'ತುಂಬಾ ತುಂಬಾ ನಿರಾಶಾದಾಯಕ': ಟೀಂ ಇಂಡಿಯಾ ಬಗ್ಗೆ ಸುನೀಲ್ ಗವಾಸ್ಕರ್ ಟೀಕೆ; ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿ

ಯಶಸ್ವಿ ಜೈಸ್ವಾಲ್ ಐದನೇ ಓವರ್‌ನಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಅದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕ್ಯಾಚ್ ಅನ್ನು ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಮತ್ತೆ ಕೈಬಿಟ್ಟರು.
Sunil Gavaskar
ಸುನೀಲ್ ಗವಾಸ್ಕರ್
Updated on

ಶನಿವಾರ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ವಿರುದ್ಧ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ದಿನವಾಗಬೇಕಿತ್ತು. ಆದರೆ, ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಎಲ್ಲವೂ ಬದಲಾಯಿತು. ಯಶಸ್ವಿ ಜೈಸ್ವಾಲ್ ಅವರ ಶತಕದ ನಂತರ, ನಾಯಕ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರು ಭಾರತವನ್ನು 500ಕ್ಕೂ ಹೆಚ್ಚು ರನ್ ಕಲೆಹಾಕುವಂತೆ ಕಂಡರೂ, ಭಾರತವು ಕೇವಲ 41 ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಭಾರತ 471ಕ್ಕೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ಕೆಲವು ಸುಲಭ ಕ್ಯಾಚ್‌ಗಳನ್ನು ಕೈಬಿಡಲಿದ್ದರೆ ಇಂಗ್ಲೆಂಡ್ ಅನ್ನು ಮತ್ತಷ್ಟು ಕಡಿಮೆ ರನ್‌ಗಳಿಗೆ ಕಟ್ಟಿಹಾಕಬಹುದಿತ್ತು.

ಮೊದಲನೆಯದಾಗಿ, ಯಶಸ್ವಿ ಜೈಸ್ವಾಲ್ ಐದನೇ ಓವರ್‌ನಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಅದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕ್ಯಾಚ್ ಅನ್ನು ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಮತ್ತೆ ಕೈಬಿಟ್ಟರು. ಶತಕ ಬಾರಿಸಿದ ಓಲಿ ಪೋಪ್ ಅವರಿಗೂ ಕೂಡ ಜೈಸ್ವಾಲ್ ಅವರು ಕ್ಯಾಚ್ ಕೈಬಿಡುವ ಮೂಲಕ ನೆರವಾದರು. ದುರದೃಷ್ಟವಷಾತ್, ಈ ಮೂರು ಕ್ಯಾಚ್‌ಗಳು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ಕೈಬಿಡಲಾಯಿತು.

ಈ ವಿಚಾರವಾಗಿ ಟೀಂ ಇಂಡಿಯಾ ವಿರುದ್ಧ ಕಿಡಿಕಾರಿದ ಸುನೀಲ್ ಗವಾಸ್ಕರ್, 'ಕ್ಯಾಚ್ ಕೈಬಿಟ್ಟರೆ ಯಾವುದೇ ಪದಕಗಳನ್ನು ನೀಡಲಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಟಿ ದಿಲೀಪ್ ಪಂದ್ಯದ ನಂತರ ಅವುಗಳನ್ನು ನೀಡುತ್ತಾರೆ. ಇದು ನಿಜಕ್ಕೂ ತುಂಬಾ ನಿರಾಶಾದಾಯಕವಾಗಿತ್ತು. ಯಶಸ್ವಿ ಜೈಸ್ವಾಲ್ ಒಬ್ಬ ಉತ್ತಮ ಫೀಲ್ಡರ್. ಆದರೆ, ಈ ಬಾರಿ ಅವರು ಏನನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಕಾಮೆಂಟ್ ಮಾಡುತ್ತಿದ್ದ ಅವರು ಹೇಳಿದರು.

Sunil Gavaskar
ಬಿಜಿಟಿ ಟ್ರೋಫಿ ಟೂರ್ನಿ ವೇಳೆ 'ಸ್ಟುಪಿಡ್ ಸ್ಟುಪಿಡ್ ಸ್ಟುಪಿಡ್' ಎಂದಿದ್ದ ಸುನೀಲ್ ಗವಾಸ್ಕರ್ ಈಗ ರಿಷಭ್ ಪಂತ್ ಅಭಿಮಾನಿ!

ಪಂದ್ಯದ ಬಗ್ಗೆ ಹೇಳುವುದಾದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಓಲಿ ಪೋಪ್ ತಮ್ಮ ಒಂಬತ್ತನೇ ಟೆಸ್ಟ್ ಶತಕವನ್ನು ಬಾರಿಸಿದರು ಮತ್ತು ಅಜೇಯರಾಗುಳಿದರು. ಶನಿವಾರ ಹೆಡಿಂಗ್ಲಿಯಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 49 ಓವರ್‌ಗಳಲ್ಲಿ 209/3 ಸ್ಕೋರ್ ಗಳಿಸಿ ಭಾರತಕ್ಕಿಂತ 262 ರನ್‌ಗಳ ಹಿಂದಿದೆ.

ಶುಭಮನ್ ಗಿಲ್ ಅವರ ವೃತ್ತಿಜೀವನದ ಅತ್ಯುತ್ತಮ 147 ರನ್ ಮತ್ತು ರಿಷಭ್ ಪಂತ್ ಅವರ ಏಳನೇ ಶತಕವಾದ 134 ರನ್ ಗಳ ಅದ್ಭುತ ಪ್ರದರ್ಶನದಿಂದಾಗಿ ಭಾರತ ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ, ಗಿಲ್ ನಿರ್ಗಮಿಸಿದ ನಂತರ, ಭಾರತ ತನ್ನ ಕೊನೆಯ ಏಳು ವಿಕೆಟ್ ಗಳನ್ನು ಕೇವಲ 41 ರನ್ ಗಳಿಗೆ ಕಳೆದುಕೊಂಡು 113 ಓವರ್ ಗಳಲ್ಲಿ 471 ರನ್ ಗಳಿಗೆ ಆಲೌಟ್ ಆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com