
ಲಖನೌ: ಭಾರತ ಕ್ರಿಕೆಟ್ ತಂಡದ ಮಿಸ್ಟ್ರಿ ಸ್ಪಿನ್ನರ್ ಕುಲದೀಪ್ ಯಾದವ್ (Kuldeep Yadav) ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಬಾಲ್ಯದ ಗೆಳತಿ ವಂನ್ಶಿಕಾ ಎಂಬುವರನ್ನು ವಿವಾಹವಾಗುತ್ತಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಕುಲದೀಪ್ ಯಾದವ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಕುಲದೀಪ್ ಯಾದವ್ ಮತ್ತು ವಂನ್ಶಿಕಾ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಈ ಸರಳ ಕಾರ್ಯಕ್ರಮಕ್ಕೆ ಕುಲದೀಪ್ ಯಾದವ್ ತಮ್ಮ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದರು. ಅದರಂತೆ ರಿಂಕು ಸಿಂಗ್ ಸೇರಿದಂತೆ ಹಲವು ಆಪ್ತರು ಈ ಎಂಗೇಜ್ ಮೆಂಟ್ ನಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗಷ್ಟೇ ರಿಂಕು ಸಿಂಗ್ ಕೂಡ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದರ ಬೆನ್ನಲೇ ಈ ನಿಶ್ಚಿತಾರ್ಥ ನಡೆದಿದೆ.
ಸೀಕ್ರೇಟ್ ಗೆಳತಿ
ಅಂದಹಾಗೆ ಕುಲದೀಪ್ ಯಾದವ್ ಭಾವಿ ಪತ್ನಿ ವಂನ್ಶಿಕಾ, ಲಕ್ನೋದ ಶ್ಯಾಮ್ ನಗರದ ನಿವಾಸಿಯಾಗಿದ್ದಾರೆ. ಪ್ರಸ್ತುತ ಅವರು ಎಲ್ ಐಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕುಲದೀಪ್ ಯಾದವ್ ಮತ್ತು ವಂಶಿಕಾ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಇಬ್ಬರೂ ಕಾನ್ಪುರದಲ್ಲಿ ಬಾಲ್ಯ ಸ್ನೇಹಿತರು ಎನ್ನಲಾಗಿದೆ. ಬಾಲ್ಯದ ಸ್ನೇಹ ಕ್ರಮೇಣ ಪ್ರೀತಿಯಾಗಿ ಬದಲಾಗಿದ್ದು, ಈಗ ಇಬ್ಬರೂ ಜೀವನ ಸಂಗಾತಿಗಳಾಗಲು ಸಿದ್ಧರಾಗಿದ್ದಾರೆ.
ಕುಲದೀಪ್ ಮತ್ತು ವಂಶಿಕಾ ತಮ್ಮ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಸಮಾರಂಭದ ಕೆಲವು ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ನಿಶ್ಚಿತಾರ್ಥದ ನಂತರ, ಕುಲ್ದೀಪ್ ಯಾದವ್ ಟೀಮ್ ಇಂಡಿಯಾದ ಭಾಗವಾಗಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಂದು ಆರಂಭವಾಗಲಿದೆ. ಈ ಸರಣಿಯ ನಂತರ ಕುಲ್ದೀಪ್ ಮತ್ತು ವಂಶಿಕಾ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.
Advertisement