Imad Wasim: 3 ಮಕ್ಕಳ ಬಳಿಕ ಪತ್ನಿಗೆ ಕೈಕೊಟ್ಟ Pakistan ಕ್ರಿಕೆಟಿಗ; Influencer ಜೊತೆ ಅಕ್ರಮ ಸಂಬಂಧ?

ಒಂದೆಡೆ ಏಷ್ಯಾಕಪ್ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಬಿಸಿಯಲ್ಲಿದ್ದರೆ, ಇತ್ತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಇಮಾದ್ ವಾಸಿಂ ತನ್ನ ವೈಯುಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.
Pakistan Cricketer Imad Wasim Cheating
ಇಮಾದ್ ವಾಸಿಂ ಮತ್ತು ಗೆಳತಿ
Updated on

ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಂ (Imad Wasim) ವಿರುದ್ಧ ಅನೈತಿಕ ಸಂಬಂಧದ ಆರೋಪ ಕೇಳಿಬಂದಿದ್ದು, ಈ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಪಾಕಿಸ್ತಾನ ಕ್ರಿಕೆಟಿಗರು ಒಂದಲ್ಲಾ ಒಂದು ವಿಚಾರವಾಗಿ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಒಂದೆಡೆ ಏಷ್ಯಾಕಪ್ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಬಿಸಿಯಲ್ಲಿದ್ದರೆ, ಇತ್ತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಇಮಾದ್ ವಾಸಿಂ ತನ್ನ ವೈಯುಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.

ಮೂಲಗಳ ಪ್ರಕಾರ ಇಮಾದ್ ವಾಸಿಂ ಅಕ್ರಮ ಸಂಬಂಧದ ವಿಚಾರವಾಗಿ ಸುದ್ದಿಯಲ್ಲಿದ್ದು, ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿರುವ ಇಮಾದ್ ಈ ಹೊತ್ತಿನಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.

ಫೋಟೋ-ವಿಡಿಯೋ ವೈರಲ್

ಇನ್ನು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಬಳಕೆದಾರರು, ವಾಸಿಮ್ ತಮ್ಮ ಮೂರನೇ ಮಗುವಿಗೆ ತಾಯಿಯಾಗಿರುವ ಪತ್ನಿ ಸಾನಿಯಾ ಅಶ್ಫಾಕ್ ಅವರಿಗೆ ಇಮಾದ್ ಮೋಸ ಮಾಡುತ್ತಿದ್ದಾರೆ ಎಂದು ದೂರಿ ಮತ್ತೊಬ್ಬ ಯುವತಿಯ ಜೊತೆಗೆ ಓಡಾಟ ನಡೆಸುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿವೆ.

2024 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ತಂಡದ ಭಾಗವಾಗಿದ್ದ ಮಾಜಿ ಆಲ್‌ರೌಂಡರ್ ಇಮಾದ್ ವಾಸಿಮ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಇಮಾದ್ ಒಬ್ಬ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮಹಿಳೆ ವಕೀಲೆ ಮತ್ತು ಪ್ರಭಾವಿ ವ್ಯಕ್ತಿ ಎಂದು ಹೇಳಲಾಗುತ್ತಿದೆ.

Pakistan Cricketer Imad Wasim Cheating
ಆಗ ICC Champions Trophy, ಈಗ Asia Cup: ಭಾರತದಿಂದ ಪಾಕ್ ಕ್ರಿಕೆಟ್ ಮಂಡಳಿಗೆ 116 ಕೋಟಿ ರೂ ನಷ್ಟ?

ಇಷ್ಟಕ್ಕೂ ಯಾರು ಆ ಮಹಿಳೆ?

ಮೂಲಗಳ ಪ್ರಕಾರ ಇಮಾದ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಮತ್ತೊಂದು ಹೆಸರು ಎಂದರೆ ಅದು ನೈಲಾ ರಾಜ ಎಂದು.. ಇಮಾದ್ ಮತ್ತು ನೈಲಾ ಬಹಳ ಸಮಯದಿಂದ ಜೊತೆಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನೈಲಾರಾಜ ವೃತ್ತಿಯಲ್ಲಿ ವಕೀಲೆಯಾಗಿದ್ದು, ಪಾಕಿಸ್ತಾನದ ಖ್ಯಾತ ಇನ್ಫ್ಲುಯೆನ್ಸರ್ ಎಂದು ಹೇಳಲಾಗುತ್ತಿದೆ.

ಇಂಬು ನೀಡಿದ ಪತ್ನಿ ಪೋಸ್ಟ್

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಮಾದ್ ವಾಸಿಂ ಅಕ್ರಮ ಸಂಬಂಧ ವಿಚಾರ ವ್ಯಾಪಕವಾಗಿರುವಂತೆಯೇ ಇತ್ತ ಅವರ ಪತ್ನಿಸಾನ್ನಿಯಾ ಅಶ್ಫಾಕ್ (Sannia Ashfaque) ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಸ್ಟೋರಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ.

ಆ ಪೋಸ್ಟ್ ನಲ್ಲಿ ಇಮಾದ್ ವಾಸಿಂ ಪತ್ನಿ ಸಾನ್ನಿಯಾ ಅಶ್ಫಾಕ್ ತಮ್ಮ ಇನ್ ಸ್ಚಾಗ್ರಾಮ್ ಬಯೋನಲ್ಲಿ Wifey to Imad Wasim ದಿಂದ Mama to Inaya Imad & Rayan Imad ಎಂದು ಬದಲಿಸಿದ್ದಾರೆ. ಅಲ್ಲದೆ 'ನಾನು ನಿನ್ನನ್ನು 9 ತಿಂಗಳು ಒಬ್ಬಂಟಿಯಾಗಿ ಹೊತ್ತುಕೊಂಡೆ. ಮುಂದಿನ ಪ್ರಯಾಣಕ್ಕೆ ಅಲ್ಲಾಹು ನನಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ದಯಪಾಲಿಸಲಿ, ಜಯಾನ್ ಎಂದು ಬರೆದುಕೊಂಡಿದ್ದಾರೆ.

ಇದು ಈ ಜೋಡಿ ಬೇರ್ಪಟ್ಟಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಲು ಕಾರಣವಾಗುತ್ತಿದೆ.

ಆರೋಪ ಅಲ್ಲಗಳೆದ ನೈಲಾ ರಾಜ

ಇನ್ನು ನೈಲಾ ರಾಜಾ ಹೆಸರಿನಲ್ಲಿ ಒಂದು ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ ನೆಟ್ಟಿಗರು ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿರುವ ನೈಲಾ, ‘ಈ ಅನೈತಿಕ ಸಂಬಂಧದ ಆರೋಪಗಳನ್ನು ಸುಳ್ಳು ಎಂದು ಕರೆದಿದ್ದಾರೆ. ಆದರೆ ಈ ಬಗ್ಗೆ ಇಮಾದ್ ವಾಸಿಂ ಮಾತ್ರ ಈ ವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com