
ಇಂಗ್ಲೆಂಡ್ vs ಭಾರತ ಮೊದಲ ಟೆಸ್ಟ್‌ನಲ್ಲಿ ಕ್ಯಾಚ್‌ಗಳನ್ನು ಕೈಬಿಡದಿದ್ದರೆ ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಸುಲಭವಾಗಿ ಐದು ವಿಕೆಟ್ ಗೊಂಚಲನ್ನು ಪಡೆಯಬಹುದಿತ್ತು. ಶುಭಮನ್ ಗಿಲ್ ಮತ್ತು ಪಡೆ ಲೀಡ್ಸ್‌ನಲ್ಲಿ ನಡೆದ ಮೊದಲ ಇನಿಂಗ್ಸ್‌ನಲ್ಲಿ ಕನಿಷ್ಠ 6 ಕ್ಯಾಚ್‌ಗಳನ್ನು ಕೈಬಿಟ್ಟು ಕಳಪೆ ಫೀಲ್ಡಿಂಗ್ ಪ್ರದರ್ಶಿಸಿತು. ಆದಾಗ್ಯೂ, ಬುಮ್ರಾ ಅದರ ಬಗ್ಗೆ ದೂರು ನೀಡುವ ಮನಸ್ಥಿತಿಯಲ್ಲಿರಲಿಲ್ಲ. ಬದಲಿಗೆ, ಮೈದಾನದಿಂದ ಹೊರಗೆ ತನ್ನ ತಂಡದ ಆಟಗಾರರನ್ನು ಬೆಂಬಲಿಸಿದ್ದಾರೆ.
ಮೊದಲನೇ ಟೆಸ್ಟ್‌ನ 3ನೇ ದಿನದ ಅಂತ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ಏನೇ ಆದರೂ ಮುಂದುವರಿಯುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಕೈಬಿಟ್ಟ ಕ್ಯಾಚ್‌ಗಳ ಬಗ್ಗೆ ಯೋಚಿಸಿ ಕುಳಿತು ಅಳುವುದು ಅಸಾಧ್ಯ. ಆಟಕ್ಕೆ ಹೊಸಬರಾಗಿರುವ ಕೆಲವು ಯುವಕರು ತಂಡದಲ್ಲಿ ಇದ್ದಾರೆ ಮತ್ತು ಆದ್ದರಿಂದ ಸ್ವಲ್ಪ ಅವಕಾಶ ನೀಡಬೇಕು ಎಂದರು.
'ಹೌದು, ಒಂದು ಕ್ಷಣ ಬೇಜಾರಾಗುತ್ತದೆ. ಆದರೆ, ಅದರ ಬಗ್ಗೆ ಚಿಂತಿಸಿ ನೀವು ಕುಳಿತು ಅಳಲು ಸಾಧ್ಯವಿಲ್ಲ. ಅಲ್ಲವೇ? ನೀವು ಆಟದಲ್ಲಿ ಮುಂದುವರಿಯಬೇಕು. ಆದ್ದರಿಂದ, ನಾನು ಏನು ಮಾಡಲು ಬಯಸುತ್ತೇನೆಂದರೆ, ಅದನ್ನು ನನ್ನ ತಲೆಗೆ ತೆಗೆದುಕೊಂಡು ಯೋಚಿಸದೆ, ಅದನ್ನು ಬೇಗನೆ ಮರೆತುಬಿಡಲು ಪ್ರಯತ್ನಿಸುತ್ತೇನೆ. ಅವರೆಲ್ಲರೂ ಆಟಕ್ಕೆ ಹೊಸಬರು' ಎಂದು ಬುಮ್ರಾ ಹೇಳಿದರು.
2ನೇ ದಿನದಂದು ಬುಮ್ರಾ ಕನಿಷ್ಠ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಯಶಸ್ವಿ ಜೈಸ್ವಾಲ್ ಮೊದಲು ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುವಾಗ ಬೆನ್ ಡಕೆಟ್ ಅವರ ಕ್ಯಾಚ್ ಕೈಚೆಲ್ಲಿದರು ಮತ್ತು ನಂತರ 60 ರನ್ ಗಳಿಸಿದ್ದಾಗ ಓಲಿ ಪೋಪ್ ಅವರ ಕ್ಯಾಚ್ ಕೈಬಿಟ್ಟರು. ಇದಾದ ಬಳಿಕ ಪೋಪ್ ಶತಕ ಗಳಿಸಿದರು.
ಮೈದಾನದಲ್ಲಿ ಜೈಸ್ವಾಲ್ ಮಾತ್ರವಲ್ಲ, ಇಡೀ ಭಾರತ ತಂಡವೇ ಈ ದಿನವನ್ನು ಶೋಚನೀಯವಾಗಿ ಕಳೆದಿದೆ. ಪ್ರವಾಸಿ ತಂಡವು ಒಟ್ಟಾರೆಯಾಗಿ 6 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಮೂರು ಕ್ಯಾಚ್‌ಗಳನ್ನು ಜೈಸ್ವಾಲ್, ಜಡೇಜಾ, ಪಂತ್ ಮತ್ತು ಸಾಯಿ ಸುದರ್ಶನ್ ತಲಾ ಒಂದೊಂದು ಕ್ಯಾಚ್ ಕೈಬಿಟ್ಟಿದ್ದಾರೆ.
'ಕೆಲವೊಮ್ಮೆ ಚೆಂಡನ್ನು ನೋಡುವುದು ಕಷ್ಟಕರವಾಗಿರುತ್ತದೆ ಮತ್ತು ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್ ಅನ್ನು ಬಿಡುವುದಿಲ್ಲ. ಎಲ್ಲರೂ ನಿಜವಾಗಿಯೂ ಶ್ರಮಿಸುತ್ತಿದ್ದಾರೆ. ಅದು ಕೆಲವೊಮ್ಮೆ ಸಂಭವಿಸುತ್ತದೆ. ಆದ್ದರಿಂದ, ನಾನು ಕೋಪಗೊಂಡಿದ್ದೇನೆ, ನಾನು ಬಾಕ್ಸ್ ಅನ್ನು ಒದೆಯುತ್ತಿದ್ದೇನೆ ಅಥವಾ ನಾನು ಏನನ್ನಾದರೂ ಮಾಡುತ್ತಿದ್ದೇನೆ ಎಂದು ತೋರಿಸಿ ಫೀಲ್ಡರ್ ಮೇಲೆ ಹೆಚ್ಚಿನ ಒತ್ತಡ ಹೇರಲು ನಾನು ಬಯಸುವುದಿಲ್ಲ. ಪರವಾಗಿಲ್ಲ. ಇದು ಆಟದ ಒಂದು ಭಾಗ. ಕ್ಯಾಚ್‌ಗಳನ್ನು ತೆಗೆದುಕೊಂಡರೆ ಒಳ್ಳೆಯದು. ಆದರೆ, ಜನರು ಈ ಅನುಭವದಿಂದ ಕಲಿಯುತ್ತಾರೆ' ಎಂದು ಬುಮ್ರಾ ಹೇಳಿದರು.
ಭಾರತ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ಕೆಎಲ್ ರಾಹುಲ್ (47) ಮತ್ತು ಶುಭಮನ್ ಗಿಲ್ (6) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 6 ರನ್‌ಗಳ ಮುನ್ನಡೆಯೊಂದಿಗೆ, ಭಾರತ 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಯಶಸ್ವಿ ಜೈಸ್ವಾಲ್ (4) ಮತ್ತು ಸಾಯಿ ಸುದರ್ಶನ್ (30) ವಿಕೆಟ್ ಒಪ್ಪಿಸಿದ್ದಾರೆ.
ಇದಕ್ಕೂ ಮೊದಲು, ಮೊದಲನೇ ಇನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆಯುವ ಮೂಲಕ ಭಾರತ ಇಂಗ್ಲೆಂಡ್ ಅನ್ನು 465 ರನ್‌ಗಳಿಗೆ ಆಲೌಟ್ ಮಾಡಿತು. ಹ್ಯಾರಿ ಬ್ರೂಕ್ 99 ರನ್‌ಗಳಿಗೆ ಔಟಾದರು ಮತ್ತು ಓಲಿ ಪೋಪ್ ಶತಕ ಗಳಿಸಿದರು. ಕ್ರಿಸ್ ವೋಕ್ಸ್ 38 ರನ್ ಗಳಿಸಿದರು.
Advertisement