England-India Test Series: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಸೋಲಲು ಐದು ಕಾರಣ!

5ನೇ ದಿನದಂದು ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ ಬಳಿಕ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಸಾಗಿತು.
Team India
ಟೀಂ ಇಂಡಿಯಾ ಆಟಗಾರರು
Updated on

ಲಾರ್ಡ್ಸ್‌ನಲ್ಲಿ ಸೋಮವಾರ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 22 ರನ್‌ಗಳಿಂದ ಸೋಲು ಕಂಡಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ದಿಟ್ಟ ಹೋರಾಟ ನೀಡಿದರೂ ಕೂಡ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಭಾರತದ 10ನೇ ಕ್ರಮಾಂಕದ ಜಸ್ಪ್ರೀತ್ ಬುಮ್ರಾ ಮತ್ತು 11ನೇ ಕ್ರಮಾಂಕದ ಮೊಹಮ್ಮದ್ ಸಿರಾಜ್ ಕೂಡ ಜಡೇಜಾ ಅವರಿಗೆ ದಿಟ್ಟ ಬೆಂಬಲ ನೀಡಿದರು. ಅಂತಿಮವಾಗಿ ಬೆನ್ ಸ್ಟೋಕ್ಸ್ ಪಡೆ ಭಾರತವನ್ನು 22 ರನ್‌ಗಳಿಂದ ಸೋಲಿಸಿತು. 5ನೇ ದಿನದಂದು ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ ಬಳಿಕ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಸಾಗಿತು. ನಂತರ ಕ್ರಿಸ್ ವೋಕ್ಸ್ ಊಟದ ಸಮಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದರು. ವಾಷಿಂಗ್ಟನ್ ಸುಂದರ್ ಅವರನ್ನು ಆರ್ಚರ್ ಮೊದಲೇ ಔಟ್ ಮಾಡಿದರು.

ಈ ಗೆಲುವಿನ ಮೂಲಕ ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಸೋಲು ಕಾಣಲು ಕಾರಣಗಳು.

1. 193 ರನ್‌ಗಳ ಗುರಿಯನ್ನು ಬೆನ್ನಟ್ಟುವ ವಿಧಾನ

ಕೊನೆಯ ದಿನದಂದು ಭಾರತವು ಅಂತಿಮ ಇನಿಂಗ್ಸ್ ನಲ್ಲಿ 193 ರನ್‌ಗಳನ್ನು ಬೆನ್ನಟ್ಟಬೇಕಾಗಿತ್ತು. ಆದರೆ, ತಂಡವು ರಕ್ಷಣಾತ್ಮಕ ವಿಧಾನವನ್ನು ಅನುಸರಿಸಿದರು. ಅವರ ಶಾಟ್ ಆಯ್ಕೆಯು ಇಂಗ್ಲಿಷ್ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಆರ್ಚರ್ ಮತ್ತು ಸ್ಟೋಕ್ಸ್ ತಲಾ ಮೂರು ವಿಕೆಟ್ ಕಬಳಿಸಿದರು. ಜಡೇಜಾ ಭಾರತದ ಪರವಾಗಿ ಉತ್ತಮ ಹೋರಾಟ ನೀಡಿದರೂ, ಕೆಎಲ್ ರಾಹುಲ್ 39 ರನ್ ಗಳಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಇಂಗ್ಲಿಷ್ ವೇಗಿಗಳ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ.

2. ಪಂತ್-ರಾಹುಲ್ ನಡುವಿನ ಘರ್ಷಣೆ

ಉಪನಾಯಕ ರಿಷಭ್ ಪಂತ್ ಸರಣಿಯ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 74 ರನ್ ಗಳಿಸಿದರು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಅವರು ಅನಗತ್ಯವಾಗಿ ರನ್ ಔಟ್‌ ಆದರು. ಪಂತ್ ಹೊರಗುಳಿದ ಆ ಕ್ಷಣದಲ್ಲಿ ತಂಡದ ಮೊಮೆಂಟಮ್ ಬದಲಾಯಿತು. ಆಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಮತ್ತು ಜಡೇಜಾ ಬಿಟ್ಟರೆ ಬೇರೆ ಯಾವುದೇ ಬ್ಯಾಟರ್‌ಗಳು ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.

3. ಭಾರತದ ಅಗ್ರ ಕ್ರಮಾಂಕ, ನೈಟ್‌ವಾಚ್‌ಮನ್ ಪ್ರಭಾವ ಬೀರಲು ವಿಫಲ

ಭಾರತದ ಆರಂಭಿಕ ಮತ್ತು ಮೂರನೇ ಆಟಗಾರ ಭಾರತಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ನಿರ್ಗಮಿಸಿದರೆ, ಕರುಣ್ ನಾಯರ್ 14 ರನ್ ಗಳಿಸಿದರು. ಸರಣಿಯಲ್ಲಿ ಕರುಣ್ ನಾಯರ್ ಇನ್ನೂ ಪ್ರಭಾವ ಬೀರಿಲ್ಲ. ಆಕಾಶ್ ದೀಪ್ ಅವರನ್ನು ನೈಟ್‌ವಾಚ್‌ಮನ್ ಆಗಿ ಕಳುಹಿಸುವ ಭಾರತದ ತಂತ್ರಕ್ಕೆ ಹಿನ್ನಡೆಯಾಯಿತು.

4. ಮೊದಲ ಇನಿಂಗ್ಸ್‌ನಲ್ಲಿ ಜೇಮೀ ಸ್ಮಿತ್ ಪತನ

ಮೊದಲ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಜೇಮೀ ಸ್ಮಿತ್ ಅವರ ಕ್ಯಾಚ್ ಕೈಬಿಟ್ಟಾಗ, ಮೊಹಮ್ಮದ್ ಸಿರಾಜ್ ದಿಗ್ಭ್ರಮೆಗೊಂಡರು. ಆಗ ಇಂಗ್ಲೆಂಡ್ ವಿಕೆಟ್ ಕೀಪರ್ 56 ಬಾಲ್‌ಗಳಲ್ಲಿ 51 ರನ್ ಗಳಿಸಿದರು. ಆಗ ಇಂಗ್ಲೀಷ್ ತಂಡ 5 ವಿಕೆಟ್ ನಷ್ಟಕ್ಕೆ 265 ರನ್ ನಿಂದ 7 ವಿಕೆಟ್ ನಷ್ಟಕ್ಕೆ 355 ರನ್‌ಗಳಿಸಿತು.

5. ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು

ಭಾರತೀಯ ಬೌಲರ್‌ಗಳು ಮೊದಲ ಇನಿಂಗ್ಸ್‌ನಲ್ಲಿ 31 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 32 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟರು. ಒಟ್ಟು 63 ಹೆಚ್ಚುವರಿ ರನ್‌ಗಳನ್ನು ಇಂಗ್ಲೆಂಡ್ ತಂಡಕ್ಕೆ ಉಡುಗೊರೆಯಾಗಿ ನೀಡಿದರು. ಅದು ಕೊನೆಯಲ್ಲಿ ಭಾರತಕ್ಕೆ ನೋವುಂಟು ಮಾಡಿತು.

Team India
ಮೂರನೇ ಟೆಸ್ಟ್: ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; 22 ರನ್ ಗಳಿಂದ ಗೆದ್ದ ಇಂಗ್ಲೆಂಡ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com