India vs England: Shubman Gill ಬ್ಯಾಟಿಂಗ್ ಅಬ್ಬರಕ್ಕೆ Virat Kohli 4 ದಾಖಲೆ, Sachin Tendulkar ರೆಕಾರ್ಡ್ ಸೇರಿ ಹಲವು ದಾಖಲೆಗಳು ಪತನ!

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 587 ರನ್ ಗಳಿಗೆ ಆಲೌಟ್ ಆಯಿತು.
Shubman Gill Record
ಶುಭ್ ಮನ್ ಗಿಲ್ ದಾಖಲೆ
Updated on

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್ ನಲ್ಲಿ ದಾಖಲೆಯ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 587 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಯಶಸ್ವಿ ಜೈಸ್ವಾಲ್ 87, ಕರುಣ್ ನಾಯರ್ 31, ರವೀಂದ್ರ ಜಡೇಜಾ 89, ವಾಷಿಂಗ್ಟನ್ ಸುಂದರ್ 42 ರನ್ ಮತ್ತು ನಾಯಕ ಶುಭ್ ಮನ್ ಗಿಲ್ 269 ರನ್ ಗಳಿಸಿದರು. ಈ ಪೈಕಿ 387 ಎಸೆತಗಳನ್ನು ಎದುರಿಸಿರುವ ಗಿಲ್ 3 ಸಿಕ್ಸರ್ ಮತ್ತು 30 ಬೌಂಡರಿಗಳ ಸಹಿತ 269 ರನ್ ಗಳಿಸಿ ಔಟಾದರು.

ಇನ್ನು ಈ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಶುಭ್ ಮನ್ ಗಿಲ್ ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈ ಪೈಕಿ ಸುನಿಲ್ ಗವಾಸ್ಕರ್ ರ SENA ಟೆಸ್ಟ್ ಪಂದ್ಯದ ಗರಿಷ್ಟ ಸ್ಕೋರ್, ಭಾರತ ತಂಡದ ನಾಯಕನಾಗಿ ವಿದೇಶದಲ್ಲಿ ಗರಿಷ್ಠ ಸ್ಕೋರ್ ಸೇರಿದಂತೆ ಹಲವು ದಾಖಲೆಗಳು ಪತನವಾಗಿವೆ.

Shubman Gill Record
India vs England: 46 ವರ್ಷಗಳ ಹಳೆಯ ದಾಖಲೆ ಸೇರಿ 4 ಕ್ರಿಕೆಟ್ ದಿಗ್ಗಜರ Record ಮುರಿದ Shubman Gill; Elite Group ಸೇರ್ಪಡೆ

Virat Kohli 4 ದಾಖಲೆ ಪತನ

ಇನ್ನು ಇದೇ ಪಂದ್ಯದಲ್ಲಿ ಗಿಲ್ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ 4 ಅಪರೂಪದ ದಾಖಲೆಗಳನ್ನೂ ಹಿಂದಿಕ್ಕಿದ್ದಾರೆ. ಎಡ್ಜ್‌ಬಾಸ್ಟನ್ ಮೈದಾನದಲ್ಲಿ, ಶುಭ್​ಮನ್ ಗಿಲ್ ಪಂದ್ಯದ ಮೊದಲ ದಿನದಂದು ಗಳಿಸಿದ ಶತಕವನ್ನು ಸ್ಮರಣೀಯ ದ್ವಿಶತಕವನ್ನಾಗಿ ಪರಿವರ್ತಿಸಿ ಇತಿಹಾಸ ಸೃಷ್ಟಿಸಿದರು. ಈ ಸಮಯದಲ್ಲಿ, ಗಿಲ್ ಭಾರತೀಯ ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದಲ್ಲದೆ, ಈ ವಿಷಯದಲ್ಲಿ ಅವರು ತಮ್ಮ ಆರಾಧ್ಯ ದೈವ ವಿರಾಟ್ ಕೊಹ್ಲಿಯ 4 ದಾಖಲೆಗಳನ್ನು ಮುರಿದರು.

  • 1.ಶುಭ್ ಮನ್ ಗಿಲ್, 150 ರನ್‌ಗಳ ಗಡಿ ತಲುಪಿದ ತಕ್ಷಣ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಅತಿ ಹೆಚ್ಚು ಸ್ಕೋರ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ 2018 ರಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ 149 ರನ್‌ಗಳ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ಹೆಸರಿನಲ್ಲಿತ್ತು.

  • 2.ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನಾಗಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ಗಿಲ್ ನಿರ್ಮಿಸಿದರು. ಇದರ ಜೊತೆಗೆ ನಾಯಕನಾಗಿ ಕೊಹ್ಲಿ ಆಡಿದ 149 ರನ್‌ಗಳ ಇನ್ನಿಂಗ್ಸ್ ದಾಖಲೆಯನ್ನೂ ಗಿಲ್ ಮುರಿದರು.

  • 3.ತಮ್ಮ ದ್ವಿಶತಕ ಪೂರೈಸಿದ ಗಿಲ್, 235 ರನ್‌ಗಳನ್ನು ದಾಟಿದ ತಕ್ಷಣ, ಕೊಹ್ಲಿಯ ಮೂರನೇ ದಾಖಲೆಯನ್ನು ಸಹ ಮುರಿದರು. ಈಗ ಇಂಗ್ಲೆಂಡ್ ವಿರುದ್ಧ ನಾಯಕನಾಗಿ ಭಾರತದ ಪರ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಗಿಲ್ ಹೆಸರಿನಲ್ಲಿ ದಾಖಲಾಗಿದೆ. ಇದಕ್ಕೂ ಮೊದಲು, ಕೊಹ್ಲಿ 2016 ರಲ್ಲಿ ಮುಂಬೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 235 ರನ್ ಗಳಿಸಿದ್ದರು.

  • 4. ನಾಯಕನಾಗಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಸಹ ಮುರಿದರು. ವಾಸ್ತವವಾಗಿ ಕೊಹ್ಲಿ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 254 (ಅಜೇಯ) ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಗಿಲ್ ಇದನ್ನೂ ಸಹ ಮುರಿಯುವಲ್ಲಿ ಯಶಸ್ವಿಯಾದರು.

ಸಚಿನ್ ತೆಂಡೂಲ್ಕರ್ ದಾಖಲೆಯೂ ಪತನ

ಇನ್ನು SENA ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ರನ್ ಕಲೆಹಾಕಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೂ ಗಿಲ್ ಭಾಜನರಾದರು. ಈ ಹಿಂದೆ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 241 ರನ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರು. ಆದರೆ ಗಿಲ್ ಇಂದು 269 ರನ್ ಗಳಿಸಿ ಈ ದಾಖಲೆಯನ್ನು ತಮ್ಮ ಹೆಸೆರಿಗೆ ಬರೆದುಕೊಂಡಿದ್ದಾರೆ. ಇದಲ್ಲದೆ ಗಿಲ್ SENA ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ 3ನೇ ನಾಯಕ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

Visiting Test captains with 250-plus scores in England

  • 311 - Bob Simpson (AUS), Old Trafford, 1964

  • 277 - Graeme Smith (SA), Edgbaston, 2003

  • 269 - Shubman Gill (IND), Edgbaston, 2025

  • 259 - Graeme Smith (SA), Lord’s, 2003

ವಿದೇಶಗಳಲ್ಲಿ ಭಾರತದ ಪರ 3ನೇ ಗರಿಷ್ಠ ಸ್ಕೋರ್

ಇನ್ನು ವಿದೇಶಿ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ದಾಖಲಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಗಿಲ್ ಭಾಜನರಾಗಿದ್ದು, ಈ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. 2004ರಲ್ಲಿ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ಮುಲ್ತಾನ್ ನಲ್ಲಿ 309 ರನ್ ಚಚ್ಚಿದ್ದರು.

250-plus scores for India in away Tests

  • 309 - Virender Sehwag vs PAK, Multan, 2004

  • 270 - Rahul Dravid vs PAK, Rawalpindi, 2004

  • 269 - Shubman Gill vs ENG, Edgbaston, 2025

  • 254 - Virender Sehwag vs PAK, Lahore, 2006

ಇದಲ್ಲದೆ ಗಿಲ್ ದ್ವಿಶತಕ ಸಿಡಿಸಿದ ಭಾರತದ ಕಿರಿಯ ನಾಯಕ ಎಂಬ ಕೀರ್ತಿಗೂ ಭಾಜನರಾಗಿದ್ದು, ಅಂತೆಯೇ ವಿದೇಶದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ 4ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com