ಕಾಲ್ತುಳಿತ ಪ್ರಕರಣ: 'ವಿರಾಟ್ ಕೊಹ್ಲಿಗೆ ಘಟನೆ ಬಗ್ಗೆ ತಿಳಿದಿತ್ತು ಎಂದರೆ ನಂಬಲು ಸಾಧ್ಯವಿಲ್ಲ'; ಭಾರತದ ಮಾಜಿ ಕ್ರಿಕೆಟಿಗ

ಕಾಲ್ತುಳಿತದಲ್ಲಿ ಕೆಲವು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದಿದ್ದರೂ ಸಹ ಅಭಿನಂದನಾ ಕಾರ್ಯಕ್ರಮ ಮುಂದುವರೆಸಿದ್ದು ಸಂವೇದನೆ ರಹಿತ ಕೃತ್ಯ ಎಂದು ಆರ್‌ಸಿಬಿ ಫ್ರಾಂಚೈಸಿ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸಲಾಗುತ್ತಿದೆ.
Virat Kohli
ಆರ್ಸಿಬಿ ತಂಡದ ಆಟಗಾರರ ಜೊತೆ ವಿರಾಟ್ ಕೊಹ್ಲಿ
Updated on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ದುರಂತ ಕಾಲ್ತುಳಿತದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ವಿಜಯೋತ್ಸವದ ಸಂಭ್ರಮಾಚರಣೆಗೆ ಅಡ್ಡಿಯಾಯಿತು. ಕಾಲ್ತುಳಿತದಲ್ಲಿ ಕನಿಷ್ಠ 11 ಜನರು ಪ್ರಾಣ ಕಳೆದುಕೊಂಡರು ಮತ್ತು ಹಲವಾರು ಜನರು ಗಾಯಗೊಂಡರು. ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ವಿಫಲರಾದರು. ಹೊರಗೆ ಕಾಲ್ತುಳಿತದ ನಡುವೆಯೂ ಕ್ರೀಡಾಂಗಣದೊಳಗೆ ಅಭಿನಂದನಾ ಸಮಾರಂಭ ಮುಂದುವರೆದಿದ್ದಕ್ಕೆ ಹಲವರು ಕಿಡಿಕಾರಿದ್ದಾರೆ.

ಕಾಲ್ತುಳಿತದಲ್ಲಿ ಕೆಲವು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದಿದ್ದರೂ ಸಹ ಅಭಿನಂದನಾ ಕಾರ್ಯಕ್ರಮ ಮುಂದುವರೆಸಿದ್ದು ಸಂವೇದನೆ ರಹಿತ ಕೃತ್ಯ ಎಂದು ಆರ್‌ಸಿಬಿ ಫ್ರಾಂಚೈಸಿ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸಲಾಗುತ್ತಿದೆ.

ನಂತರ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದರೂ, ಸನ್ಮಾನ ಕಾರ್ಯಕ್ರಮ ತಕ್ಷಣವೇ ಕೊನೆಗೊಳ್ಳದಿರುವುದು ಹಲವರನ್ನು ಕೆರಳಿಸಿದೆ. ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್, ಈ ದುರಂತದ ಬಗ್ಗೆ ಕೊಹ್ಲಿ ಅವರಿಗೆ ತಿಳಿದಿತ್ತು. ಹೀಗಿದ್ದರೂ, ಸಮಾರಂಭವನ್ನು ಮುಂದುವರಿಸಲು ನಿರ್ಧರಿಸಿದ್ದರು ಎಂಬ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂದಿದ್ದಾರೆ.

Virat Kohli
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ: 'RCB ವಿರುದ್ಧ ಮೊಕದ್ದಮೆ ಹೂಡಬೇಕು'; ಭಾರತದ ಮಾಜಿ ಕ್ರಿಕೆಟಿಗ ಟೀಕೆ

'ಸಂಭ್ರಮಾಚರಣೆ ವೇಳೆ ಕ್ರೀಡಾಂಗಣದ ಹೊರಗೆ ಜನರು ಕಾಲ್ತುಳಿತದಿಂದ ಸಾವಿಗೀಡಾಗಿದ್ದಾರೆ ಎಂಬುದು ವಿರಾಟ್ ಕೊಹ್ಲಿ ಅವರಿಗೆ ತಿಳಿದಿತ್ತು ಎಂಬುದನ್ನು ನಂಬಲು ಸಾಧ್ಯವಿಲ್ಲ. ಕಾಲ್ತುಳಿತ ಮತ್ತು ಸಾವುಗಳ ಬಗ್ಗೆ ತಿಳಿದಿದ್ದರೆ, ಕೊಹ್ಲಿ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುತ್ತಿರಲಿಲ್ಲ' ಎಂದು ವಾಸನ್ ANI ಜೊತೆಗೆ ತಿಳಿಸಿದ್ದಾರೆ.

ಆರ್‌ಸಿಬಿ ಆಡಳಿತ ಮಂಡಳಿ ಮತ್ತು ರಾಜಕಾರಣಿಗಳಿಗೆ ಈ ದುರಂತ ಘಟನೆಯ ಬಗ್ಗೆ ತಿಳಿದಿರುವ ಸಾಧ್ಯತೆ ಇದೆ. ಆದರೆ, ವಿರಾಟ್ ಕೊಹ್ಲಿಗೆ ಈ ಬಗ್ಗೆ ತಿಳಿದಿತ್ತು ಎಂದರೆ ಅದನ್ನು ನಂಬಲು ಸಾಧ್ಯವಿಲ್ಲ' ಎಂದು ಹೇಳಿದರು.

'ರಾಜಕಾರಣಿಗಳಿಗೆ ಘಟನೆ ಬಗ್ಗೆ ತಿಳಿದಿತ್ತು ಎಂದರೆ ನಾನು ನಂಬಬಲ್ಲೆ, ಏಕೆಂದರೆ ಅವರು ನಿರ್ದಯಿಗಳು, ದಪ್ಪ ಚರ್ಮದವರು ಮತ್ತು ಕಾರ್ಪೊರೇಟ್, ಅಂದರೆ ಆರ್‌ಸಿಬಿ ಫ್ರಾಂಚೈಸಿ ಕೂಡ ಹಾಗೆಯೇ. ಫ್ರಾಂಚೈಸಿಗಳು ಬ್ಯಾಲೆನ್ಸ್ ಶೀಟ್‌ಗಳನ್ನು ಮತ್ತು ಆದಾಯವನ್ನು ತೋರಿಸಬೇಕಾಗಿರುವುದರಿಂದ ಅವರು ಕಾಳಜಿ ವಹಿಸುವುದಿಲ್ಲ. ಅವರಿಗೆ ಬಹುಶಃ ತಿಳಿದಿರಬಹುದು. ಅದು ಸಂವಹನದ ಕೊರತೆಯಾಗಿರಬಹುದು. ವಿರಾಟ್ ಮತ್ತು ಆಟಗಾರರು ತಿಳಿದುಕೊಳ್ಳುವ ಹೊತ್ತಿಗೆ, ಘಟನೆ ನಡೆದುಹೋಗಿತ್ತು. ಅದರಲ್ಲಿ ಅವರ ಯಾವುದೇ ಪಾತ್ರವಿರಲಿಲ್ಲ. ವಿರಾಟ್‌ಗೆ ತಿಳಿದಿದ್ದರೆ, ಅವರು ತಕ್ಷಣ ಹೊರನಡೆಯುತ್ತಿದ್ದರು. ವಿರಾಟ್‌ಗೆ ತಿಳಿದಿದೆ ಮತ್ತು ನಂತರ ಇದು ಸಂಭವಿಸಿದೆ ಎಂದು ನಾನು ನಂಬಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com