ದೇವರು ನನ್ನನ್ನು ಈ ಪರಿಸ್ಥಿತಿಗೆ ತಂದಿದ್ದಾನೆ...: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್!

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಫಿನಿಷರ್ ಆಗಿ ಕಾಣಿಸಿಕೊಂಡರು ಮತ್ತು ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲೂ ತಂಡಕ್ಕೆ ಆಸರೆಯಾದ ಅವರು ಅಜೇಯರಾಗಿ ಉಳಿದರು.
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತನ್ನ ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿತು. ರೋಹಿತ್ ಶರ್ಮಾ ಅವರು 76 ರನ್‌ಗಳಿಸಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಫಿನಿಷರ್ ಆಗಿ ಕಾಣಿಸಿಕೊಂಡರು ಮತ್ತು ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲೂ ತಂಡಕ್ಕೆ ಆಸರೆಯಾದ ಅವರು ಅಜೇಯರಾಗಿ ಉಳಿದರು. ರಾಹುಲ್ 34 ರನ್ ಗಳಿಸಿ ಭಾರತಕ್ಕೆ 252 ರನ್‌ಗಳ ಗುರಿಯನ್ನು ತಲುಪಲು ಸಹಾಯ ಮಾಡಿದರು.

'ಇದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ ಎಂದು ನಾನು ಭಾವಿಸುತ್ತೇನೆ. ಇಂದಿನಿಂದ ನನ್ನ ಸಂಪೂರ್ಣ ಗಮನ ಸಾಧ್ಯವಾದಷ್ಟು ಪ್ರಶಸ್ತಿಗಳನ್ನು ಗೆಲ್ಲುವುದು ಎಂದು ನಾನು ಒಂದೆರಡು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದೆ. ನನ್ನ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಪರಿಸ್ಥಿತಿಗಳಲ್ಲಿ ನನ್ನನ್ನು ದೇವರು ಇರಿಸಿದ್ದಾನೆ. ನಾನು ಯಾವಾಗಲೂ ಅದೇ ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಅದುವೇ ಕ್ರೀಡೆಯ ಸೌಂದರ್ಯ. ನಿಮಗೆ ಅವಕಾಶಗಳು ಸಿಗುತ್ತಲೇ ಇರುತ್ತವೆ' ಎಂದು ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

'ನೀವು ವಿನಮ್ರರಾಗಿದ್ದರೆ, ನಿಮ್ಮ ಹೃದಯವನ್ನು ಸರಿಯಾದ ಸ್ಥಳದಲ್ಲಿಟ್ಟರೆ, ಕಠಿಣ ತರಬೇತಿಯಲ್ಲಿ ತೊಡಗಿಕೊಂಡರೆ ಮತ್ತು ನಿಮ್ಮ ಬ್ಯಾಟ್ ಅನ್ನು ಮಾತನಾಡಲು ಬಿಟ್ಟರೆ, ದೇವರು ನಿಮ್ಮನ್ನು ಆಶೀರ್ವದಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ ಎಂದು ನಾನು ಹೇಳಬಲ್ಲೆ ಅಷ್ಟೆ. ನಾವು ವರ್ಷಪೂರ್ತಿ, ನಮ್ಮ ವೃತ್ತಿಜೀವನದುದ್ದಕ್ಕೂ ಶ್ರಮಿಸುತ್ತೇವೆ. ಆದರೆ, ಇಂತಹ ಕ್ಷಣಗಳು ನಿಜವಾಗಿಯೂ ವಿಶೇಷವಾದವುಗಳು' ಎಂದು ಅವರು ಹೇಳಿದರು.

ಕೆಎಲ್ ರಾಹುಲ್
Video: ವಿಕೆಟ್ ಕೀಪಿಂಗ್ ವೇಳೆ ಕೆಎಲ್ ರಾಹುಲ್ ಎಡವಟ್ಟು: ಸಿಟ್ಟಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

33 ವರ್ಷದ ಹಾರ್ದಿಕ್ ಪಾಂಡ್ಯ ಒತ್ತಡದ ಸಮಯದಲ್ಲಿ ತಾಳ್ಮೆಯಿಂದ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.

'ಅವರು (ಹಾರ್ದಿಕ್) ಕ್ರೀಸ್‌ಗೆ ಬಂದಾಗ, ತುಂಬಾ ಶಾಂತವಾಗಿರುತ್ತಾರೆ. ಅವರು 5 ರಿಂದ 6 ಡಾಟ್ ಬಾಲ್‌ಗಳನ್ನು ಆಡಬಹುದು. ಆದರೆ, ಒತ್ತಡ ಎಂದಿಗೂ ಅವರ ಮೇಲೆ ಇರುವುದಿಲ್ಲ. ಅದು ಇತರರ ಮೇಲೆ ಇರುತ್ತದೆ. ಇಷ್ಟು ವರ್ಷಗಳ ಕಾಲ ಅವರೊಂದಿಗೆ ಆಡಿದ್ದೇನೆ. ವಿಶೇಷವಾಗಿ ಈ ಪಂದ್ಯಾವಳಿಯಲ್ಲಿ, ಪಂದ್ಯದ ಗತಿಯನ್ನು ಬದಲಿಸಲು ಅವರಿಗೆ ಕೇವಲ ಎರಡ್ಮೂರು ಹಿಟ್‌ಗಳು ಸಾಕು ಎಂಬುದು ನನಗೆ ತಿಳಿದಿದೆ. ಅವರು ಆ ಸಾಮರ್ಥ್ಯದ ಮೇಲೆ ಶ್ರಮಿಸಿದ್ದಾರೆ ಮತ್ತು ತಂಡವು ಒತ್ತಡದಲ್ಲಿದ್ದಾಗ, ಯಾವ ರೀತಿಯ ಹೆಜ್ಜೆ ಹಾಕಬೇಕೆಂದು ಅವರಿಗೆ ನಿಖರವಾಗಿ ತಿಳಿದಿದೆ. ನೀವು ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ, ನೀವು ಇನ್ನೊಂದು ತುದಿಯಿಂದ ಅನಗತ್ಯ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ನೀವು ನಿಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸುತ್ತೀರಿ ಎಂದು ಹೇಳಿದರು.

'ಈ ಪಂದ್ಯಾವಳಿಯಲ್ಲಿ ಒಂದೆರಡು ಬಾರಿ ಇದೇ ರೀತಿ ಆಗಿದೆ ಮತ್ತು ಕೊನೆಯಲ್ಲಿ ಅವರೊಂದಿಗೆ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಕ್ರೀಸ್‌ನಲ್ಲಿರುವುದು ತುಂಬಾ ವಿಶೇಷವಾಗಿತ್ತು. ನಾವು ಹಲವು ವರ್ಷಗಳಿಂದ ಒಟ್ಟಿಗೆ ಆಡಿದ್ದೇವೆ ಮತ್ತು ಯಾವಾಗಲೂ ಹತ್ತಿರ ಬಂದಿದ್ದೇವೆ. ಆದರೆ, ತಪ್ಪಿಸಿಕೊಳ್ಳುತ್ತಿದ್ದೆವು. ಈ ಬಾರಿ, ನಾವು ಅಂತಿಮವಾಗಿ ಆ ಗೆರೆಯನ್ನು ದಾಟಿದೆವು' ಎಂದು ಅವರು ಹೇಳಿದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ರಾಹುಲ್ ಭಾರತ ತಂಡದ ಪರ ಪ್ರಮುಖ ಪ್ರದರ್ಶನ ನೀಡಿದರು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಫಿನಿಷರ್ ಆಗಿ ಹೊರಹೊಮ್ಮಿದರು. ನಾಲ್ಕು ಇನಿಂಗ್ಸ್‌ಗಳಲ್ಲಿ 140 ಸರಾಸರಿಯಲ್ಲಿ 140 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅವರು ಒತ್ತಡದ ಪರಿಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com