
ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ vs ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಶುಭಮನ್ ಗಿಲ್ ನಾಯಕತ್ವವನ್ನು ಟೀಕಿಸಿದವರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ತೀವ್ರವಾಗಿ ಕಿಡಿಕಾರಿದರು. ಮೆನ್ ಇನ್ ಬ್ಲೂ ತಂಡವು ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲಿನೊಂದಿಗೆ ಗಿಲ್ ಅವರ ನಾಯಕತ್ವ ಆರಂಭವಾಗಿದೆ. ರೋಹಿತ್ ಶರ್ಮಾ ಅವರ ಬಳಿಕ ಟೆಸ್ಟ್ ನಾಯಕತ್ವ ವಹಿಸಿಕೊಂಡಿರುವ ಯುವ ನಾಯಕ ಗಿಲ್ ಅವರನ್ನು ಅಜರುದ್ದೀನ್ ಸಮರ್ಥಿಸಿಕೊಂಡಿದ್ದಾರೆ.
ಇಂಡಿಯಾ ಟುಡೇ ವರದಿ ಪ್ರಕಾರ, ಗಿಲ್ ಅವರ ನಾಯಕತ್ವದ ಬಗ್ಗೆ ಮಾತನಾಡುವುದಕ್ಕೆ ಇದು ಸಮಯವಲ್ಲ. ಏಕೆಂದರೆ, ಇದು ನಾಯಕನಾಗಿ ಅವರ ಮೊದಲ ಪಂದ್ಯವಾಗಿತ್ತು. ಕೇವಲ ಒಂದು ಪಂದ್ಯದ ನಂತರ ಅವರ ನಾಯಕತ್ವದ ಕೌಶಲ್ಯದ ಬಗ್ಗೆ ದೂರುವುದು ಸರಿಯಲ್ಲ. ವಿಮರ್ಶಕರು ಅವರಿಗೆ ಮೊದಲು ನ್ಯಾಯಯುತ ಅವಕಾಶ ನೀಡಬೇಕು ಎಂದರು.
'ನಾಯಕನಾಗಿ ಇದು ಅವರ ಮೊದಲ ಪಂದ್ಯ, ನಾಯಕತ್ವದ ಬಗ್ಗೆ ಮಾತನಾಡಲು ಈಗ ಸಾಧ್ಯವಿಲ್ಲ. ನಾಯಕತ್ವದ ಬಗ್ಗೆ ಮಾತನಾಡಲು ಸಾಕಷ್ಟು ಸಮಯವಿದೆ. ನಾವು ಅವರಿಗೆ ನ್ಯಾಯಯುತ ಅವಕಾಶ ನೀಡಬೇಕು ಮತ್ತು ಅವರು ಇದೀಗ ತಾನೇ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ದರಿಂದ, ನೀವು ಅವರಿಗೆ ಸಾಕಷ್ಟು ಸಮಯ ಮತ್ತು ಬೆಂಬಲ ನೀಡಬೇಕು. ನಾವು ಆಟಗಾರರನ್ನು ಹಾಗೆ ದೂರಲು ಮತ್ತು ಟೀಕಿಸಲು ಸಾಧ್ಯವಿಲ್ಲ' ಎಂದು ಅಜರುದ್ದೀನ್ ಹೇಳಿದರು.
ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊರತೆ ಮತ್ತು ಕಳಪೆ ಬೌಲಿಂಗ್ ಪ್ರದರ್ಶನ ಭಾರತದ ಸೋಲಿಗೆ ಪ್ರಮುಖ ಕಾರಣಗಳಾಗಿವೆ. ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ಸೋತಿತು. 'ಬ್ಯಾಟಿಂಗ್ ವೈಫಲ್ಯದಿಂದಾಗಿ ನಾವು ಸೋತಿದ್ದೇವೆ. ಆದರೆ, ಈಗ ಅವರು (ಭಾರತ) ಸರಿಯಾದ ಆಟಗಾರರನ್ನು ಆಯ್ಕೆ ಮಾಡಬೇಕು ಮತ್ತು ಬೌಲಿಂಗ್ ಪರಿಪೂರ್ಣವಾಗಿರಬೇಕು' ಎಂದರು.
ಹೆಡಿಂಗ್ಲಿಯಲ್ಲಿ ಭಾರತದ ಬೌಲಿಂಗ್ ಆಯ್ಕೆಗಳ ಬಗ್ಗೆ ಮಾಜಿ ನಾಯಕ ಕಟುವಾಗಿ ಮಾತನಾಡುತ್ತಾ, 'ಭಾರತ ತಂಡವು ಬುಮ್ರಾ ಮೇಲೆ ಹೆಚ್ಚು ಅವಲಂಬಿತರಾಗಿದೆ. ಇದು ಸುಲಭವಲ್ಲ ಏಕೆಂದರೆ ನಿಮಗೆ ಹೆಚ್ಚು ಅನುಭವಿ ಬೌಲರ್‌ಗಳು ಬೇಕಾಗಿದ್ದಾರೆ ಮತ್ತು ಅವರು ಕುಲದೀಪ್ ಯಾದವ್ ಅವರನ್ನು ಆಡಿಸಬೇಕು' ಎಂದು ಒತ್ತಾಯಿಸಿದರು.
Advertisement