
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ. ಅವರ ಅದೃಷ್ಟದ ಕೊರತೆ ಮತ್ತು ತಂಡದ ಕಳಪೆ ಫೀಲ್ಡಿಂಗ್‌ನಿಂದಾಗಿ ಹೆಚ್ಚಿನ ವಿಕೆಟ್ ಪಡೆಯುವ ಅವಕಾಶ ಕೈತಪ್ಪಿತು ಎಂದಿದ್ದಾರೆ. ಬುಮ್ರಾ ಮತ್ತೊಮ್ಮೆ ಭಾರತಕ್ಕೆ ಏಕೈಕ ಬೌಲಿಂಗ್ ದಾಳಿಯಾಗಿ ಪರಿಣಮಿಸಿದರು. ಐದು ವಿಕೆಟ್ ಕಬಳಿಸುವ ಮೂಲಕ ಮೊದಲ ಇನಿಂಗ್ಸ್ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧ ಆರು ರನ್‌ಗಳ ಅಲ್ಪ ಮುನ್ನಡೆ ಸಾಧಿಸಲು ಭಾರತಕ್ಕೆ ನೆರವಾದರು.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಸಚಿನ್, 'ಅಭಿನಂದನೆಗಳು ಬುಮ್ರಾ! ನಿಮ್ಮ ಮತ್ತು ಒಂಬತ್ತು ವಿಕೆಟ್‌ಗಳ ನಡುವೆ ಒಂದು ನೋ-ಬಾಲ್ ಮತ್ತು 3 ಕ್ಯಾಚ್ ಕೈಬಿಟ್ಟ ಅವಕಾಶಗಳು ಇದ್ದವು' ಎಂದು ಬರೆದಿದ್ದಾರೆ.
ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ, ಮೊದಲಿಗೆ ಯಶಸ್ವಿ ಜೈಸ್ವಾಲ್ ಅವರು ಬೆನ್ ಡಕೆಟ್, ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಅವರ ಕ್ಯಾಚ್‌ಗಳನ್ನು ಕೈಬಿಟ್ಟರು. ಮತ್ತೊಮ್ಮೆ ಬ್ರೂಕ್ ಅವರನ್ನು ಡಕ್ ಔಟ್ ಮಾಡಿದ್ದಾಗ, ಅದು ನೋ ಬಾಲ್ ಆಗಿತ್ತು. ಇತರ ಬೌಲರ್‌ಗಳು ಹೊಡೆಸಿಕೊಳ್ಳುತ್ತಿದ್ದಾಗ ಬಹುತೇಕ ಏಕಾಂಗಿಯಾಗಿ ಹೋರಾಡಿದ ಬುಮ್ರಾ, 24.4 ಓವರ್‌ಗಳಲ್ಲಿ 5 ವಿಕೆಟ್ ಪಡೆದು ಕೇವಲ 83 ರನ್ ನೀಡಿದರು.
ಬುಮ್ರಾ ಅವರು SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 10 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೆರಡು ಬಾರಿ ಐದು ವಿಕೆಟ್ ಗೊಂಚಲು ಪಡೆದರೆ ಅವರು ಪಾಕಿಸ್ತಾನದ ದಂತಕಥೆ ವಾಸಿಮ್ ಅಕ್ರಮ್ (11 SENA ಫಿಫರ್) ಅವರನ್ನು ಹಿಂದಿಕ್ಕಬಹುದು.
ಇದು ಬುಮ್ರಾ ವಿದೇಶದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಪಡೆದಿರುವ 12ನೇ ಐದು ವಿಕೆಟ್ ಗೊಂಚಲು ಆಗಿದ್ದು, ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಪಿಲ್ (66) ಗಿಂತ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ (34) ಆಡಿರುವ ಬುಮ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಮನಾರ್ಹವಾಗಿ, ಬುಮ್ರಾ ಆಸ್ಟ್ರೇಲಿಯಾದಲ್ಲಿ ನಾಲ್ಕು, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಲಾ ಮೂರು ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಎರಡು ಐದು ವಿಕೆಟ್ ಗೊಂಚಲುಗಳನ್ನು ಪಡೆದಿದ್ದಾರೆ.
Advertisement