
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಪ್ಲೇಯಿಂಗ್ ಇಲೆವೆನ್ ಬುಧವಾರ ಬಿಸಿ ಚರ್ಚೆಯ ವಿಷಯವಾಗಿತ್ತು. ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಮೂವರು ಆಡಿರಲಿಲ್ಲ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕುಲದೀಪ್ ಯಾದವ್‌ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಜಡೇಜಾ ಮತ್ತು ಸುಂದರ್ ಸೇರಿ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿರುವ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ.
'ಭಾರತ ತನ್ನ ಇಬ್ಬರು ಅತ್ಯುತ್ತಮ ಸ್ಪಿನ್ನರ್‌ಗಳನ್ನು ಆಡಿಸುತ್ತಿದೆಯೇ ಎಂಬುದು ನನಗೆ ಖಚಿತವಿಲ್ಲ. ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿರುವುದು ನನಗೆ ಆಶ್ಚರ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ಪ್ರದರ್ಶನ ನೀಡಲು ಅತ್ಯುತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ಅತಿಹೆಚ್ಚು ರನ್‍ಗಳನ್ನು ಕಲೆಹಾಕುತ್ತದೆ ಮತ್ತು ಮತ್ತು ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಆಶಿಸುತ್ತೇನೆ' ಎಂದು ಸೌರವ್ ಗಂಗೂಲಿ ಭಾರತ vs ಇಂಗ್ಲೆಂಡ್ ಟೆಸ್ಟ್‌ನ 1 ನೇ ದಿನದ ಚಹಾ ವಿರಾಮದ ಸಮಯದಲ್ಲಿ ಹೇಳಿದರು.
ಬರ್ಮಿಂಗ್ಹ್ಯಾಮ್‌ನಲ್ಲಿ ಬುಧವಾರ ಆರಂಭವಾದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅತೃಪ್ತಿ ವ್ಯಕ್ತಪಡಿಸಿದರು.
'ಕುಲದೀಪ್ ಅವರನ್ನು ಆಯ್ಕೆ ಮಾಡದಿರುವುದು ನನಗೆ ಸ್ವಲ್ಪ ಗೊಂದಲ ತಂದಿದೆ. ಏಕೆಂದರೆ, ಇಂತಹ ಪಿಚ್‌ನಲ್ಲಿ, ಸ್ವಲ್ಪ ಹೆಚ್ಚು ತಿರುವು ಇದೆ ಎಂದು ಎಲ್ಲರೂ ಹೇಳುತ್ತಾರೆ' ಎಂದು ಸೋನಿ ಸ್ಪೋರ್ಟ್ಸ್‌ನಲ್ಲಿ (ಸ್ಪೋರ್ಟ್ಸ್‌ಕೀಡಾ ಮೂಲಕ) ಹೇಳಿದರು.
'ನಿಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೀವು ನಿರೀಕ್ಷಿಸಿದಷ್ಟು ರನ್‌ಗಳನ್ನು ಗಳಿಸದಿದ್ದರೆ, ಏಳನೇ ಕ್ರಮಾಂಕದಲ್ಲಿ ಬರುವ ವಾಷಿಂಗ್ಟನ್ ಸುಂದರ್ ಅಥವಾ ಎಂಟನೇ ಕ್ರಮಾಂಕದಲ್ಲಿ ಬರುವ ನಿತೀಶ್ ರೆಡ್ಡಿ ಅದನ್ನು ಸರಿಪಡಿಸುವುದಿಲ್ಲ. ಏಕೆಂದರೆ ಅವರು ಮೊದಲ ಟೆಸ್ಟ್‌ನಲ್ಲಿ ಆಡಿದ ಬ್ಯಾಟ್ಸ್‌ಮನ್‌ಗಳಲ್ಲ. ನೀವು 830 ರನ್ ಗಳಿಸಿದ್ದೀರಿ. ನೀವು ಎರಡು ಇನಿಂಗ್ಸ್‌ಗಳಲ್ಲಿ 380 ರನ್ ಗಳಿಸಿಲ್ಲ. ಅದು 830 ಪ್ಲಸ್ ಆಗಿತ್ತು. ಅದು ಬಹಳಷ್ಟು ರನ್‌ಗಳು' ಎಂದರು.
ಆದ್ದರಿಂದ, ನಿಮಗೆ ಬಲವರ್ಧನೆ ಬೇಕಾಗಿರುವುದು ವಿಕೆಟ್ ತೆಗೆದುಕೊಳ್ಳುವ ವಿಭಾಗದಲ್ಲಿ ಅಂದರೆ ಬೌಲಿಂಗ್‌ನಲ್ಲಿ ಹೊರತು ಬ್ಯಾಟಿಂಗ್‌ನಲ್ಲಿ ಅಲ್ಲ ಎಂದರು.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಸಂಪೂರ್ಣ ಫಿಟ್ ಆಗಿರುವ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಭಾರತದ ನಿರ್ಧಾರದ ಬಗ್ಗೆ ಮಾಜಿ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಕಿಡಿಕಾರಿದ್ದು, ವೇಗಿ ಬುಮ್ರಾಗೆ ನಿರ್ಣಾಯಕ ಪಂದ್ಯದಿಂದ ಹೊರಗುಳಿಯುವ ಅವಕಾಶ ನೀಡಬಾರದಿತ್ತು ಎಂದು ಪ್ರತಿಪಾದಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಭಾರತ, ಕಳೆದ ಒಂಬತ್ತು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಶುಭಮನ್ ಗಿಲ್ ಮತ್ತು ಪಡೆ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳಿಂದ ಸೋತಿದೆ.
Advertisement