
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಅಂತಿಮ ಕ್ಷಣದಲ್ಲಿ ಮೈದಾನದಲ್ಲಿ ಇಂಗ್ಲೆಂಡ್ ನಾಯಕ ದೊಡ್ಡ ಹೈಡ್ರಾಮಾ ಮಾಡಿದ್ದು, ಇದಕ್ಕೆ ಭಾರತದ ರವೀಂದ್ರ ಜಡೇಜಾ ಖಡಕ್ ತಿರುಗೇಟು ನೀಡಿದ್ದಾರೆ.
ನಿನ್ನೆ ಮ್ಯಾಂಚೆಸ್ಟರ್ ನಲ್ಲಿ ಮುಕ್ತಾಯವಾದ 4ನೇ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಆಟಗಾರರ ಕಂಗೆಡಿಸಿತ್ತು. ಭಾರತ ಅಂತಿಮ ಸೆಷನ್ ನಲ್ಲೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿತ್ತು.
ಪ್ರಮುಖವಾಗಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಭಾರತದ ಕೆಳ ಕ್ರಮಾಂಕದ ಆಟಗಾರರಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ಇದರಿಂದ ಆಗಬಹುದಾಗಿದ್ದ ಮುಜುಗರ ತಪ್ಪಿಸಿಕೊಳ್ಳಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯ ಡ್ರಾ ಮಾಡಿಕೊಳ್ಳಲು ಮುಂದಾದರು.
ಆದರೆ ಭಾರತದ ರವೀಂದ್ರ ಜಡೇಜಾ ಈ ಮನವಿಯನ್ನು ನಯವಾಗಿಯೇ ತಿರಸ್ಕರಿಸಿ ಬ್ಯಾಟಿಂಗ್ ಮುಂದುವರೆಸುವ ಮೂಲಕ ಖಡಕ್ ತಿರುಗೇಟು ನೀಡಿದರು. ಇದೇ ಕೋಪವನ್ನು ಬೆನ್ ಸ್ಟೋಕ್ಸ್ ಪಂದ್ಯ ಮುಕ್ತಾಯದ ಬಳಿಕ ತೀರಿಸಿಕೊಂಡರು. ಪಂದ್ಯ ಮುಕ್ತಾಯದ ಬಳಿಕ ಸಂಪ್ರದಾಯದಂತೆ ಉಭಯ ತಂಡದ ಆಟಗಾರರು ಹಸ್ತಲಾಘವ ಮಾಡಬೇಕು.
ಆದರೆ ಬೆನ್ ಸ್ಟೋಕ್ಸ್ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಜೊತೆ ಹಸ್ತಲಾಘವ ಮಾಡದೇ ತಮ್ಮ ಅಸಮಾಧಾನ ಪ್ರದರ್ಶಸಿದರು. ಈ ಬೆಳವಣಿಗೆ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಇಷ್ಟಕ್ಕೂ ಆಗಿದ್ದೇನು?
2ನೇ ಇನ್ನಿಂಗ್ಸ್ ನಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಆಟಗಾರರ ಕಂಗೆಡಿಸಿತ್ತು. ಭಾರತ ಅಂತಿಮ ಸೆಷನ್ ನಲ್ಲೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿತ್ತು. ಪ್ರಮುಖವಾಗಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಭಾರತದ ಕೆಳ ಕ್ರಮಾಂಕದ ಆಟಗಾರರಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದರು.
ರವೀಂದ್ರ ಜಡೇಜಾ 90ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ವಾಷಿಂಗ್ಟನ್ ಸುಂದರ್ 85 ರನ್ ಗಳಿಸಿದ್ದರು. ದಿನದಾಟ ಮುಕ್ತಾಯಕ್ಕೆ ಇನ್ನೂ 15 ಓವರ್ ಗಳು ಬಾಕಿ ಇತ್ತು. ಆದರೆ ಇದೇ ಹೊತ್ತಿನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಡ್ರಾ ಡಿಕ್ಲೇರ್ ಮಾಡಿಕೊಳ್ಳುವಂತೆ ಭಾರತ ತಂಡವನ್ನು ಕೇಳಿಕೊಂಡರು.
ಬೆನ್ ಸ್ಟೋಕ್ಸ್ ಮನವಿ ತಿರಸ್ಕರಿಸಿದ ಜಡೇಜಾ
ಇನ್ನು ಆ ಸಮಯದಲ್ಲಿ ಮೈದಾನದಲ್ಲಿದ್ದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್, ತಮ್ಮ ಶತಕದ ಸಮೀಪದಲ್ಲಿದ್ದರು. ಅಲ್ಲದೆ ನಾಯಕ ಶುಭ್ ಮನ್ ಗಿಲ್ ಕೂಡ ಬ್ಯಾಟಿಂಗ್ ಮುಂದುವರೆಸುವಂತೆ ಸೂಚನೆ ನೀಡಿದರು. ಈ ಕಾರಣಕ್ಕೆ ಬೆನ್ ಸ್ಟೋಕ್ಸ್ ಮನವಿಯನ್ನು ರವೀಂದ್ರ ಜಡೇಜಾ ತಿರಸ್ಕರಿಸದರು. ಈ ವೇಳೆ ಇಬ್ಬರೂ ಆಟಗಾರರ ನಡುವೆ ಮೈದಾನದಲ್ಲಿ ಮಾತಿನ ಸಮರ ನಡೆಯಿತು.
ಸ್ಟೋಕ್ಸ್, ಜಡೇಜಾ ಬಳಿ ಹೋಗಿ 100 ರನ್ ಬೇಕಾದರೆ ಈ ಮೊದಲೇ ಹೀಗೆ ಬ್ಯಾಟಿಂಗ್ ಮಾಡಬೇಕಿತ್ತು ಎಂದು ವಾದಿಸಿದರು. ಅಲ್ಲದೆ, ಹ್ಯಾರಿ ಬ್ರೂಕ್ ಹಾಗೂ ಬೆನ್ ಡಕೆಟ್ ಬೌಲಿಂಗ್ನಲ್ಲಿ ಟೆಸ್ಟ್ ಶತಕ ಗಳಿಸಲು ನೀವು ಬಯಸುತ್ತೀರಾ ಎಂದು ವ್ಯಂಗ್ಯವಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಜಡೇಜಾ, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀಯಾ? ಇಲ್ಲಿಂದ ಹೊರಟು ಹೋಗು ಎಂದರು.
ಅಲ್ಲೇ ಇದ್ದ ಕ್ರಾಲಿ ಪ್ರತಿಕ್ರಿಯಿಸುತ್ತಾ ಜಡ್ಡು, ನೀನು ಅವನ (ಸ್ಪೋಕ್ಸ್) ಕೈ ಕುಲುಕಿ ಡ್ರಾ ಘೋಷಿಸು ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಡೇಜಾ 'ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ' ಎಂದು ಉತ್ತರಿಸಿದರು. ಆದರೆ, ಕ್ರಾಲಿ ಅವರು ಜಡೇಜಾ ಮಾತುಗಳನ್ನು ನಿರ್ಲಕ್ಷಿಸಿ, ಜಸ್ಟ್ ಹ್ಯಾಂಡ್ ಶೇಕ್ ಎಂದು ಹೇಳಿ ಒತ್ತಡ ಹೇರಿದರು.
ಕುಪಿತರಾದ ಸೋಕ್ಸ್
ತಮ್ಮ ಮನವಿಯನ್ನು ಭಾರತೀಯ ಆಟಗಾರರು ತಿರಸ್ಕರಿಸಿದ್ದರಿಂದ ಕುಪಿತರಾದ ಬೆನ್ ಸ್ಟೋಕ್ಸ್, ಪಂದ್ಯ ಮುಗಿದ ಬಳಿಕ ಶತಕ ಬಾರಿಸಿ ಮುಂಚಿದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಕೈಕುಲುಕಲು ನಿರಾಕರಿಸಿದರು. ಈ ವೇಳೆ ರವೀಂದ್ರ ಜಡೇಜಾ ಅವರೊಂದಿಗೆ ಬೆನ್ ಸ್ಟೋಕ್ಸ್ ವಾಗ್ವಾದಕ್ಕೂ ಇಳಿದರು.
ಬಳಿಕ ಇದೇ ಕಾರಣಕ್ಕೆ ಬೆನ್ ಸ್ಟೋಕ್ಸ್ ಅರೆ ಕಾಲಿಕ ಬೌಲರ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್‌ಗೆ ಬೌಲಿಂಗ್ ನೀಡಿದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಜಡೇಜಾ ಮತ್ತು ಸುಂದರ್ ಸತತ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಬಿಸಿ ಮುಟ್ಟಿಸಿದರು. ಪಂದ್ಯ ಮುಂದುವರಿಯಿತು. ಬಳಿಕ 5 ಓವರ್ ಆಡಿ, ಇಬ್ಬರೂ ಶತಕ ಸಿಡಿಸಿದ ನಂತರ ಪಂದ್ಯ ಡ್ರಾಗೊಳಿಸಲಾಯಿತು. ಜಡೇಜಾ (107 ನಾಟ್ ಔಟ್) ಮತ್ತು ವಾಷಿಂಗ್ಟನ್ ಸುಂದರ್ (101 ನಾಟ್ ಔಟ್) ಶತಕಗಳನ್ನು ಗಳಿಸಿದರು.
ಕ್ಷುಲ್ಲಕ ಕಾರಣ ನೀಡಿದ ಇಂಗ್ಲೆಂಡ್ ನಾಯಕ
ಪಂದ್ಯ ಡ್ರಾ ಆಗಲಿರುವುದರಿಂದ 15 ಓವರ್ ಬಾಕಿ ಇರುವಾಗಲೇ ಡಿಕ್ಲೇರ್ ಮಾಡಿಕೊಂಡರೆ, ತಮ್ಮ ತಂಡದ ಮುಂಚೂಣಿ ಬೌಲರ್‌ಗಳು ಸಂಭಾವ್ಯ ಗಾಯದ ಅನಾಹುತಗಳಿಂದ ದೂರ ಇರಬಹುದು ಎಂಬುದು ಬೆನ್ ಸ್ಟೋಕ್ಸ್ ಅವರ ಲೆಕ್ಕಾಚಾರವಾಗಿತ್ತು. ಭಾರತದ ವಿರುದ್ಧದ ಐದನೇ ಟೆಸ್ಟ್ ಪಂದ್ಯ ನಿರ್ಣಾಯಕವಾಗಿರುವುದರಿಂದ, ತಮ್ಮ ಬೌಲರ್‌ಗಳ ಸುರಕ್ಷತೆಗೆ ಬೆನ್ ಸ್ಟೋಕ್ಸ್ ಒತ್ತು ನೀಡಿದ್ದಾರೆ.
ವಿಡಿಯೋ ವೈರಲ್
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂಗ್ಲೆಂಡ್ ಆಟಗಾರರ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.
Advertisement