
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣಸುತ್ತಿದ್ದು, ಈ ಪಂದ್ಯದಲ್ಲಿ ಆಟಗಾರರು ಮಾತ್ರವಲ್ಲ ಕೋಚ್ ಗೌತಮ್ ಗಂಭೀರ್ ಕೂಡ ಕ್ರೋಧಗೊಂಡ ಘಟನೆ ನಡೆಯಿತು.
ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ ನಲ್ಲಿ 264 ರನ್ ಗಳಿಸಿ ಆಲೌಟ್ ಆಯಿತು.
ಒಂದು ಹಂತದಲ್ಲಿ ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿತ್ತು. ಟ್ರಾವಿಸ್ ಹೆಡ್ ಬೇಗನೆ ಔಟಾದರೂ ನಾಯಕ ಸ್ಮಿತ್ ಉತ್ತಮ ಲಯದಲ್ಲಿದ್ದರು. ಅವರು 96 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 73 ರನ್ ಕಲೆಹಾಕಿದರು.
ಸ್ಮಿತ್ ಆಟ ಒಂದು ಹಂತದಲ್ಲಿ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದೇ ವೇಳೆ ಶಮಿ 37ನೇ ಓವರ್ ನಲ್ಲಿ ಔಟ್ ಮಾಡಿದರು.
ಗಂಭೀರ್ ಆಕ್ರೋಶ
ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಕಂಟಕವಾಗಿದ್ದ ಸ್ಮಿತ್ ಔಟಾಗುತ್ತಿದ್ದಂತೆಯೇ ಡಗೌಟ್ ನಲ್ಲಿದ್ದ ಕೋಚ್ ಗಂಭೀರ್ ತೀವ್ರ ಆಕ್ರೋಶ ತೋರಿದರು. ಅಪಾಯಕಾರಿಯಾಗಿದ್ದ ಸ್ಮಿತ್ ಕೊನೆಗೂ ಔಟ್ ಆದರಲ್ಲ ಎಂದು ಆಕ್ರೋಶ ಭರಿತರಾಗಿ ಬೈಗುಳ ಬೈದರು. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಒಂದು ವೇಳೆ ಶಮಿ ಸ್ಮಿತ್ ರನ್ನು ಔಟಾಗಿರದಿದ್ದರೆ ಆಸಿಸ್ ಮೊತ್ತ ಮತ್ತಷ್ಟು ಹೆಚ್ಚಾಗುವ ಅಪಾಯವಿತ್ತು. ಆದರೆ ಸೂಕ್ತ ಸಂದರ್ಭದಲ್ಲಿ ಸ್ಮಿತ್ ಔಟಾಗುವ ಮೂಲಕ ಭಾರತ ನಿಟ್ಟಿಸಿರು ಬಿಟ್ಟಿತು.
Advertisement