IPL 2025 Final Match: RCB, ಕೊಹ್ಲಿಯ 18 ವರ್ಷಗಳ ಕಾಯುವಿಕೆಗೆ ಸಿಗುವುದೇ ಮುಕ್ತಿ? ನೀಗುವುದೇ ಪ್ರಶಸ್ತಿಯ ಬರ?

ಕೊಹ್ಲಿಯು ಪ್ರತಿ ವರ್ಷದಂತೆ ಈ ವರ್ಷವೂ 614 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ತಂಡ ಇವರನ್ನೇ ನೆಚ್ಚಿಕೊಂಡಿಲ್ಲ. ಸಮತೂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ.
RCB Players
ಆರ್ ಸಿಬಿ ಆಟಗಾರರು
Updated on

ಅಹಮದಾಬಾದ್: ನಾಳೆ ಗುಜರಾತಿನ ಅಹಮದಾಬಾದಿನಲ್ಲಿ ವಿಶ್ವದ ಅತಿದೊಡ್ಡ IPLಟಿ-20 ಲೀಗ್ ನ 18ನೇ ಆವೃತ್ತಿಯ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುಧೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.

ಕಂಗೊಳಿಸಲಿರುವ ನಂ.18 ಜೆರ್ಸಿ: ಇಲ್ಲಿನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾವಿರಾರು ಆರ್ ಸಿಬಿ ಅಭಿಮಾನಿಗಳು ನಂ.18 ಜೆರ್ಸಿ ಧರಿಸುವುದರೊಂದಿಗೆ ಕೊಹ್ಲಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಕೊಹ್ಲಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ. RCB ಕ್ವಾಲಿಫೈಯರ್ 1 ರಲ್ಲಿ ಪಂಜಾಬ್‌ನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಡುವುದರೊಂದಿಗೆ ಈ ಬಾರಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

ಕೊಹ್ಲಿಯನ್ನೇ ಅವಲಂಬಿಸಿಲ್ಲ: ಕೊಹ್ಲಿಯು ಪ್ರತಿ ವರ್ಷದಂತೆ ಈ ವರ್ಷವೂ 614 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ತಂಡ ಇವರನ್ನೇ ನೆಚ್ಚಿಕೊಂಡಿಲ್ಲ. ಸಮತೂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಈ ಬಾರಿ ಕೊಹ್ಲಿ ಬ್ಯಾಟಿಂಗ್ ಮಾತ್ರ ಗಮನ ಹರಿಸಲಿಲ್ಲ. ಆರ್ ಸಿಬಿಯನ್ನು ಒಂದು ಉತ್ತಮ ತಂಡವಾಗಿ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಫಿಲ್ ಸಾಲ್ಟ್ ಭಾರತದ ನೆಲಕ್ಕೆ ಹೊಂದಿಕೊಳ್ಳುವ ಮೂಲಕ ಆರ್ ಸಿಬಿ ಪಡೆಯ ಪ್ರಮುಖ ಬ್ಯಾಟರ್ ಆಗಿದ್ದರೆ, ಮಯಾಂಕ್ ಅಗರ್ ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ, ನಂಬಿಕೆಯುಳ್ಳ ಬ್ಯಾಟ್ಸ್ ಮನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಟಿಮ್ ಡೇವಿಡ್ ಫಿಟ್ ಆಗ್ತಾರಾ? ಕಳೆದ ಎರಡು ಪಂದ್ಯಗಳಿಂದ ಹೊರಗೆ ಉಳಿದಿದ್ದ ಟಿಮ್ ಡೇವಿಡ್ ಫಿಟ್ ಆಗ್ತಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಡೇವಿಡ್ ಅವರ ಫಿಟ್‌ನೆಸ್ ಕುರಿತು ತಂಡದ ಮ್ಯಾನೇಜ್‌ಮೆಂಟ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಅವರು ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟಿಮ್ ಡೇವಿಡ್ ಅವರ ಉಪಸ್ಥಿತಿ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. ಆದರೆ ಮೂಲಗಳ ಪ್ರಕಾರ ನಾಳೆ ಅವರು ಆಡೋದು ಡೌಟ್ ಅಂತ ಹೇಳಲಾಗ್ತಿದೆ. ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ ಆರ್ ಸಿಬಿಯ ಉತ್ತಮ ಆಲ್ ರೌಂಡರ್ ಆಗಿದ್ದಾರೆ.

RCB Players
ಅಹ್ಮದಾಬಾದ್ ನಲ್ಲಿ RCB ಬಾಯ್ಸ್ ಗೆಲ್ಲಲಿದ್ದಾರೆ, ಸರ್ಕಾರ ಬೆಂಗಳೂರಿನ ಗೆಲುವನ್ನು ಎದುರುನೋಡುತ್ತಿದೆ: DK Shivakumar

ಜೋಶ್ ಹ್ಯಾಜಲ್ ವುಡ್ ಆಡಿರುವ ಫೈನಲ್ ನಲ್ಲಿ ಒಂದು ಪಂದ್ಯವೂ ಸೋತಿಲ್ಲ: ಬ್ಯಾಟಿಂಗ್ ನಲ್ಲಿ ಕೊಹ್ಲಿಯಂತೆ ಜೋಶ್ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ 21 ವಿಕೆಟ್ ಕಬಳಿಸುವ ಮೂಲಕ ಪರಾಕ್ರಮ ಮೆರೆದಿದ್ದಾರೆ. ಅಲ್ಲದೇ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. ಇವರು ಆಡಿರುವ ಫೈನಲ್ ನಲ್ಲಿ ಯಾವುದೇ ಪಂದ್ಯವೂ ಸೋತಿಲ್ಲ ಎಂಬುದು ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಮುಲ್ಲಾನಾಪುರದಲ್ಲಿ ನಡೆದ ಕ್ವಾಲಿಫೈಯರ್-1ರಲ್ಲಿ ಪಂಜಾಬ್ ಕಿಂಗ್ಸ್ ನ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆಯುವ ಮೂಲಕ ಸುಲಭವಾಗಿ ಆರ್ ಸಿಬಿ ಫೈನಲ್ ಗೆ ಲಗ್ಗೆ ಇಡುವಲ್ಲಿ ಹ್ಯಾಜಲ್ ವುಡ್ ಪ್ರಮುಖ ಪಾತ್ರ ವಹಿಸಿದ್ದರು.

ಪಂಜಾಬ್ ಕಿಂಗ್ಸ್ ಗೆ ರಿಕಿ ಪಾಟಿಂಗ್, ಶ್ರೇಯಸ್ ಬಲ: ಕೋಚ್ ರಿಕಿ ಪಾಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್ 10 ತಂಡಗಳ ಪಾಯಿಂಟ್ ಟೇಬಲ್ಸ್ ನಲ್ಲಿ ಎರಡನೇ ತಂಡವಾಗಿ ಹೊರಹೊಮ್ಮಿದೆ. ಶ್ರೇಯಸ್ ಅಯ್ಯರ್ 603 ರನ್ ಗಳಿಸುವುದರೊಂದಿಗೆ ಅವರ ತಂಡವನ್ನು ಫೈನಲ್ ಗೆ ತಂದಿದ್ದಾರೆ.

ಕಳೆದ ಬಾರಿ ಅವರೇ ನಾಯಕರಾಗಿದ್ದ ಕೆಕೆಆರ್ ಟ್ರೋಫಿ ಗೆದ್ದಿತ್ತು .18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇರೆ ತಂಡಗಳ ನಾಯಕರಾಗಿದ್ದು, ಫೈನಲ್ ಗೆ ತಂದ ಹೆಸರು ಶ್ರೇಯಸ್ ಅವರಿಗೆ ಮಾತ್ರ ಇದೆ. ದೆಹಲಿ ನಾಯಕರಾಗಿದ್ದಾಗಲೂ ಆ ತಂಡ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಗೆ ತರುವ ಮೂಲಕ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.

RCB Players
IPL Final Match: RCB ಗೆದ್ದರೆ ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಹೋಳಿಗೆ ಊಟಕ್ಕೆ ಸಿದ್ಧತೆ!

ಆಕ್ರಮಣಕಾರಿ ಬ್ಯಾಟರ್ ಗಳು:

ಪ್ರಭುಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್, ಪ್ರಿಯಾಂಶ್ ಆರ್ಯ ಮತ್ತು ಶಶಾಂಕ್ ಸಿಂಗ್, ಶ್ರೇಯಸ್ ಅವರಂತಹ ಅತ್ಯುತ್ತಮ ಬ್ಯಾಟರ್ ಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್, ವಿರೋಧಿ ತಂಡದ ಮೇಲೆ ಆಕ್ರಮಣಕಾರಿ ದಾಳಿ ನಡೆಸಬಲ್ಲಾ ತಂಡವಾಗಿದೆ.

ಚಾಹಲ್ ಬೌಲಿಂಗ್ ಮೋಡಿ: ಇನ್ನೂ ಬೌಲಿಂಗ್ ನಲ್ಲಿ ಮಾರ್ಕಸ್ ಜಾನ್ಸೆನ್ ಇಲ್ಲದೆ, ಸ್ವಲ್ಪ ಸೊರಗಿದಂತೆ ಕಂಡರೂ ಮುಂಬೈ ಇಂಡಿಯನ್ಸ್ ಸೋಲಿಸುವ ಮೂಲಕ ತಂಡದ ಬೌಲಿಂಗ್ ಉತ್ತಮವಾಗಿರುವುದಾಗಿ ತೋರಿಸಿದೆ. ಇನ್ನು ಆರ್ ಸಿಬಿಯ ಮಾಜಿ ಬೌಲರ್ ಯುಜ್ವೇಂದ್ರ ಚಾಹಲ್ ಪಂಜಾಬ್ ಪರ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ.

ಮಳೆಯು ಫೈನಲ್ ಪಂದ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಮುನ್ಸೂಚನೆಗಳಿಲ್ಲ. ಒಂದು ವೇಳೆ ಆಟದ ಸಮಯಕ್ಕೆ ಮಳೆ ಬಂದರೂ 120 ನಿಮಿಷಗಳವರೆಗೆ ಸಮಯ ವಿಸ್ತರಣೆ ಅಥವಾ ಬೇರೊಂದು ದಿನಕ್ಕೆ ಪಂದ್ಯ ನಿಗದಿತ ಮತ್ತಿತರ ಕ್ರಮ ಕೈಗೊಳ್ಳಬಹುದು.

ಆರ್ ಸಿಬಿ ತಂಡ ಇಂತಿದೆ: ರಜತ್ ಪಾಟಿದಾರ್ (ನಾಯಕ) ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ (ವಿಕೆಟ್ ಕೀಪರ್) ಜಿತೇಶ್ ಶರ್ಮಾ (ವಿಕೆಟ್ ಕೀಪರ್) ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ರಸಿಖ್ ಶರ್ಮಾ ದರ್, ಭುವನೇಶ್ವರ್ ಸಲಾಮ್ ದಾರ್, ಸುಯಶ್ಶ್ವರ್ ಸಲಾಮ್ ದರ್, ಹೀಗೆ. ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಯಶ್ ದಯಾಳ್.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ಸಿ), ನೆಹಾಲ್ ವಧೇರಾ, ವಿಷ್ಣು ವಿನೋದ್ (ವಾಕ್), ಜೋಶ್ ಇಂಗ್ಲಿಸ್ (ವಾಕ್), ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರಭಾಸಿಮ್ರಾನ್ ಸಿಂಗ್ (ವಾಕ್), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಹರ್ಪ್ರೀತ್ ಬ್ರಾರ್, ಅಜ್ಮತುಲ್ಲಾ ಒಮರ್ಜೈ, ಪ್ರಿಯಾನ್ಶ್ ಖಾನೇಶ್, ಮುಹರ್ಶೇ, ಪ್ರಿಯಾನ್ಶ್ ಅರ್ಜೆ, ಎ. ಮಿಚ್ ಓವನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ಕುಲದೀಪ್ ಸೇನ್, ಕ್ಸೇವಿಯರ್ ಬಾರ್ಟ್ಲೆಟ್, ಪ್ರವೀಣ್ ದುಬೆ, ಕೈಲ್ ಜೇಮಿಸನ್.

ಪಂದ್ಯ: ರಾತ್ರಿ 7:30ಕ್ಕೆ ಆರಂಭ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com