'ಏನ್ ನೋಡ್ತಿದ್ದೀರ, ಬೇಗ ಓಡಿ': ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ವೇಳೆ ಆಕಾಶ್ ದೀಪ್ ವಿರುದ್ಧ ಶುಭಮನ್ ಗಿಲ್ ಆಕ್ರೋಶ

ಭಾರತದ ಟೆಸ್ಟ್ ನಾಯಕನಾದ ನಂತರ ಗಿಲ್ ತಂಡದ ಸಹ ಆಟಗಾರನ ಮೇಲೆ ಹೊರಹಾಕಿದ ಅಪರೂಪದ ಆಕ್ರೋಶವಾಗಿತ್ತು.
Shubman Gill
ಶುಭಮನ್ ಗಿಲ್
Updated on

ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ 269 ರನ್ ಗಳಿಸಿದರು. ಈ ಮೂಲಕ ಅವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 151 ಓವರ್‌ಗಳಲ್ಲಿ 587 ರನ್‌ಗಳಿಗೆ ಭಾರತವನ್ನು ಮುನ್ನಡೆಸಿದರು. ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಬ್ಯಾಟಿಂಗ್ ಮಾಡುವ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಭಾರತದ ನಾಯಕನಾಗಿ ಹೊರಹೊಮ್ಮಿದರು.

ಬೌಲರ್‌ಗಳನ್ನು ಆಕ್ರಮಣ ಮಾಡುವಲ್ಲಿ ಅವರ ತಾಂತ್ರಿಕ ಶ್ರೇಷ್ಠತೆ ಮತ್ತು ಉತ್ತಮ ಎಸೆತಗಳ ವಿರುದ್ಧ ರಕ್ಷಣಾತ್ಮಕ ಆಟವಾಡುವ ಮೂಲಕ, ಗಿಲ್ 30 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಿಲ್ ಈಗ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

2ನೇ ದಿನದ ಟೀ ವಿರಾಮಕ್ಕೂ ಮೊದಲು, ಗಿಲ್ ಒಂದು ತ್ವರಿತ ಸಿಂಗಲ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಆಕಾಶ್ ದೀಪ್ ಅದಕ್ಕಿನ್ನೂ ಸಿದ್ಧರಿರಲಿಲ್ಲ. ಮಿಡ್ ಆನ್‌ನಲ್ಲಿದ್ದ ಓಲಿ ಪೋಪ್ ತನ್ನ ಬಲಕ್ಕೆ ಡೈವ್ ಮಾಡುವ ಮೂಲಕ ಚೆಂಡನ್ನು ಕೀಪರ್ ಕಡೆಗೆ ಎಸೆದಾಗ ಆಕಾಶ್ ದೀಪ್ ನಿಧಾನವಾಗಿ ಓಡಲು ಪ್ರಾರಂಭಿಸಿದರು.

ಅದು ನಿಖರವಾದ ಎಸೆತವಾಗಿರಲಿಲ್ಲವಾದ್ದರಿಂದ ಆಕಾಶ್ ದೀಪ್ ತನ್ನ ಕ್ರೀಸ್‌ಗೆ ಮರಳಲು ಸ್ವಲ್ಪ ಹೆಚ್ಚುವರಿ ಸಮಯ ನೀಡಿತು. ನಾನ್-ಸ್ಟ್ರೈಕರ್‌ನ ತುದಿಯನ್ನು ತಲುಪಿದ ಗಿಲ್, ಆಕಾಶ್ ದೀಪ್‌ಗೆ 'ದೇಖ್ ಕ್ಯಾ ರಹಾ ಹೈ? ಭಾಗ್ ಜಲ್ದಿ ಸೆ (ನೀವು ಏನು ನೋಡುತ್ತಿದ್ದೀರಿ? ಬೇಗನೆ ಓಡಿ)' ಎಂದು ಕಿರುಚಿದರು. ಇದು ಭಾರತದ ಟೆಸ್ಟ್ ನಾಯಕನಾದ ನಂತರ ಗಿಲ್ ತಂಡದ ಸಹ ಆಟಗಾರನ ಮೇಲೆ ಹೊರಹಾಕಿದ ಅಪರೂಪದ ಆಕ್ರೋಶವಾಗಿತ್ತು.

Shubman Gill
India vs England: Shubman Gill ಬ್ಯಾಟಿಂಗ್ ಅಬ್ಬರಕ್ಕೆ Virat Kohli 4 ದಾಖಲೆ, Sachin Tendulkar ರೆಕಾರ್ಡ್ ಸೇರಿ ಹಲವು ದಾಖಲೆಗಳು ಪತನ!

ಇದನ್ನ ಹೊರತುಪಿಸಿ, ಶುಭಮನ್ ಗಿಲ್ ಪಂದ್ಯದುದ್ದಕ್ಕೂ ಶಾಂತತೆಯಿಂದ ಕೂಡಿದ್ದರು.

ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದ್ದ ಭಾರತ 450 ರನ್ ಗಳಿಸುವುದು ಸಹ ಪ್ರಾಯೋಗಿಕವಾಗಿ ಸಾಧ್ಯವಿರಲಿಲ್ಲ. ಆದರೆ, ಗಿಲ್ ಅದ್ಭುತ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ಟೆಸ್ಟ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ರನ್ ಗಳಿಸಿದರು. ಭಾರತವು ತನ್ನೆಲ್ಲಾ ವಿಕೆಟ್ ಕಳೆದುಕೊಂಡು 587 ರನ್ ಗಳಿಸಿತು. ಇದು ಈಗ ಟೆಸ್ಟ್‌ನಲ್ಲಿ ಭಾರತದ ನಾಲ್ಕನೇ ಅತ್ಯಧಿಕ ಮೊತ್ತವಾಗಿದೆ.

ಗಿಲ್ ಜೊತೆಗೆ ರವೀಂದ್ರ ಜಡೇಜಾ (89) ಮತ್ತು ವಾಷಿಂಗ್ಟನ್ ಸುಂದರ್ (42) ಆರು ಮತ್ತು ಏಳನೇ ವಿಕೆಟ್‌ಗಳಿಗೆ 203 ಮತ್ತು 144 ರನ್‌ಗಳ ಜೊತೆಯಾಟವಾಡಿದರು. ಇಂಗ್ಲೆಂಡ್ ಪರ, ಶೋಯೆಬ್ ಬಶೀರ್ 167 ರನ್ ನೀಡಿ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಜೋಶ್ ಟಂಗ್ ಕ್ರಮವಾಗಿ 81 ಮತ್ತು 119 ತಲಾ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com