BCCI ಮನವಿಗೂ ಸೊಪ್ಪು ಹಾಕದ ACC: Asia Cup ಕ್ರಿಕೆಟ್ ಗೆ ಟೀಂ ಇಂಡಿಯಾ ಬಹಿಷ್ಕಾರ; ಟೂರ್ನಿ ನಡೆಯೊದೇ ಡೌಟ್?

ಏಷ್ಯಾಕಪ್ 2025 ರಿಂದ ಭಾರತ ತಂಡವು ಹೊರಗುಳಿಯುವ ಸಾಧ್ಯತೆಯಿದ್ದು, ಭಾರತೀಯ ಕ್ರಿಕೆಟ್ ಮಂಡಳಿ (BCCI)ಯ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರಸ್ಕರಿಸದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
Asia Cup In Jeopardy Over PCB Chief Mohsin Naqvis Stance
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ
Updated on

ನವದೆಹಲಿ: ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿರುವಂತೆಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಿರುದ್ಧ ಬಿಸಿಸಿಐ ಕೆಂಗಣ್ಣು ಬೀರಿದೆ.

ಹೌದು.. ಏಷ್ಯಾಕಪ್ 2025 ರಿಂದ ಭಾರತ ತಂಡವು ಹೊರಗುಳಿಯುವ ಸಾಧ್ಯತೆಯಿದ್ದು, ಭಾರತೀಯ ಕ್ರಿಕೆಟ್ ಮಂಡಳಿ (BCCI)ಯ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರಸ್ಕರಿಸದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಈ ಬಾರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ವಾರ್ಷಿಕ ಮಹಾಸಭೆಯನ್ನು ಢಾಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ್ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಹೀಗಾಗಿ ಢಾಕಾದಿಂದ ವಾರ್ಷಿಕ ಮಹಾಸಭೆಯನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐ ಮನವಿ ಮಾಡಿತ್ತು.

ಅಲ್ಲದೆ ಢಾಕಾದಲ್ಲಿ ಎಸಿಸಿ ಸಭೆ ನಡೆದರೆ ಬಿಸಿಸಿಐ ಭಾಗವಹಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಢಾಕಾದಲ್ಲಿ ನಡೆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ನಿರ್ಣಯವನ್ನು "ಬಹಿಷ್ಕರಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

"ಸಭೆಯ ಸ್ಥಳವು ಢಾಕಾದಿಂದ ಬದಲಾದರೆ ಮಾತ್ರ ಏಷ್ಯಾ ಕಪ್ ನಡೆಯಬಹುದು. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸಭೆಗಾಗಿ ಭಾರತದ ಮೇಲೆ ಅನಗತ್ಯ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಸ್ಥಳವನ್ನು ಬದಲಾಯಿಸುವಂತೆ ನಾವು ಅವರನ್ನು ವಿನಂತಿಸಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೊಹ್ಸಿನ್ ನಖ್ವಿ ಢಾಕಾದಲ್ಲಿ ಸಭೆಯನ್ನು ಮುಂದುವರಿಸಿದರೆ ಬಿಸಿಸಿಐ ಯಾವುದೇ ನಿರ್ಣಯವನ್ನು ಬಹಿಷ್ಕರಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

Asia Cup In Jeopardy Over PCB Chief Mohsin Naqvis Stance
BCCI ಮತ್ತೆ ಬಂಪರ್: 2023-24 ರಲ್ಲಿ 9 ಸಾವಿರ ಕೋಟಿ ರೂ ಆದಾಯ; IPL ನದ್ದೇ 'ಸಿಂಹ ಪಾಲು'!

BCCI ಮನವಿಗೂ ಸೊಪ್ಪು ಹಾಕದ ACC

ಆದರೆ ಬಿಸಿಸಿಐನ ಈ ಮನವಿಗೆ ಎಸಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಬಿಸಿಸಿಐ ಕಣ್ಣು ಕೆಂಪಾಗುವಂತೆ ಮಾಡಿದ್ದು, ಎಸಿಸಿ ಕಡೆಯಿಂದ ಪ್ರತಿಕ್ರಿಯೆ ಬರದಿರುವುದರಿಂದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಸಭೆ ಹಾಗೂ ಏಷ್ಯಾಕಪ್​​ನಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸದಸ್ಯ ರಾಷ್ಟ್ರಗಳಿಂದಲೇ ವಿರೋಧ

ಬಾಂಗ್ಲಾದೇಶದಲ್ಲಿ ಪ್ರಸ್ತುತ ರಾಜಕೀಯ ಅಸ್ತಿರತೆ ಇದ್ದು, ಅಲ್ಲಲ್ಲಿ ಸಂಘರ್ಷದ ಸುದ್ದಿ ಕೇಳಿಬರುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಢಾಕಾದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಭಾರತವಲ್ಲದೆ, ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳು ಕೂಡ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪಣೆಗಳ ಹೊರತಾಗಿಯೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯನ್ನು ಬೇರೊಂದು ನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತಿಳಿಸಿಲ್ಲ. ಹೀಗಾಗಿ ಈ ಕ್ರಿಕೆಟ್ ಮಂಡಳಿಗಳು ಕೂಡ ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.

Asia Cup In Jeopardy Over PCB Chief Mohsin Naqvis Stance
Cricket: ಶ್ರೀಲಂಕಾ ವಿರುದ್ಧ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ; Harbhajan Singh ದಾಖಲೆ ಮುರಿದ Mahedi Hasan

ಅಂದಹಾಗೆ ಟಿ 20 ಸ್ವರೂಪದಲ್ಲಿ ನಡೆಯಲಿರುವ ಆರು ತಂಡಗಳ ಏಷ್ಯಾ ಕಪ್ ಪಂದ್ಯಾವಳಿಯ ಭವಿಷ್ಯವು ಅನಿಶ್ಚಿತತೆಯಿಂದ ಕೂಡಿದಂತಾಗಿದೆ. ಭಾರತವು ಪಂದ್ಯಾವಳಿಯ ನಿಯೋಜಿತ ಆತಿಥೇಯ ರಾಷ್ಟ್ರವಾಗಿದ್ದು, ಎಸಿಸಿ ಇನ್ನೂ ಪಂದ್ಯಾವಳಿಯ ವೇಳಾಪಟ್ಟಿ ಅಥವಾ ಸ್ಥಳವನ್ನು ಘೋಷಿಸಿಲ್ಲ. ಈ ಮಹತ್ವದ ಸಭೆಯು ಜುಲೈ 24 ರಂದು ಢಾಕಾದಲ್ಲಿ ನಡೆಯಲಿದೆ. ಬಾಂಗ್ಲಾದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ಸಭೆಗೆ ಪ್ರಯಾಣಿಸಲು ಭಾರತ ನಿರಾಕರಿಸಿದೆ.. ಇತ್ತೀಚೆಗೆ, ಬಿಸಿಸಿಐ ಮತ್ತು ಬಿಸಿಸಿಬಿ ಪರಸ್ಪರ ಆಗಸ್ಟ್ 2025 ರಿಂದ ಸೆಪ್ಟೆಂಬರ್ 2026 ರವರೆಗೆ ಭಾರತದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಲು ನಿರ್ಧರಿಸಿವೆ.

ಆದರೆ ಈ ಊಹಾಪೋಹಗಳ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹೇಳಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ಬಿಸಿಸಿಐ ಅಂತಹ ಸಂಭಾಷಣೆಗಳಲ್ಲಿ ತೊಡಗಿಸಿಕೊಂಡಿಲ್ಲ ಅಥವಾ ಎಸಿಸಿ ಈವೆಂಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಬಿಸಿಸಿಐ ಕಾರ್ಯದರ್ಶಿ ವರದಿಗಳನ್ನು "ಊಹಾತ್ಮಕ ಮತ್ತು ಕಾಲ್ಪನಿಕ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com