
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಐದನೇ ದಿನ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 193 ರನ್‌ಗಳ ಗುರಿಯನ್ನು ತಲುಪಲು ಡ್ರೆಸ್ಸಿಂಗ್ ಕೋಣೆಯಲ್ಲಿ ಇನ್ನೂ ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ಗಳು ಇದ್ದಾರೆ ಎಂದು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್ ಅವರ ನಾಲ್ಕು ವಿಕೆಟ್ ಗೊಂಚಲು ಭಾರತವು ನಾಲ್ಕನೇ ದಿನದಂದು ಇಂಗ್ಲೆಂಡ್ ಅನ್ನು 192 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ 58 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕರುಣ್ ನಾಯರ್ ಮತ್ತು ನೈಟ್ ವಾಚ್‌ಮನ್ ಆಕಾಶ್ ದೀಪ್ ಅವರು ಪೆವಿಲಿಯನ್‌ಗೆ ಮರಳಿದರು.
'ಹಲವು ವಿಷಯಗಳು ನಮ್ಮ ಪರವಾಗಿ ಕೆಲಸ ಮಾಡಲಿ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ, ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ. ನಾಳೆ ನಾವು ನಿಜವಾಗಿಯೂ ಸಕಾರಾತ್ಮಕ ಫಲಿತಾಂಶ ಪಡೆಯುತ್ತೇವೆ. ಡ್ರೆಸ್ಸಿಂಗ್ ಕೋಣೆಯಲ್ಲಿ ನಮಗೆ ಕೆಲವು ಉತ್ತಮ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಇದು ಎಲ್ಲ ರೀತಿಯಲ್ಲೂ ರೋಮಾಂಚನಕಾರಿಯಾಗಿದೆ. ನಿಮಗೆ ತಿಳಿದಿದೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಗೆಲ್ಲುವುದು ಅದ್ಭುತವಾಗಿರುತ್ತದೆ. ಆದ್ದರಿಂದ, ನಾವು ನಿರಾಳವಾಗಿ ಕುಳಿತಿದ್ದೇವೆ ಎಂದು ನಾನು ಭಾವಿಸುತ್ತೇನೆ' ಎಂದು ವಾಷಿಂಗ್ಟನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುಲದೀಪ್ ಯಾದವ್ ಅವರ ಬದಲು ತಂಡದಲ್ಲಿ ಆಯ್ಕೆಯಾದ ವಾಷಿಂಗ್ಟನ್, 'ಖಂಡಿತವಾಗಿಯೂ, ನನಗೆ ಬೌಲಿಂಗ್ ವಿಚಾರಕ್ಕೆ ಬಂದಾಗ ಅತ್ಯುತ್ತಮ ದಿನಗಳಲ್ಲಿ ಇದು ಒಂದು, ವಿಶೇಷವಾಗಿ ಭಾರತದ ಹೊರಗೆ. ಆದರೆ ಹೌದು, ಈ ಟೆಸ್ಟ್ ಪಂದ್ಯಕ್ಕೆ ಖಂಡಿತವಾಗಿಯೂ ಕೆಲವು ದೃಢವಾದ ಯೋಜನೆಗಳು ನನ್ನ ಮುಂದಿದ್ದವು. ಮೊದಲ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅವುಗಳನ್ನು ಕಾರ್ಯಗತಗೊಳಿಸಲು ನಿಜವಾಗಿಯೂ ಬಯಸಿದ್ದೆ' ಎಂದರು.
'ಆಟದ ವಿವಿಧ ಹಂತಗಳಲ್ಲಿ ನನ್ನ ಮೇಲೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾಗುತ್ತದೆ. ಟೆಸ್ಟ್ ಕ್ರಿಕೆಟ್ ಹೆಚ್ಚು ರೋಮಾಂಚನಕಾರಿಯಾಗುವುದು ಅಲ್ಲಿಯೇ ಎಂದು ನಾನು ಹೇಳುತ್ತೇನೆ. ಏಕೆಂದರೆ, ನೀವು ಮೊದಲ ದಿನಕ್ಕೆ ಹೋಲಿಸಿದರೆ ಕನಿಷ್ಠ ಐದನೇ ದಿನದಂದು ನಿಮ್ಮ ಮನಸ್ಥಿತಿಯೊಂದಿಗೆ ಸ್ವಲ್ಪ ವಿಭಿನ್ನ ಕ್ರಿಕೆಟಿಗರಾಗಬೇಕು' ಎಂದು ಫಾರ್ಮ್‌ನಲ್ಲಿರುವ ಜೇಮೀ ಸ್ಮಿತ್ ಅವರ ವಿಕೆಟ್ ಕಬಳಿಸಿದ ವಾಷಿಂಗ್ಟನ್ ಹೇಳಿದರು.
'ಲಾರ್ಡ್ಸ್‌ನಲ್ಲಿ ತಂಡವಾಗಿ ಗೆಲುವು ನಮಗೆ ತುಂಬಾ ವಿಶೇಷವಾಗಿರುತ್ತದೆ. ಅದು ಅದ್ಭುತವಾಗಿರುತ್ತದೆ. ನಾಳೆ ಇದು ರೋಮಾಂಚನಕಾರಿಯಾಗಲಿದೆ. ನನ್ನ ಪ್ರಕಾರ, ವಿಶೇಷವಾಗಿ ಕೊನೆಯ 15-20 ನಿಮಿಷಗಳು ಇಂದು ಸಾಕಷ್ಟು ಆಸಕ್ತಿದಾಯಕವಾಗಿತ್ತು' ಎಂದರು.
ಎರಡೂ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಆಕ್ರಮಣಶೀಲತೆ ಯಾವಾಗಲೂ ಇರುತ್ತದೆ ಎಂದು ನಾನು ಹೇಳುತ್ತೇನೆ. ನಿನ್ನೆ ಸಂಜೆ (3ನೇ ದಿನ) ಒಂದು ಘಟನೆ ನಡೆದಿತ್ತು ಮತ್ತು ಅದು ಸ್ವಲ್ಪ ಮಟ್ಟಿಗೆ ಹೊರಬಂದಿತು ಮತ್ತು ಇಂದು ಕೂಡ ಅದು ಸ್ವಲ್ಪ ಮಟ್ಟಿಗೆ ಹೊರಬಂದಿತು. ಇದು ಖಂಡಿತವಾಗಿಯೂ ಶಕ್ತಿ ನೀಡುತ್ತದೆ. ಅಂದರೆ, ಪ್ರತಿಯೊಬ್ಬರೂ ಸಾಕಷ್ಟು ಆಕ್ರಮಣಕಾರಿ ಮತ್ತು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ತೀವ್ರರು. ನಾನು ಹೇಳುವುದೇನೆಂದರೆ, ಕ್ರೀಡೆ ಯಾವುದೇ ಆಗಿರಲಿ, ನೀವು ಕ್ರೀಡಾಪಟುವಾಗಿದ್ದರೆ, ಅದು ಸಾಮಾನ್ಯ ಅಂಶವಾಗಿರುತ್ತದೆ' ಎಂದು ಹೇಳಿದರು.
Advertisement