
ಬೆಂಗಳೂರು: ಆರ್ ಸಿಬಿ- ಪಂಜಾಬ್ ನಡುವಿನ IPL 2025 ಟೂರ್ನಿಯ ಫೈನಲ್ಸ್ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಬಾರಿ ಆರ್ ಸಿಬಿ ಕಪ್ ಗೆಲ್ಲಲಿದೆ ಎಂಬ ವಿಶ್ವಾಸ ಒಂದೆಡೆಯಾದರೆ, ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಹೆಚ್ಚುತ್ತಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಆರ್ ಸಿಬಿಗೆ ಶುಭಕೋರುತ್ತಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಸಹ ಆರ್ ಸಿಬಿ-ಪಂಜಾಬ್ ನಡುವಿನ ಫೈನಲ್ಸ್ ಪಂದ್ಯದ ಬಗ್ಗೆ ಮಾತನಾಡಿದ್ದು, ಆರ್ ಸಿಬಿ ಹುಡುಗರು ಅಹ್ಮದಾಬಾದ್ ನಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನಗೆ ಸಂತಸವಾಗುತ್ತಿದೆ. ಬಹಳ ಸಮಯದ ನಂತರ ಅವರು ಫೈನಲ್‌ಗೆ ಬಂದಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕದ ಜನರು ಅವರ ಗೆಲುವಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ಜನರು ಅಹಮದಾಬಾದ್‌ನಲ್ಲಿ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅವರು ಗೆದ್ದು ಮತ್ತೆ ಬರಲಿ ಎಂದು ನಾವು ಆಶಿಸೋಣ ಮತ್ತು ಪ್ರಾರ್ಥಿಸೋಣ." ಎಂದು ಹೇಳಿದ್ದಾರೆ.
Advertisement