IPL 2025 Final Match: 'ಫಲಿತಾಂಶ ಏನೇ ಆದರೂ ನನಗೆ ನೋವುಂಟು ಮಾಡಲಿದೆ'; ರಾಜಮೌಳಿ ಈ ಮಾತಿನ ಮರ್ಮವೇನು?
ಬೆಂಗಳೂರು: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಫಲಿತಾಂಶ ಏನೇ ಬಂದರೂ ನನಗೆ ನೋವುಂಟು ಮಾಡಲಿದೆ ಎಂದು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹೇಳಿದ್ದಾರೆ.
ಐಪಿಎಲ್ 2025 ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಜಮೌಳಿ, ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆದಾಗ ಈ ತಂಡವನ್ನು ಫೈನಲ್ ಗೆ ಕರೆದೊಯ್ಯುತ್ತಾನೆ. ಆತನ ನಾಯಕತ್ವದಲ್ಲಿ ಕೋಲ್ಕತ್ತ ಕಪ್ ಗೆದ್ದಿದೆ. 11 ವರ್ಷಗಳ ನಂತರ ಪಂಜಾಬ್ ನ್ನು ಫೈನಲ್ ಗೆ ತಲುಪಿಸಿದ್ದಾರೆ. ಟ್ರೋಫಿ ಗೆಲ್ಲುವುದಕ್ಕೆ ಇವರು ಅರ್ಹರು ಎಂದಿದ್ದಾರೆ.
ಈ ಮೂಲಕ ರಾಜಮೌಳಿ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಕಡೆಗೆ ತುಸು ಬೆಂಬಲ ವ್ಯಕ್ತಪಡಿಸಿದಂತೆ ಫೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ, ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸಾವಿರಾರು ರನ್ ಹೊಡೆದಿದ್ದಾರೆ, ಕೊಹ್ಲಿ ಕೂಡಾ ಕಪ್ ಗೆಲ್ಲಲ್ಲು ಅರ್ಹರು. ಒಟ್ಟಾರೇ ಫಲಿತಾಂಶ ಏನೇ ಆದರೂ ನನಗೆ ನೋವುಂಟು ಮಾಡಲಿದೆ ಎಂದು ಹೇಳಿದ್ದಾರೆ.