ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗನ ವಿರುದ್ಧ 11 ಮಹಿಳೆಯರಿಂದ ಅತ್ಯಾಚಾರ ಆರೋಪ: ವರದಿ

ಈ ವರದಿಯು ಮೂಲತಃ ಗಯಾನಾ ಮೂಲದ ಪತ್ರಿಕೆ ಕೈಟೀರ್ ಸ್ಪೋರ್ಟ್ಸ್‌ನಿಂದ ಹೊರಬಂದಿದೆ ಎನ್ನಲಾಗಿದೆ.
West Indies team
ವೆಸ್ಟ್ ಇಂಡೀಸ್ ತಂಡ
Updated on

ವೆಸ್ಟ್ ಇಂಡೀಸ್ ಮೂಲದ ಮಾಧ್ಯಮಗಳ ವರದಿಗಳ ಪ್ರಕಾರ, ಹೆಸರು ಬಹಿರಂಗಪಡಿಸದ ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ ಹಲವಾರು ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪಗಳು ಕೇಳಿಬಂದಿವೆ. ಕೆರಿಬಿಯನ್ ಮೂಲದ ಸ್ಪೋರ್ಟ್ಸ್‌ಮ್ಯಾಕ್ಸ್ ಟಿವಿಯ ವಿಡಿಯೋ ವರದಿ ಪ್ರಕಾರ, ಈ ಕ್ರಿಕೆಟಿಗ ಗಯಾನಾದವರಾಗಿದ್ದು, ಸದ್ಯ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಕ್ರಿಕೆಟಿಗನ ವಿರುದ್ಧ ಕನಿಷ್ಠ 11 ಮಹಿಳೆಯರು ಆರೋಪ ಮಾಡಿದ್ದಾರೆ.

ಆದಾಗ್ಯೂ, ಕ್ರಿಕೆಟಿಗನ ವಿರುದ್ಧ ಇನ್ನೂ ಯಾವುದೇ ದೂರು ದಾಖಲಾಗಿಲ್ಲ. ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಈ ವರದಿಯು ಮೂಲತಃ ಗಯಾನಾ ಮೂಲದ ಪತ್ರಿಕೆ ಕೈಟೀರ್ ಸ್ಪೋರ್ಟ್ಸ್‌ನಿಂದ ಹೊರಬಂದಿದೆ ಎನ್ನಲಾಗಿದೆ.

'ಕನಿಷ್ಠ ಹನ್ನೊಂದು ಮಹಿಳೆಯರಿಂದ ದೂರುಗಳು ಕೇಳಿಬಂದಿವೆ. ಅವರಲ್ಲಿ ಒಬ್ಬಾಕೆ ಟೀನೇಜರ್. ಆಕೆ ಅವರಿಂದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಅಥವಾ ಅನಗತ್ಯ ಲೈಂಗಿಕ ಪ್ರಚೋದನೆಗೆ ಒಳಗಾಗಿರುವುದಾಗಿ ತಿಳಿಸಿದ್ದಾಳೆ. ಆಟಗಾರ ಮತ್ತು ಆತನ ಕೃತ್ಯಗಳನ್ನು ಮುಚ್ಚಿಹಾಕಲು ಗಮನಾರ್ಹ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಲಾಗಿದೆ' ಎಂದು ವರದಿ ಹೇಳಿದೆ.

ವಿಡಿಯೋ ವರದಿ ಮಾಡಿದ ಸ್ಪೋರ್ಟ್ಸ್‌ಮ್ಯಾಕ್ಸ್ ಟಿವಿ, ಕ್ರಿಕೆಟ್ ವೆಸ್ಟ್ ಇಂಡೀಸ್ ಅನ್ನು ಸಂಪರ್ಕಿಸಿದ್ದು, ಈ ವಿಷಯದ ಬಗ್ಗೆ ಅವರಿಗೆ ತಿಳಿದಿದೆಯೇ, ಯಾವುದೇ ತನಿಖೆ ನಡೆಯುತ್ತಿದೆಯೇ ಮತ್ತು ಅದನ್ನು ಮುಚ್ಚಿಹಾಕಲು ಯಾವುದೇ ಪ್ರಯತ್ನಗಳು ನಡೆದಿವೆಯೇ ಎಂದು ಕೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ CWI ಅಧ್ಯಕ್ಷ ಕಿಶೋರ್ ಶಾಲೋ, 'ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಈ ಬಗ್ಗೆ ತಿಳಿದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಲು ಆಗುವುದಿಲ್ಲ' ಎಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡು ವರ್ಷಗಳ ಹಿಂದೆ ಸಂತ್ರಸ್ತೆಯರಲ್ಲಿ ಒಬ್ಬರು ಸಂಪರ್ಕಿಸಿದ ವಕೀಲ ನಿಗೆಲ್ ಹ್ಯೂಸ್ ಅವರ ಪ್ರಕಾರ, ಈ ಆಟಗಾರ 2024ರ ಜನವರಿಯಲ್ಲಿ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು ಎಂದಿದ್ದಾರೆ.

ಸಂತ್ರಸ್ತರು ಕ್ರಿಕೆಟಿಗನ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಆಸ್ಟ್ರೇಲಿಯಾ ಪ್ರವಾಸದಿಂದ ಗಯಾನಾಗೆ ಹಿಂದಿರುಗಿದ ನಂತರ ಆ ಆಟಗಾರನ ಕೃತ್ಯಗಳ ಕುರಿತಾದ ಮಾತುಗಳು ನಿಂತುಹೋದವು ಎಂದು ತಿಳಿಸಿದ್ದಾರೆ. ಆದಾಗ್ಯೂ, ಒಂದು ಅಥವಾ ಎರಡು ದಿನಗಳ ಹಿಂದೆ ಈ ವಿಷಯದ ಬಗ್ಗೆ ವಿಚಾರಣೆಗಳು ನಡೆದಿವೆ ಎನ್ನಲಾಗಿದೆ.

ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ ವೆಸ್ಟ್ ಇಂಡೀಸ್ ಜಯಗಳಿಸಿದ ನಂತರ ಗಯಾನಾಗೆ ಹಿಂದಿರುಗಿದಾಗ ಕ್ರಿಕೆಟಿಗನಿಗೆ 'ನಾಯಕನ ಸ್ವಾಗತ' ದೊರೆಯಿತು ಎಂದು ಹ್ಯೂಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com