ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು; ವಿಚ್ಛೇದನದ ವದಂತಿ!

2004ರಲ್ಲಿ ವಿರೇಂದ್ರ ಸೆಹ್ವಾಗ್ ಅವರು ಆರತಿ ಅಹ್ಲಾವತ್‌ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ 2007ರಲ್ಲಿ ಆರ್ಯವೀರ್ ಮತ್ತು 2010ರಲ್ಲಿ ವೇದಾಂತ್ ಎಂಬ ಇಬ್ಬರು ಗಂಡುಮಕ್ಕಳು ಜನಿಸಿದ್ದಾರೆ.
ವಿರೇಂದ್ರ ಸೆಹ್ವಾಗ್ - ಪತ್ನಿ ಆರತಿ
ವಿರೇಂದ್ರ ಸೆಹ್ವಾಗ್ - ಪತ್ನಿ ಆರತಿ
Updated on

ಭಾರತ ಕ್ರಿಕೆಟ್‌ ತಂಡದ ಅತ್ಯಂತ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಅವರು ಸದ್ಯ ವ್ಯಾಪಕ ಸುದ್ದಿಯಲ್ಲಿದ್ದಾರೆ. ನಿವೃತ್ತ ಕ್ರಿಕೆಟಿಗನ ಬಾಳಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವರದಿಯೊಂದರ ಪ್ರಕಾರ, ಸೆಹ್ವಾಗ್ ಅವರಿಗೆ ಪತ್ನಿ ಆರತಿ ವಿಚ್ಛೇದನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

2004ರಲ್ಲಿ ವಿರೇಂದ್ರ ಸೆಹ್ವಾಗ್ ಅವರು ಆರತಿ ಅಹ್ಲಾವತ್‌ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ 2007ರಲ್ಲಿ ಆರ್ಯವೀರ್ ಮತ್ತು 2010ರಲ್ಲಿ ವೇದಾಂತ್ ಎಂಬ ಇಬ್ಬರು ಗಂಡುಮಕ್ಕಳು ಜನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ನಿ ಆರತಿ ತಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಹೊಸ ಫೋಟೊಗಳನ್ನು ಹಂಚಿಕೊಂಡಿಲ್ಲ. ಬದಲಿಗೆ ದಂಪತಿಯ ಹಳೆಯ ಫೋಟೊಗಳು ಮಾತ್ರ ಇವೆ. ಇನ್‌ಸ್ಟಾಗ್ರಾಂನಲ್ಲಿ ಮಾಜಿ ಕ್ರಿಕೆಟಿಗ ಆರತಿ ಅವರನ್ನು ಫಾಲೋ ಮಾಡುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ದಂಪತಿ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಊಹಾಪೋಹಗಳಿಗೆ ತುಪ್ಪ ಸುರಿದಿದೆ.

ಇತ್ತೀಚೆಗೆ, ಸೆಹ್ವಾಗ್ ತನ್ನ ಮಗನಿಗೆ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡುವ ಅವಕಾಶವನ್ನು ಕಳೆದುಕೊಂಡಿರುವುದನ್ನು ನೆನಪಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸೆಹ್ವಾಗ್ ಅವರ ಮಗ ಆರ್ಯವೀರ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಪರವಾಗಿ ಆಡಿದ್ದರು. ಈ ವೇಳೆ ಮೇಘಾಲಯ ವಿರುದ್ಧ ಕೇವಲ 309 ಎಸೆತಗಳಲ್ಲಿ 297 ರನ್ ಗಳಿಸಿದರು. ಸೆಹ್ವಾಗ್ ಅವರ ವೃತ್ತಿಜೀವನದ ಗರಿಷ್ಠ ಸ್ಕೋರ್ 319 ಕ್ಕಿಂತ ಆರ್ಯವೀರ್ ಕೇವಲ 23 ರನ್‌ಗಳಿಂದ ಹಿಂದೆ ಉಳಿದರು. ಇದರಿಂದಾಗಿ ಕಾರನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು.

'ಆರ್ಯವೀರ್ ಚೆನ್ನಾಗಿ ಆಡಿದರು. ಫೆರಾರಿಯನ್ನು ಕೇವಲ 23 ರನ್‌ಗಳಿಂದ ತಪ್ಪಿಸಿಕೊಂಡರು. ಆದರೆ ಚೆನ್ನಾಗಿ ಮಾಡಿದ್ದೀರಿ, ಈ ಫೈರ್ ಅನ್ನು ಜೀವಂತವಾಗಿರಿಸಿಕೊಳ್ಳಿ ಮತ್ತು ನೀವು ಇನ್ನೂ ನನಗಿಂತ ಹೆಚ್ಚಿನ ಶತಕಗಳು ಮತ್ತು ಡಬಲ್ಸ್ ಮತ್ತು ಟ್ರಿಪಲ್‌ಗಳನ್ನು ಗಳಿಸಲಿ' ಎಂದು ಸೆಹ್ವಾಗ್ 2024ರ ನವೆಂಬರ್‌ನಲ್ಲಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿರೇಂದ್ರ ಸೆಹ್ವಾಗ್ - ಪತ್ನಿ ಆರತಿ
ಕೂಚ್‌ ಬಿಹಾರ್‌ ಟ್ರೋಫಿ: 23 ರನ್‌ಗಳಿಂದ ಫೆರಾರಿ ಮಿಸ್; ಪುತ್ರನ ಬಗ್ಗೆ ವೀರೇಂದ್ರ ಸೆಹ್ವಾಗ್ ಪೋಸ್ಟ್ ವೈರಲ್

ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಹಲವು ತಿಂಗಳಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದ್ದು, ವಿಚ್ಛೇದನ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸೆಹ್ವಾಗ್ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. ಆರತಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ, ಇದೀಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವರದಿಗಳು ಓಡಾಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com