5ನೇ ಟೆಸ್ಟ್‌ ಆಡುವುದು 'ಉತ್ತಮ': ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಭಾರತ ನಾಯಕ ಶುಭಮನ್ ಗಿಲ್ ಮಾಹಿತಿ

ಮುಂದಿನ ವಾರ ಓವಲ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ಆ ಪಂದ್ಯದಲ್ಲಿ ಬುಮ್ರಾ ಅವರನ್ನು ಆಡಿಸುವುದು ಮುಖ್ಯವಾಗಿದೆ.
Jasprit Bumrah
ಜಸ್ಪ್ರೀತ್ ಬುಮ್ರಾ
Updated on

ಭಾನುವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡು ಸರಣಿಯನ್ನು ಜೀವಂತವಾಗಿರಿಸಿದ ನಂತರ, ಜಸ್ಪ್ರೀತ್ ಬುಮ್ರಾ ಅವರನ್ನು ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳಿಗೆ ಸೀಮಿತಗೊಳಿಸುವ ಯೋಜನೆಯನ್ನು ಭಾರತ ಮತ್ತೆ ಕೈಗೆತ್ತಿಕೊಳ್ಳಲಿದೆ. ಈ ವರ್ಷದ ಆರಂಭದಲ್ಲಿ ಬುಮ್ರಾ ಅವರು ಬೆನ್ನುನೋವಿನಿಂದ ಬಳಲುತ್ತಿದ್ದರಿಂದ ಅವರ ಕೆಲಸದ ಹೊರೆಯನ್ನು ನಿಭಾಯಿಸುವ ಪ್ರಯತ್ನದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಮಾತ್ರ ಆಡಿಸಲು ಭಾರತ ನಿರ್ಧರಿಸಿತ್ತು. ವಿಶ್ವದ ಅಗ್ರ ಶ್ರೇಯಾಂಕಿತ ಟೆಸ್ಟ್ ಬೌಲರ್ ಆಗಿರುವ ಬುಮ್ರಾ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಬಾರಿಗೆ ಕಾಣಿಸಿಕೊಂಡರು. ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಮುಂದಿನ ವಾರ ಓವಲ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ಆ ಪಂದ್ಯದಲ್ಲಿ ಬುಮ್ರಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ, ಇಂಗ್ಲೆಂಡ್‌ನ ಬೃಹತ್ 669 ರನ್‌ಗಳನ್ನು ಬೆನ್ನಟ್ಟಿದ ಸಮಯದಲ್ಲಿ 33 ಓವರ್‌ಗಳನ್ನು ಎಸೆದ ಬುಮ್ರಾ ಚೇತರಿಸಿಕೊಳ್ಳಲು ಇದೀಗ ಹೆಚ್ಚು ಸಮಯ ಉಳಿದಿಲ್ಲ. ಗುರುವಾರದಿಂದ ಓವಲ್‌ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

112 ರನ್‌ ನೀಡಿ 2 ವಿಕೆಟ್ ಗಳಿಸಿದ ಬುಮ್ರಾ, 48 ಟೆಸ್ಟ್ ಪಂದ್ಯಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಂದು ಇನಿಂಗ್ಸ್‌ನಲ್ಲಿ ನೂರಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

Jasprit Bumrah
IND vs ENG: 7 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಅನಗತ್ಯ 'ಶತಕ'; ಜಸ್ಪ್ರೀತ್ ಬುಮ್ರಾ ಕಳಪೆ ದಾಖಲೆ!

ಭಾರತದ ನಾಯಕ ಶುಭಮನ್ ಗಿಲ್, 'ಫೈನಲ್‌ಗೆ ಬುಮ್ರಾ ಅವರು ತಂಡದಲ್ಲಿ ಇರುವುದು ಸಂತೋಷದ ಸಂಗತಿ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ನಮಗೆ ಲಭ್ಯವಿದ್ದಾರೆ ಎಂದಾದರೆ ಅದು ನಮಗೆ ಉತ್ತಮವಾಗಿರುತ್ತದೆ. ಅವರು ಆಡದಿದ್ದರೆ, ನಮ್ಮಲ್ಲಿ ಇನ್ನೂ ಉತ್ತಮ ರೀತಿಯ ಬೌಲಿಂಗ್ ದಾಳಿ ಇದೆ ಎಂದು ನಾನು ಭಾವಿಸುತ್ತೇನೆ. ಆಕಾಶ್ ದೀಪ್ ಕೊನೆಯ ಟೆಸ್ಟ್‌ಗೆ ಲಭ್ಯವಿರುತ್ತಾರೆ, ಆದ್ದರಿಂದ ನಮಗೆ 20 ವಿಕೆಟ್‌ಗಳನ್ನು ಪಡೆಯಬಹುದಾದ ಬೌಲಿಂಗ್ ದಾಳಿ ಇರುತ್ತದೆ' ಎಂದು ಗಿಲ್ ಬಿಬಿಸಿಗೆ ತಿಳಿಸಿದರು.

ಸರಣಿಯಿಂದಲೇ ಪಂತ್ ಔಟ್

ಭಾರತ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಾಲ್ಬೆರಳಿನ ಮೂಳೆ ಮುರಿತದಿಂದಾಗಿ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕ್ರಿಸ್ ವೋಕ್ಸ್ ಅವರ ಎಸೆತವು ಅವರ ಕಾಲಿಗೆ ಬಡಿದ ಕಾರಣ ರಕ್ತಸ್ರಾವ ಮತ್ತು ಊತ ಉಂಟಾಗಿದ್ದರಿಂದ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರನಡೆದಿದ್ದರು.

ಆದರೆ, ಗಾಯಗೊಂಡಿದ್ದರೂ ಬ್ಯಾಟಿಂಗ್‌ಗೆ ಹಿಂದಿರುಗಿದ ಅವರು 54 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಆಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿತು.

'ರಿಷಭ್, ಈ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಈಗಾಗಲೇ ಘೋಷಿಸಲಾಗಿದೆ. ರಿಷಭ್ ಅವರು ತಂಡ ಮತ್ತು ದೇಶಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಅವರಿಗೆ ಎಷ್ಟೇ ಹೊಗಳಿದರೂ ಅದು ಕಡಿಮೆಯೇ. ವಿಶೇಷವಾಗಿ ಗಾಯಗೊಂಡಿದ್ದರು ಅವರು ಬ್ಯಾಟಿಂಗ್ ಮಾಡಿದ್ದು ಅದ್ಭುತವಾಗಿತ್ತು' ಎಂದು ಭಾರತದ ಕೋಚ್ ಗೌತಮ್ ಗಂಭೀರ್ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com