
ಮುಂಬೈ: IPL 2025 ಟೂರ್ನಿಯಲ್ಲಿ ನಾಯಕನಾಗಿರದ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಅಂತಾ ಹೇಳಿ ಭಾರತದ ಮಾಜಿ ಆರಂಭಿಕ ಬ್ಯಾಟರ್ ನವಜೋತ್ ಸಿಂಗ್ ಸಿಧು ಅಭಿಮಾನಿಗಳಿಂದ ತೀವ್ರವಾಗಿ ಟ್ರೋಲ್ ಗೆ ತುತ್ತಾಗಿದ್ದಾರೆ.
ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಮುಂಬೈ ಇಂಡಿಯನ್ಸ್ ಸೋತಿತ್ತು. ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ 15 ಪಂದ್ಯಗಳಿಂದ 415 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳಿಂದ 717 ರನ್ ಗಳಿಸಿದ ಸೂರ್ಯ ಕುಮಾರ್ ಯಾದವ್ IPL 2025 ರ 'ಅತ್ಯಂತ ಮೌಲ್ಯಯುತ ಆಟಗಾರ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ತದನಂತರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ರೋಹಿತ್ ಶರ್ಮಾ ಆಗಿದ್ದಾರೆ.
"ರೋಹಿತ್ ಶರ್ಮಾ, ಮುಂಬೈನ ಕಿಂಗ್. ಯಾಕೆ? ಐದು ಐಪಿಎಲ್ ಪ್ರಶಸ್ತಿ, ಒಂದು ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿ. ಒಂದು ಚಾಂಪಿಯನ್ಸ್ ಟ್ರೋಫಿ ಕೂಡ ಗೆದಿದ್ದಾರೆ. ಹಾಗಾಗಿ, ಅವರು ಬಹುತೇಕ ಎಲ್ಲವನ್ನೂ ಸಾಧಿಸಿದ್ದಾರೆ" ಎಂದು ಸಿಧು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದಲ್ಲಿ ಹೇಳಿದ್ದಾರೆ.
ಈ ಹೇಳಿಕೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಏಕೆಂದರೆ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕ ಆಗಿರಲಿಲ್ಲ. ಅಧಿಕೃತ ತಂಡದ ಭಾಗ ಕೂಡಾ ಆಗಿರಲಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳು ಭಾರಿ ಟ್ರೋಲ್ ಮಾಡುತ್ತಿದ್ದಾರೆ.
Advertisement