
ನವದೆಹಲಿ: ಏಷ್ಯನ್ ಕ್ರಿಕೆಟ್ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ಢಾಕಾದಿಂದ ಸ್ಥಳಾಂತರ ಮಾಡಬೇಕೆಂಬ ಭಾರತದ ಬೇಡಿಕೆಯನ್ನು ಶ್ರೀಲಂಕಾ ಮತ್ತು ಅಪ್ಘಾನಿಸ್ತಾನಗಳು ಬೆಂಬಲ ವ್ಯಕ್ತಪಡಿಸಿವೆ. ಮುಂದಿನ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಮುಖ ಪರಿಣಾಮಗಳೊಂದಿಗೆ ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿನ ಪೈಪೋಟಿಯ ವಿಷಯವಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೇತೃತ್ವದ ವಾರ್ಷಿಕ ಸಾಮಾನ್ಯ ಸಭೆ (AGM) ಜುಲೈ 24-25 ರಂದು ಢಾಕಾದಲ್ಲಿ ನಡೆಯಬೇಕಿತ್ತು. ಆದರೆ, ಬಿಸಿಸಿಐ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಿಸುತಿತ್ತು. ಈ ಬೇಡಿಕೆಗೆ ಈಗ ಭಾರತದ ಮಿತ್ರ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಅಪ್ಘಾನಿಸ್ತಾನದಿಂದ ಬೆಂಬಲ ವ್ಯಕ್ತವಾಗಿದೆ.
ಸಭೆ ನಡೆಯಬೇಕಾದರೆ ಮೂವರು ಖಾಯಂ (ಟೆಸ್ಟ್ ಆಡುವ) ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಬೇಕು. ಇದರೊಂದಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತ ಬಿದ್ದಿದೆ.
ಕನಿಷ್ಠ 10 ಪೂರ್ಣ ಅಥವಾ ಅಸೋಸಿಯೇಟ್ ಸದಸ್ಯರು ಸಭೆಯಲ್ಲಿ ಹಾಜರಿರಬೇಕು ಎಂದು ACC ಸಂವಿಧಾನ ಹೇಳುತ್ತದೆ. ನೇಪಾಳ, ಯುಎಇ, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್, ಹಾಂಗ್ ಕಾಂಗ್ ಕುವೈತ್, ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ ಎಲ್ಲಾ ಪೂರ್ಣ ಸದಸ್ಯರಾಗಿದ್ದಾರೆ. ಬಹ್ರೇನ್, ಭೂತಾನ್, ಕಾಂಬೋಡಿಯಾ, ತಜಕಿಸ್ತಾನ್, ಮಾಲ್ಡೀವ್ಸ್, ಜಪಾನ್, ಇರಾನ್, ಚೀನಾ, ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾ ಅಸೋಸಿಯೇಟ್ಸ್ ಸದಸ್ಯ ರಾಷ್ಟ್ರಗಳಾಗಿವೆ.
ಈ ರಾಷ್ಟ್ರಗಳಲ್ಲಿ ಒಮಾನ್, ನೇಪಾಳ, ಮಲೇಷ್ಯಾ, ಸಿಂಗಾಪುರ, ಥೈಲ್ಯಾಂಡ್, ಕುವೈತ್, ಯುಎಇ, ಬಹ್ರೇನ್, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾ ಭಾಗವಹಿಸುವುದು ಅನುಮಾನಾಸ್ಪದವಾಗಿದೆ ಎಂದು ವರದಿ ಹೇಳಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯನ್ನು ಪರಿಗಣಿಸಿ ಢಾಕಾದಿಂದ ಸ್ಥಳವನ್ನು ಬದಲಾಯಿಸಲು ಬಿಸಿಸಿಐ ಬಯಸಿದೆ. ಆದಾಗ್ಯೂ, ಪಿಸಿಬಿ ಮತ್ತು ACC ಮುಖ್ಯಸ್ಥ ಮೊಹ್ಸಿನ್ ನಖ್ವಿ, ಯಾವುದೇ ಬದಲಾವಣೆ ಇಲ್ಲ ಎಂದು ಹೇಳುತ್ತಿದ್ದಾರೆ. ಸಿಂಗಾಪುರದಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನದಲ್ಲೂ ಅವರು ಪಾಲ್ಗೊಂಡಿರಲಿಲ್ಲ.
Advertisement