'ಅದೊಂದು ಘಟನೆಯಿಂದ VVS Laxman ನನ್ನ ಜೊತೆ ಮಾತು ಬಿಟ್ಟಿದ್ದ': Sourav Ganguly

ನಾಯಕನಾಗಿ ಹರ್ಭಜನ್ ಸಿಂಗ್ ಮತ್ತು ಅನಿಲ್‌ ಕುಂಬ್ಳೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಈ ಇಬ್ಬರೂ ಆಟಗಾರರು ಟೆಸ್ಟ್‌ ಪಂದ್ಯದ ವೇಳೆ ಬೆಂಚ್‌ ಮೇಲೆ ಕುಳಿತು ಮಜಾ ಆಡುವ ಆಟಗಾರರಲ್ಲ...
VVS Laxman-Sourav Ganguly
ಗಂಗೂಲಿ ಮತ್ತು ಲಕ್ಷ್ಮಣ್
Updated on

ನವದೆಹಲಿ: ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಭಾರತದ ಅಗ್ರ ಗಣ್ಯ ಕ್ರಿಕೆಟ್ ದಂತಕಥೆಗಳು.. ಒಂದು ಕಾಲದ ಆಪ್ತ ಸ್ನೇಹಿತರೂ ಕೂಡ.. ಇಂತಹ ಸ್ನೇಹಿತರು ಮಾತು ಬಿಟ್ಟರೆ...

ಅಚ್ಚರಿಯಾದರೂ ಇದು ಸತ್ಯ.. ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಕ್ರಿಕೆಟ್ ಜೀವನದ ಅದೊಂದು ಘಟನೆಯನ್ನು ನೆನೆಸಿಕೊಂಡಿದ್ದು, ಅದೊಂದು ಘಟನೆ ವಿವಿಎಸ್ ಲಕ್ಷ್ಮಣ್ ಮಾತು ಬಿಡಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.

ಸ್ಟಾರ್ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಹಾಗೂ ಅವರ ನಡುವೆ ಮೂರು ತಿಂಗಳ ಕಾಲ ಮಾತುಕತೆ ನಿಂತಿದ್ದು ಮತ್ತು ಹಾಲಿ ಕೋಚ್‌ ಗೌತಮ್ ಗಂಭೀರ್‌ ಅವರ ಬಗ್ಗೆಯೂ ದಾದಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

VVS Laxman-Sourav Ganguly
Cricket: 'ಕೋಚ್ ಆಗಲು ನಾನು ರೆಡಿ...'; ಭಾರತ ತಂಡಕ್ಕೆ ಮಾಜಿ ನಾಯಕ Sourav Ganguly ವಾಪಸ್?

ತಂಡದ ಆಯ್ಕೆಯೇ ಸವಾಲಾಗಿತ್ತು..

ತಂಡದ ನಾಯಕನಾಗಿದ್ದಾಗ ಆಟಗಾರರ ಆಯ್ಕೆ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದವು. ನಾಯಕನಾಗಿ ಹರ್ಭಜನ್ ಸಿಂಗ್ ಅನಿಲ್‌ ಕುಂಬ್ಳೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಈ ಇಬ್ಬರೂ ಆಟಗಾರರು ಟೆಸ್ಟ್‌ ಪಂದ್ಯದ ವೇಳೆ ಬೆಂಚ್‌ ಮೇಲೆ ಕುಳಿತು ಮಜಾ ಆಡುವ ಆಟಗಾರರಲ್ಲ. ಬದಲಿಗೆ ನನ್ನನ್ನು ಏಕೆ ಆಡಿಸುತ್ತಿಲ್ಲ ಎಂದು ಕೇಳುವ ಆಟಗಾರರು. ಇವರಿಬ್ಬರೂ ತಂಡದಲ್ಲಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಎಂದು ದಾದಾ ಹೇಳಿದ್ದಾರೆ.

3 ತಿಂಗಳು ಮಾತು ಬಿಟ್ಟಿದ್ದ ಲಕ್ಷ್ಮಣ್

ದೇಶದಲ್ಲಿ ದಿಗ್ಗಜ ಆಟಗಾರರ ಪಟ್ಟಿಯಲ್ಲಿ ವಿವಿಎಸ್‌ ಲಕ್ಷ್ಮಣ ಅವರನ್ನು ಸೇರಿಸಲಾಗುತ್ತದೆ. ಇವರು ಕ್ರಿಕೆಟ್‌ ವೃತ್ತಿ ಬದುಕು ಸಹ ಅಮೋಘವಾಗಿತ್ತು. ಆದರೆ ಇವರು ಏಕದಿನ ವಿಶ್ವಕಪ್‌ ಆಡಿಲ್ಲ. 2003ರ ವಿಶ್ವಕಪ್‌ಗೂ ಮುನ್ನ ಇವರನ್ನು ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ದಿನೇಶ್‌ ಮೊಂಗಿಯಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ನಿರ್ಧಾರದ ಹಿಂದೆ ಗಂಗೂಲಿ ಅವರ ಕೈವಾಡವಿದೆ ಎಂದು ಹೇಳಲಾಗಿತ್ತು. ಈ ವಿಚಾರದ ಬಗ್ಗೆ ಈಗ ಮಾತನಾಡಿರುವ ದಾದಾ, ಅಂದಿನ ತಂಡದ ಆಯ್ಕೆ ಬಳಿಕ ವಿವಿಎಸ್‌ ಲಕ್ಷ್ಮಣ್ ನನ್ನೊಂದಿಗೆ 3 ತಿಂಗಳು ಮಾತನಾಡಿರಲಿಲ್ಲ ಎಂದು ಹೇಳಿದ್ದಾರೆ.

ಬೇಸರಗೊಂಡಿದ್ದ ಲಕ್ಷ್ಮಣ್

"ನನ್ನ ಈ ನಿರ್ಧಾರದಿಂದ ಲಕ್ಷ್ಮಣ್‌ ಅವರಿಗೆ ಬೇಸರವಾಗಿತ್ತು. ಇದರಿಂದಾಗಿಯೇ ಇವರು ನನ್ನ ಜೊತೆ 3 ತಿಂಗಳು ಮಾತನಾಡಲೇ ಇಲ್ಲ. ನಾನು ಅವರೊಂದಿಗೆ ರಾಜಿ ಮಾಡಿಕೊಳ್ಳುವವರೆಗೆ ಅವರು ಮಾತನಾಡಿರಲಿಲ್ಲ. ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ ಆಟಗಾರರನ್ನು ತಂಡದಿಂದ ಹೊರಗಿಟ್ಟಾಗ ನಿಶ್ಚಿತವಾಗಿ ಬೇಸರವಾಗುತ್ತದೆ. ಅವರು ಬೇಸರವಾಗಿದ್ದು ಸಹಜ. ಆದರೆ ವಿಶ್ವಕಪ್ ಬಳಿಕ ಅವರು ಮತ್ತೆ ಏಕದಿನ ತಂಡಕ್ಕೆ ಮರಳಿದರು. ಲಕ್ಷ್ಮಣ್‌ ಆಸ್ಟ್ರೇಲಿಯಾ, ಪಾಕಿಸ್ತಾನದಲ್ಲಿ ಸ್ಥಿರ ಪ್ರದರ್ಶನ ನೀಡಿದರು ಎಂದು ಗಂಗೂಲಿ ಹೇಳಿದ್ದಾರೆ.

ಕಳೆದ ವರ್ಷ, ಆಗಿನ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆ ನೇತೃತ್ವದ ಐವರು ಆಯ್ಕೆದಾರರು ಲಕ್ಷ್ಮಣ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಬಯಸಿದ್ದರು. ಆದರೆ ಅಂದಿನ ತಂಡದ ನಾಯಕ ಗಂಗೂಲಿ ಮತ್ತು ಮುಖ್ಯ ತರಬೇತುದಾರ ಜಾನ್ ರೈಟ್ ಬೇರೆ ಯೋಜನೆಗಳನ್ನು ಹೊಂದಿದ್ದರು. ಹೀಗಾಗಿ ದಿನೇಶ್ ಮೋಂಗಿಯಾ ತಂಡಕ್ಕೆ ಆಯ್ಕೆಯಾದರು ಎಂದು ಬಹಿರಂಗ ಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com