
ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿರುವುದು ಟೀಂ ಇಂಡಿಯಾಗೆ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಚರ್ಚೆಗೆ ಕಾರಣವಾಗಿದೆ. ಲೀಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದರ ಕುರಿತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದ ಎರಡು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ಹಲವು ತಾರೆಯರು ಆಡಿದ್ದು, ನಾರ್ಥಾಂಪ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಕೆಎಲ್ ರಾಹುಲ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ನಂತರ 50ಕ್ಕೂ ಹೆಚ್ಚು ರನ್ ಗಳಿಸಿದರು. ಈ ಮೂಲಕ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಭಾರತದ ಮಾಜಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ, ರಾಹುಲ್ ಅವರನ್ನು ಆರಂಭಿಕ ಆಟಗಾರನಾಗಿ ಮುಂದುವರಿಸುವಂತೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಸಲಹೆ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆಗೆ ಸಾಯಿ ಸುದರ್ಶನ್ ಅವರನ್ನು ಸೇರಿಸಿಕೊಳ್ಳುವಂತೆ ಹಾಗೂ ನಾಯಕ ಶುಭಮನ್ ಗಿಲ್ ಅವರನ್ನು 4 ಮತ್ತು ಕರುಣ್ ನಾಯರ್ ಅವರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸುವಂತೆ ಹೇಳಿದ್ದಾರೆ.
'ನಾನು ಆರಂಭದಿಂದಲೇ ಬಲಿಷ್ಠವಾಗಿ ಪ್ರಾರಂಭಿಸಲು ಬಯಸುತ್ತೇನೆ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಆಡಬೇಕೆಂದು ನಾನು ಬಯಸುತ್ತೇನೆ. ಅವರು ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಮತ್ತು ಹಿಂದೆ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಭಾರತಕ್ಕೆ ಉತ್ತಮ ಶಕುನವಾಗಿದೆ. ಅವರನ್ನು ಆರಂಭಿಕನಾಗಿ ಬ್ಯಾಟಿಂಗ್ ಮಾಡಲು ಇದು ಅವಕಾಶ ನೀಡುತ್ತದೆ' ಎಂದು ಉತ್ತಪ್ಪ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
'3ನೇ ಸ್ಥಾನದಲ್ಲಿ, ಸಾಯಿ ಸುದರ್ಶನ್ ಅವರಂತಹ ವ್ಯಕ್ತಿಯನ್ನು ನೋಡಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಅವರು ತುಂಬಾ ಉತ್ತಮ ಅಥವಾ ಸರಿಯಾದ ಬ್ಯಾಟಿಂಗ್ ತಂತ್ರವನ್ನು ಹೊಂದಿದ್ದಾರೆ. ಅವರ ಸಾಮರ್ಥ್ಯವು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಏನು ಮಾಡಬಹುದು ಮತ್ತು ಸಾಧಿಸಬಹುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 4ನೇ ಸ್ಥಾನದಲ್ಲಿ ಶುಭಮನ್ ಗಿಲ್. 5ನೇ ಸ್ಥಾನದಲ್ಲಿ ಕರುಣ್ ನಾಯರ್ ಇರುತ್ತಾರೆ. ಏಕೆಂದರೆ ನಿಮಗೆ ಅಲ್ಲಿ ಸ್ವಲ್ಪ ಅನುಭವ ಬೇಕು' ಎಂದು ಅವರು ಹೇಳಿದರು.
'ನಂ. 6ರಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಇರಲಿ ಎಂದು ನಾನು ಭಾವಿಸುತ್ತೇನೆ. 7ನೇ ಸ್ಥಾನದಲ್ಲಿ ನನಗೆ ನಿತೀಶ್ ಕುಮಾರ್ ರೆಡ್ಡಿ ಇರುತ್ತಾರೆ. ಏಕೆಂದರೆ ಅವರು ಸರಿಯಾದ ವೇಗದ ಬೌಲಿಂಗ್ ಆಲ್‌ರೌಂಡರ್. ನಿಮ್ಮ ನಾಲ್ಕನೇ ವೇಗದ ಬೌಲಿಂಗ್ ಆಯ್ಕೆ' ಎಂದು ಅವರು ವಿವರಿಸಿದರು.
ಬ್ಯಾಟಿಂಗ್‌ಗೆ ಹೆಚ್ಚಿನ ಆಳವನ್ನು ನೀಡಲು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಂಡ ಉತ್ತಪ್ಪ, ಕುಲದೀಪ್ ಯಾದವ್ ಅವರನ್ನು ಕೈಹಿಟ್ಟರು. ನಿರ್ಲಕ್ಷಿಸಿದರು. ನನಗೆ ಜಡೇಜಾ ಅವರ ಆಯ್ಕೆ ಬೇಕು. ಇಂಗ್ಲೆಂಡ್‌ನಲ್ಲಿ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ರನ್ ಗಳಿಸಿದ್ದಾರೆ. ಆದ್ದರಿಂದ ನಾನು ಅವರನ್ನು 8ನೇ ಸ್ಥಾನದಲ್ಲಿ ಇರಿಸುತ್ತೇನೆ' ಎಂದರು.
ವೇಗಿ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿದರು.
ಇಂಗ್ಲೆಂಡ್ ಟೆಸ್ಟ್‌ಗೆ ರಾಬಿನ್ ಉತ್ತಪ್ಪ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭಮನ್ ಗಿಲ್, ಕರುಣ್ ನಾಯರ್, ರಿಷಬ್ ಪಂತ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
Advertisement