
ಮುಂಬೈ: ಅಂಡರ್-19 (U-19) ವಿಭಾಗದ 50 ಓವರ್ ಗಳ One Day Trophy ಯಲ್ಲಿ ಮಹಿಳಾ ಕ್ರಿಕೆಟಿಗರೊಬ್ಬರು ಅಭೂತಪೂರ್ವ ದಾಖಲೆ ನಿರ್ಮಿಸಿದ್ದಾರೆ.
ಮಹಿಳಾ ಏಕದಿನ ಟ್ರೋಫಿಯಲ್ಲಿ ಮುಂಬೈನ ಯುವ ಬ್ಯಾಟರ್ 14 ವರ್ಷದ ಇರಾ ಜಾಧವ್ (Ira Jadhav) 50 ಓವರ್‌ಗಳ ಪಂದ್ಯಗಳಲ್ಲಿ ತ್ರಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿದ್ದು, 157 ಎಸೆತಗಳಲ್ಲಿ 346 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು. 42 ಬೌಂಡರಿ ಹಾಗೂ 16 ಸಿಕ್ಸರ್ ದಾಖಲಿಸಿದ್ದಾರೆ. ದಾಖಲೆ ನಿರ್ಮಿಸಿರುವ ಇರಾ ಜಾಧವ್ 220 ಸ್ಟ್ರೈಕ್ ರೇಟ್ ಹೊಂದಿರುವ ಇರಾ ಜಾಧವ್ 19 ವರ್ಷದೊಳಗಿನವರ ಏಕದಿನ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿ ಪಡೆದಿದ್ದಾರೆ.
ಇರಾ ಜಾಧವ್ ತ್ರಿಶತಕ ದಾಖಲಿಸುವ ಮೂಲಕ, 19 ವರ್ಷದೊಳಗಿನವರ ಏಕದಿನ ಟ್ರೋಫಿಯಲ್ಲಿ ಸ್ಮೃತಿ ಮಂಧಾನ ದಾಖಲೆಯನ್ನು ಮುರಿದಿದ್ದಾರೆ. ಸ್ಮೃತಿ ಮಂಧಾನ 224 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.
Advertisement