'ಐಪಿಎಲ್ ಆಡುತ್ತಿದ್ದ ವೇಳೆ ಅರ್ಹತೆಗಿಂತ ಹೆಚ್ಚಿನ ಸಂಭಾವನೆ ಸಿಕ್ಕಿದೆ': RCB ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌

ಆರ್‌ಸಿಬಿಯ ಗೆಲುವನ್ನು ಆಚರಿಸಲು ಗೇಲ್ ಮತ್ತು ಡಿವಿಲಿಯರ್ಸ್ ಕೂಡ ಅಹಮದಾಬಾದ್‌ನಲ್ಲಿ ಹಾಜರಿದ್ದರು. ಭಾರತದ ಮಾಜಿ ಕ್ರಿಕೆಟಿಗ-ಬ್ರಾಡ್‌ಕಾಸ್ಟರ್ ಅಭಿನವ್ ಮುಕುಂದ್, ಡಿವಿಲಿಯರ್ಸ್ ನೀಡಿದ ಹೇಳಿಕೆಯೊಂದನ್ನು ಬಹಿರಂಗಪಡಿಸಿದ್ದಾರೆ.
AB de Villiers
ಎಬಿ ಡಿವಿಲಿಯರ್ಸ್‌
Updated on

ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಹಿಂದೆ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ ಅವರಂತಹ ಅಸಾಧಾರಣ ಟಿ20 ಕ್ರಿಕೆಟಿಗರನ್ನು ಹೊಂದಿದ್ದರೂ, 18 ವರ್ಷಗಳಿಂದಲೂ ಆರ್‌ಸಿಬಿ ಪ್ರಶಸ್ತಿ ಬರವನ್ನು ಎದುರಿಸುತ್ತಿತ್ತು. ಆರ್‌ಸಿಬಿಯ ಗೆಲುವನ್ನು ಆಚರಿಸಲು ಗೇಲ್ ಮತ್ತು ಡಿವಿಲಿಯರ್ಸ್ ಕೂಡ ಅಹಮದಾಬಾದ್‌ನಲ್ಲಿ ಹಾಜರಿದ್ದರು. ಭಾರತದ ಮಾಜಿ ಕ್ರಿಕೆಟಿಗ-ಬ್ರಾಡ್‌ಕಾಸ್ಟರ್ ಅಭಿನವ್ ಮುಕುಂದ್, ಡಿವಿಲಿಯರ್ಸ್ ನೀಡಿದ ಹೇಳಿಕೆಯೊಂದನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ನಲ್ಲಿ ಆಟಗಾರನಾಗಿದ್ದ ಸಮಯದಲ್ಲಿ ತಮಗೆ ಹೆಚ್ಚಿನ ಸಂಭಾವನೆ ಸಿಕ್ಕಿತ್ತು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

'ನಾನು ಎಬಿ ಡಿವಿಲಿಯರ್ಸ್ ಪಕ್ಕದಲ್ಲಿ ಕುಳಿತಿದ್ದೆ ಮತ್ತು ಅವರು ಐಪಿಎಲ್‌ನ ಯಾವುದೇ ದಂತಕಥೆಗಳು ಈವರೆಗೆ ಹೇಳಿಲ್ಲದ ಮಾತೊಂದನ್ನು ಹೇಳಿದರು. ಐಪಿಎಲ್‌ನಲ್ಲಿ ಆಡಿದ ಸಮಯದಲ್ಲಿ ತನಗೆ ಅರ್ಹವಾದುದಕ್ಕಿಂತ ಹೆಚ್ಚಿನ ಸಂಭಾವನೆ ಸಿಕ್ಕಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಅವರು ನಿಜವಾಗಿಯೂ ಈ ರೀತಿ ಹೇಳಿದರು ಮತ್ತು ಅದನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸಿದರು' ಎಂದು ಮುಕುಂದ್ ಬಹಿರಂಗಪಡಿಸಿದರು.

ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಅರ್ಹರಿಗಿಂತ ಹೆಚ್ಚಿನ ಸಂಭಾವನೆ ಪಡೆದಿದ್ದೇನೆ. ನನಗೆ ಪಾವತಿಸಲು ಬಳಸಲಾದ ಹಣವನ್ನು ತಂಡಕ್ಕೆ ಇತರ ಸೂಪರ್‌ಸ್ಟಾರ್ ಆಟಗಾರರು ಅಥವಾ ಪಂದ್ಯ ವಿಜೇತರನ್ನು ನೇಮಿಸಿಕೊಳ್ಳಲು ಖರ್ಚು ಮಾಡಬಹುದಿತ್ತು. ಫಿಲ್ ಸಾಲ್ಟ್ ಅಥವಾ ಜಾಶ್ ಹೇಜಲ್‌ವುಡ್‌ನಂತಹ ಅಗ್ರ ಅಂತರರಾಷ್ಟ್ರೀಯ ಆಟಗಾರರಿಗೂ ₹15 ಕೋಟಿಗಿಂತ ಹೆಚ್ಚಿನ ಸಂಭಾವನೆ ಸಿಗಲಿಲ್ಲ. ಇದಕ್ಕೆ ಹೋಲಿಸಿದರೆ ವೈಯಕ್ತಿಕವಾಗಿ ನಾನು ಹೆಚ್ಚಿನ ಸಂಭಾವನೆ ಪಡೆದಿದ್ದೇನೆ ಎಂದು ಡಿವಿಲಿಯರ್ಸ್ ನನಗೆ ಹೇಳಿದ್ದರು ಎಂದು ಮುಕುಂದ್‌ ತಿಳಿಸಿದರು.

ಆರ್‌ಸಿಬಿ ಫ್ರಾಂಚೈಸಿಯೊಂದಿಗಿನ 11 ವರ್ಷಗಳ ಅವಧಿಯಲ್ಲಿ ಮೆಗಾ ಹರಾಜಿಗೂ ಮುನ್ನ ಎರಡು ಬಾರಿ ಡಿವಿಲಿಯರ್ಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. 2014 ಮತ್ತು 2018ರಲ್ಲಿ ಕ್ರಮವಾಗಿ 7.50 ಕೋಟಿ ಮತ್ತು 11 ಕೋಟಿ ರೂ.ಗಳಿಗೆ ಡಿವಿಲಿಯರ್ಸ್ ಅವರನ್ನು ಉಳಿಸಿಕೊಳ್ಳಲಾಯಿತು.

ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾವುದೇ ಆಟಗಾರನ ಮೇಲೆ 12.50 ಕೋಟಿ ರೂ. ಖರ್ಚು ಮಾಡದಿದ್ದರೂ, ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ.ಗೆ ಉಳಿಸಿಕೊಂಡಿತು. ವೆಂಕಟೇಶ್ ಅಯ್ಯರ್ ಅವರನ್ನು 23.50 ಕೋಟಿ ರೂ.ಗೆ ಖರೀದಿಸಲು ಪ್ರಯತ್ನಿಸಿತು. ಆದರೆ, ಅವರು ಅಂತಿಮವಾಗಿ 23.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದರು.

ವೆಂಕಟೇಶ್ ಅವರನ್ನು ಖರೀದಿಸದೆ ಇರುವುದು ಆರ್‌ಸಿಬಿ ಪರವಾಗಿ ಕೆಲಸ ಮಾಡಿತು. ಏಕೆಂದರೆ, ಅವರು ಐಪಿಎಲ್ 2025ರ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದ್ದಾರೆ ಎಂದು ಮುಕುಂದ್ ಹೇಳಿದ್ದಾರೆ.

'ಹಿಂತಿರುಗಿ ನೋಡಿದಾಗ, ದೇವರಿಗೆ ಧನ್ಯವಾದಗಳು, ನಾವು ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲಿಲ್ಲ ಎಂದು ಅವರು ಯೋಚಿಸುತ್ತಿರಬಹುದು. ವೆಂಕಟೇಶ್ ಅಯ್ಯರ್ ಬಳಿಕ ಜಾಶ್ ಹೇಜಲ್‌ವುಡ್, ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಮರುದಿನ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದರು' ಎಂದು ಮುಕುಂದ್ ಹೇಳಿದರು.

AB de Villiers
'ಈ ಸಲ ಕಪ್ ನಮ್ದು'..: IPL Final ಗೆಲ್ಲುತ್ತಿದ್ದಂತೆಯೇ AB de Villiers ಬಳಿ ಮಗುವಿನಂತೆ ಓಡಿ ಬಿಗಿದಪ್ಪಿದ Virat Kohli, ಸಾಥ್ ಕೊಟ್ಟ Chris Gayle!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com