಮಾ ಮಾತ್ರ ಚಹಲ್ರನ್ನ ಮಾತ್ರ ಅನ್ಫಾಲೋ ಮಾಡಿದ್ದರೂ ಸಧ್ಯಕ್ಕೆ ಯಾವುದೇ ಫೋಟೋಗಳನ್ನು ಡಿಲೀಟ್ ಮಾಡಿಲ್ಲ.
ಕೆಲವು ತಿಂಗಳ ಹಿಂದೆ ಧನಶ್ರೀ 2022ರಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ಚಹಲ್ ಹೆಸರನ್ನ ತೆಗೆದು ಹಾಕಿದ್ದರು. ಆಗಲೇ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಊಹಾಪೋಹಗಳಿ ಹಬ್ಬಿದ್ದವು. ಇದೀಗ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿಕೊಳ್ಳುವ ಮೂಲಕ ಈ ಊಹಾಪೋಹಗಳು ಮತ್ತಷ್ಟು ಸುದ್ದಿಗೆ ಗ್ರಾಸವಾಗುವಂತೆ ಮಾಡಿದ್ದಾರೆ.
ಅಂದಹಾಗೆ ಮುಂಬೈನ ದಂತವೈದ್ಯೆ ಹಾಗೂ ಕೊರಿಯೋಗ್ರಾಫರ್ ಆಗಿದ್ದ, ಧನಶ್ರೀ ಅವರ ಬಳಿ ಯುಜ್ವೇಂದ್ರ ಚಾಹಲ್ ಡ್ಯಾನ್ಸ್ ಕಲಿಯಲು ಹೋಗುತ್ತಿದ್ದರು. ಹೀಗಾಗಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಈ ಜೋಡಿ, ತಮ್ಮದೇ ವಿಡಿಯೋಗಳ ಮೂಲಕ ಅಭಿಮಾನಿಗಳ ಸೆಳೆಯುತ್ತಿತ್ತು.
ಆದರೆ ಕೆಲವು ದಿನಗಳಿಂದ ಕೆಲವು ವಿಚಿತ್ರ ಪೋಸ್ಟ್ಗಳ ಮೂಲಕ ಗೊಂದಲ ಮೂಡಿಸುತ್ತಿದ್ದರು. ಆ ಪೋಸ್ಟ್ಗಳು ಇಬ್ಬರ ನಡುವೆ ಸಂಬಂಧ ಸರಿಯಿಲ್ಲ, ಬೇರೆಯಾಗುವ ಸಾಧ್ಯತೆ ಇದೆ ಎಂಬ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಚಾಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಮಾಡಿದ ನಂತರ ಬಹುತೇಕ ಬೇರೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚಾಹಲ್ ಈ ಊಹಾಪೋಹವನ್ನು ತಳ್ಳಿ ಹಾಕಿದ್ದರು. ನಾವು ಬೇರೆಯಾಗುತ್ತಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ತಮ್ಮ ಇನ್ಸ್ಟಾಗ್ರಾಮ್ನಿಂದ ಪತ್ನಿಯ ಎಲ್ಲಾ ಫೋಟೋಗಳನ್ನ ಡಿಲೀಟ್ ಮಾಡುವ ಮೂಲಕ ಮತ್ತೆ ವಿಚ್ಛೇದನ ಚರ್ಚೆಗೆ ಪುಷ್ಟಿ ನೀಡಿದ್ದಾರೆ.
ಐಪಿಎಲ್ ನಲ್ಲಿ ಚಹಲ್
ಚಹಲ್ ಪ್ರಸ್ತುತ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಆದರೆ ಇತ್ತೀಚಿನ ಐಪಿಎಲ್ ಮೆಗಾ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ ಅವರನ್ನು 18 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಇದೀಗ ಚಹಲ್ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ.
Advertisement