
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಂದು ಅಂಪೈರ್ ಪಾಲ್ ರೀಫೆಲ್ ಜೊತೆಗಿನ ಬಿಸಿ ಸಂಭಾಷಣೆಯ ನಂತರ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರಿಗೆ ಸಂಕಷ್ಟ ಎದುರಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ನಿರ್ಬಂಧಗಳನ್ನು ಎದುರಿಸುವ ಸಾಧ್ಯತೆ ಇದೆ.
ಇಂಗ್ಲೆಂಡ್ ಇನಿಂಗ್ಸ್‌ನ 61 ನೇ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಹ್ಯಾರಿ ಬ್ರೂಕ್ ಬೌಂಡರಿ ಬಾರಿಸಿದ ನಂತರ ಪಂತ್ ಚೆಂಡಿನ ಸ್ಥಿತಿಯಿಂದ ಅತೃಪ್ತರಾಗಿದ್ದರು. ಪಂತ್ ಚೆಂಡನ್ನು ಪರೀಕ್ಷಿಸಲು ಅಂಪೈರ್ ಬಳಿ ಬಂದರು. ರೀಫೆಲ್ ಅದನ್ನು ಬಾಲ್ ಗೇಜ್ ಮೂಲಕ ರವಾನಿಸಿದರೂ, ಪಂತ್ ತೃಪ್ತರಾಗಲಿಲ್ಲ. ಬಳಿಕ ಪಂತ್ ಚೆಂಡನ್ನು ಮೈದಾನಕ್ಕೆ ಎಸೆದು ಹೊರನಡೆದರು. ಇದರಿಂದಾಗಿ ಕಾಮೆಂಟರಿ ಮಾಡುತ್ತಿದ್ದ ಮಾರ್ಕ್ ಬುಚರ್ ಘಟನೆಯನ್ನು 'ಅನಗತ್ಯ' ಎಂದು ಕರೆದರು.'
ಟೀಂ ಇಂಡಿಯಾದ ಉಪನಾಯಕ ಅಂಪೈರ್ ಜೊತೆ ಮೈದಾನದಲ್ಲಿ ಚರ್ಚೆಯಲ್ಲಿ ತೊಡಗಿದ ನಂತರ ಎರಡು 'ನೀತಿ ಸಂಹಿತೆ' ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಮೊದಲ ಆರೋಪವೆಂದರೆ 'ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು' ಮತ್ತು ಆರ್ಟಿಕಲ್ 2.9ರ ಅಡಿಯಲ್ಲಿ 'ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರ, ಆಟಗಾರರ ಸಪೋರ್ಟ್ ಸಿಬ್ಬಂದಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ಮೂರನೇ ವ್ಯಕ್ತಿಯ ಮೇಲೆ ಅನುಚಿತ ಮತ್ತು/ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುವುದು' ಅಪರಾಧವಾಗುತ್ತದೆ.
ಈಮಧ್ಯೆ, ಪಂತ್ ನಿಯೋಜಿತ ವಿಕೆಟ್ ಕೀಪರ್ ಆಗಿ 150 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಟೀಂ ಇಂಡಿಯಾದ ಮೂರನೇ ವ್ಯಕ್ತಿ ಎನಿಸಿಕೊಂಡರು. ಪ್ರಸಿದ್ಧ್ ಕೃಷ್ಣ ಅವರ ಎಸೆತದಲ್ಲಿ ಓಲಿ ಪೋಪ್ ಅವರ ಕ್ಯಾಚ್ ಹಿಡಿಯುವ ಮೂಲಕ 27 ವರ್ಷದ ಪಂತ್, ಈ ಹಿಂದೆ ಸೈಯದ್ ಕಿರ್ಮಾನಿ (160 ಕ್ಯಾಚ್‌ಗಳು) ಮತ್ತು ಎಂಎಸ್ ಧೋನಿ (256) ಮಾತ್ರ ಮುಟ್ಟಿದ ಮೈಲಿಗಲ್ಲನ್ನು ತಲುಪಿದರು.
ಪಂತ್ ಒಟ್ಟು 151 ಕ್ಯಾಚ್‌ಗಳು ಮತ್ತು 15 ಸ್ಟಂಪಿಂಗ್‌ಗಳು (166 ಔಟ್‌ಗಳು) ಹೊಂದಿದ್ದು, ಇತಿಹಾಸದಲ್ಲಿ ಭಾರತದ ಪರ ಮೂರನೇ ಅತ್ಯಂತ ಯಶಸ್ವಿ ಕೀಪರ್ ಆಗಿದ್ದಾರೆ. ಧೋನಿ ಅತ್ಯಂತ ಯಶಸ್ವಿ ಕೀಪರ್ ಆಗಿದ್ದು, 256 ಕ್ಯಾಚ್‌ಗಳು ಮತ್ತು 38 ಸ್ಟಂಪಿಂಗ್‌ಗಳೊಂದಿಗೆ ಒಟ್ಟು 294 ಔಟ್‌ಗಳನ್ನು ಮಾಡಿದ್ದಾರೆ.
Advertisement