India vs England: Virat Kohli ಯ ಸಾರ್ವಕಾಲಿಕ ದಾಖಲೆ ಮುರಿದ ನಾಯಕ Shubman Gill

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ ತಂಡದ ಸಾರಥ್ಯವಹಿಸಿಕೊಂಡ ಶುಭ್ ಮನ್ ಗಿಲ್ ನಾಯಕನಾಗಿ ಚೊಚ್ಚಲ ಟೂರ್ನಿಯಲ್ಲಿ ಪವರ್ ಫುಲ್ ಸಂದೇಶ ರವಾನಿಸಿದ್ದಾರೆ.
Virat Kohli-Shubman Gill
ವಿರಾಟ್ ಕೊಹ್ಲಿ ಮತ್ತು ಶುಭ್ ಮನ್ ಗಿಲ್
Updated on

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳ ಸುರಿಮಳೆಯನ್ನೇ ಸುರಿಸಿರುವ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ (Shubman Gill) ಮಾಜಿ ನಾಯಕ ವಿರಾಟ್ ಕೊಹ್ಲಿಯ (Virat Kohli) ಸಾರ್ವಕಾಲಿಕ ದಾಖಲೆಯನ್ನು ಪತನಗೊಳಿಸಿದ್ದಾರೆ.

ಹೌದು.. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ ತಂಡದ ಸಾರಥ್ಯವಹಿಸಿಕೊಂಡ ಶುಭ್ ಮನ್ ಗಿಲ್ ನಾಯಕನಾಗಿ ಚೊಚ್ಚಲ ಟೂರ್ನಿಯಲ್ಲಿ ಪವರ್ ಫುಲ್ ಸಂದೇಶ ರವಾನಿಸಿದ್ದಾರೆ.

ತಂಡದಿಂದ ಮಾತ್ರವಲ್ಲದೇ ಸ್ವತಃ ತಾವೇ ಬ್ಯಾಟಿಂಗ್ ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಹೆಡಿಂಗ್ಲಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಅದ್ಭುತ 147 ರನ್ ಗಳಿಸಿದ್ದರು. ಆ ಮೂಲಕ ಗಿಲ್ ನಾಯಕತ್ವದ ಕುರಿತು ಟೀಕಿಸಿದ್ದ ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದ್ದರು.

ಅಲ್ಲದೆ ಈ ಶತಕದ ಮೂಲಕ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎಡ್ಜ್ ಬ್ಯಾಸ್ಟನ್ ನಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ

ಇದೀಗ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲೂ ಗಿಲ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ್ದು, ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ (269) ಭಾರಿಸಿದ್ದ ಗಿಲ್ 2ನೇ ಇನ್ನಿಂಗ್ಸ್ ನಲ್ಲೂ ಶತಕ (161)ಬಾರಿಸಿದ್ದಾರೆ. ಒಂದೆಡೆ ಗಿಲ್ ಬ್ಯಾಟ್ ನಿಂದ ರನ್ ಗಳು ಹರಿಯುತ್ತಿರುವಂತೆಯೇ ಇತ್ತ ಒಂದರ ಮೇಲೊಂದು ದಾಖಲೆಗಳೂ ಕೂಡ ಪತನವಾಗುತ್ತಿವೆ.

Virat Kohli-Shubman Gill
India vs England: ಇಂಗ್ಲೆಂಡ್‌ಗೆ 608 ರನ್‌ ಬೃಹತ್‌ ಗುರಿ ನೀಡಿದ ಭಾರತ; ದಾಖಲೆ ಬರೆದ ಗಿಲ್ ಶತಕ!

ವಿರಾಟ್ ಕೊಹ್ಲಿ ಸಾರ್ವಕಾಲಿಕ ದಾಖಲೆ ಪತನ

ಇನ್ನು ಇಂಗ್ಲೆಂಡ್ ವಿರುದ್ಧದ ನಾಯಕನಾಗಿ ಮೊದಲೆರಡು ಪಂದ್ಯಗಳಲ್ಲಿಯೇ ಗಿಲ್ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಪತನಗೊಳಿಸಿದ್ದಾರೆ. ಇದೀಗ ಗಿಲ್ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿದು ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ಈ ಹಿಂದೆ ಈ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಹಾಲಿ ಸರಣಿಯಲ್ಲಿ ಶುಭ್ ಮನ್ ಗಿಲ್ 2 ಪಂದ್ಯಗಳಿಂದ 459 ರನ್ ಕಲೆಹಾಕಿದ್ದು, ಆ ಮೂಲಕ ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಪಟ್ಟಿಯಲ್ಲಿ ಇಷ್ಟು ದಿನ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರು. ಕೊಹ್ಲಿ 2014/15ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 2 ಪಂದ್ಯಗಳಿಂದ 449 ರನ್ ಗಳಿಸಿದ್ದರು.

Most Runs In Debut Series As India Test Captain

  • 459* - Shubman Gill vs ENG (Away, 2025, 4 innings)

  • 449 - Virat Kohli vs AUS (Away, 2014/15, 4 innings)

  • 347 - Vijay Hazare vs ENG (Home, 1951/52, 7 innings)

  • 319 - Nari Contractor vs PAK (Home, 1960/61, 6 innings)

  • 305 - Dilip Vengsarkar vs WI (Home, 1987/88, 5 innings)

  • 303 - Mohammad Azharuddin vs NZ (Away, 1989/90, 4 innings)

ಎಲೈಟ್ ಕ್ಲಬ್‌ಗೆ ಸೇರ್ಪಡೆ

ಗಮನಾರ್ಹವಾಗಿ, ಗಿಲ್ ಅವರ ಪ್ರದರ್ಶನವು ಇಂಗ್ಲೆಂಡ್‌ನಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರ ಎಲೈಟ್ ಕ್ಲಬ್‌ನಲ್ಲಿ ಸ್ಥಾನ ಪಡೆದಿದೆ. ಅವರು ಇಂಗ್ಲೆಂಡ್ ನೆಲದಲ್ಲಿ ಈ ಸಾಧನೆ ಮಾಡಿದ 13 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹಶಿಮ್ ಆಮ್ಲಾ ಅವರು ಈ ಸಾಧನೆ ಮಾಡಿದ ಕೊನೆಯ ಆಟಗಾರರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com