AB de Villiers ಆರ್‌ಸಿಬಿ ಪ್ರಾಂಚೈಸಿಗಾಗಿ ಆಡಿದ್ದು ತಪ್ಪಾಯ್ತು; ಬೇರೆ ತಂಡಕ್ಕಾಗಿ ಆಡಬೇಕಿತ್ತು!

ಇದೀಗ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಡಿವಿಲಿಯರ್ಸ್ ವೃತ್ತಿಜೀವನದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Updated on

ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಯಾವುದೇ ಸ್ವರೂಪದ ಕ್ರಿಕೆಟ್‌ನಲ್ಲಾದರೂ ಎದುರಾಳಿ ತಂಡಗಳ ಬೌಲರ್‌ಗಳನ್ನು ಕಾಡುತ್ತಿದ್ದವರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಡಿವಿಲಿಯರ್ಸ್ ಆಡಿದ್ದರು. ಆದರೆ, ಐಪಿಎಲ್ ಟ್ರೋಫಿಯನ್ನು ಗೆಲ್ಲದೆಯೇ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದರು. ಡಿವಿಲಿಯರ್ಸ್ ಅವರ ಆಟದ ಶೈಲಿಯನ್ನು ಈಗ ಟೀಂ ಇಂಡಿಯಾದ T20I ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಹೋಲಿಸಲಾಗುತ್ತದೆ.

ಇದೀಗ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಡಿವಿಲಿಯರ್ಸ್ ವೃತ್ತಿಜೀವನದ ಬಗ್ಗೆ ಹೇಳಿಕೆ ನೀಡಿದ್ದಾರೆ. T20 ಕ್ರಿಕೆಟ್‌ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಈಗಾಗಲೇ ಎಬಿ ಡಿವಿಲಿಯರ್ಸ್ ಅವರನ್ನು ಮೀರಿಸಿದ್ದಾರೆ. ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಅವರ ವೃತ್ತಿಜೀವನಕ್ಕೆ ಸಂಪೂರ್ಣತೆ ಸಿಕ್ಕಲಿಲ್ಲ. ಏಕೆಂದರೆ, ಅವರು ತಪ್ಪಾದ ಫ್ರಾಂಚೈಸಿ ಪರ ಆಡಿದರು. ಬದಲಿಗೆ ಬೇರೊಂದು ಪ್ರಾಂಚೈಸಿಗೆ ಆಡಬೇಕಿತ್ತು ಎಂದು ಮಂಜ್ರೇಕರ್ ಹೇಳಿದ್ದಾರೆ.

'ಯಾವುದೇ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಎಬಿ ಡಿವಿಲಿಯರ್ಸ್ ಅತ್ಯಂತ ಪ್ರಭಾವಶಾಲಿ ಹೌದು ಎಂದು ಹೇಳುತ್ತೇನೆ. ಎಬಿ ಡಿವಿಲಿಯರ್ಸ್ ಅಸಾಧಾರಣ ಪ್ರತಿಭೆ. ಡಿವಿಲಿಯರ್ಸ್ ಅವರು ಟೆಸ್ಟ್‌ನಲ್ಲಿ 50 ಸರಾಸರಿ ಗಳಿಸಿದ್ದರು. ಏಕದಿನ ಮಾದರಿಯಲ್ಲೂ 50 ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿಯೇ ಅವರೊಬ್ಬ ಅದ್ಭುತ ಆಟಗಾರ. ಆದರೆ, ಐಪಿಎಲ್ ನಲ್ಲಿ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಮತ್ತು ಅವರು ತಪ್ಪಾದ ಫ್ರಾಂಚೈಸಿ ಪರವಾಗಿ ಆಡಿದರು. ಅವರು ಬೇರೊಂದು ಪ್ರಾಂಚೈಸಿ ಪರ ಆಡಿದ್ದರೆ ನಾವು ಅವರ ಶ್ರೇಷ್ಠತೆಯನ್ನು ಮತ್ತಷ್ಟು ನೋಡಬಹುದಿತ್ತು' ಎಂದು ಮಂಜ್ರೇಕರ್ ಹೇಳಿದರು.

ಎಬಿ ಡಿವಿಲಿಯರ್ಸ್
ಆಸ್ಟ್ರೇಲಿಯಾ ಪ್ರವಾಸಕ್ಕೆ ಕೆಎಲ್ ರಾಹುಲ್ ಆಯ್ಕೆ ಪ್ರಶ್ನಿಸಿದ್ದ ಸಂಜಯ್ ಮಂಜ್ರೇಕರ್ ಗೆ ಶ್ರೀಕಾಂತ್ ತಿರುಗೇಟು

ಐಪಿಎಲ್ ವೃತ್ತಿಜೀವನದಲ್ಲಿ ಎಬಿ ಡಿವಿಲಿಯರ್ಸ್ ಅವರು ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳಿಗಾಗಿ ಆಡಿದ್ದರು. ಈ ವೇಳೆ ಅವರು ಒಟ್ಟು 5162 ರನ್ ಗಳಿಸಿದರು. ಈ ಪೈಕಿ 4491 ರನ್ ಆರ್‌ಸಿಬಿ ಪರವಾಗಿ ಬಂದಿವೆ. ಆರ್‌ಸಿಬಿ ಪರವಾಗಿ ಅವರು ಎರಡು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.

ಟಿ20 ಲೀಗ್‌ನಲ್ಲಿ 5,000ಕ್ಕೂ ಹೆಚ್ಚು ರನ್ ಗಳಿಸಿದ ಏಳು ಆಟಗಾರರಲ್ಲಿ ಡಿವಿಲಿಯರ್ಸ್ ಕೂಡ ಒಬ್ಬರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com