ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ತಂಡಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿ ಮುಗಿದ ನಂತರ ತಾನು ಖಿನ್ನತೆಗೆ ಜಾರಿದ್ದೆ.
Varun Chakravarthy Scripts History
ವರುಣ್ ಚಕ್ರವರ್ತಿ
Updated on

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವರುಣ್ ಚಕ್ರವರ್ತಿ ಅವರನ್ನು 2021ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆಮಾಡಿಕೊಳ್ಳಲಾಯಿತು. ಈ ವೇಳೆ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಅವರು ವಿಫಲರಾದರು.

2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಕನ್ನಡದ ವರುಣ್ ಚಕ್ರವರ್ತಿ ಚಾಂಪಿಯನ್ಸ್ ಟ್ರೋಫಿ 2025ನೇ ಪಂದ್ಯಾವಳಿಯಲ್ಲಿ ಮಿಂಚಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 8 ತಂಡಗಳ ಪಂದ್ಯಾವಳಿಯಲ್ಲಿ ಭಾರತದ ಸ್ಪಿನ್ನರ್ ವರುಣ್ ಮೂರು ಪಂದ್ಯಗಳನ್ನು ಆಡಿದರು ಮತ್ತು ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು. ವರುಣ್ ಅವರ ಪ್ರದರ್ಶನವು ಟೀಂ ಇಂಡಿಯಾಗೆ ನೆರವಾಯಿತು. 33 ವರ್ಷದ ಬೌಲರ್, ಟಿ20 ವಿಶ್ವಕಪ್ ನಂತರ ತಾವು ಎದುರಿಸಿದ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವರುಣ್ ಚಕ್ರವರ್ತಿ ಅವರನ್ನು 2021ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆಮಾಡಿಕೊಳ್ಳಲಾಯಿತು. ಈ ವೇಳೆ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಅವರು ವಿಫಲರಾದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು 10 ವಿಕೆಟ್‌ಗಳ ಸೋಲು ಕಂಡ ಭಾರತ ತಂಡದ ಪಾಲುದಾರರಾಗಿದ್ದರು.

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ತಂಡಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿ ಮುಗಿದ ನಂತರ ತಾನು ಖಿನ್ನತೆಗೆ ಜಾರಿದ್ದೆ. ತಾನು ದೇಶಕ್ಕೆ ಬಂದಿಳಿದ ನಂತರ ಕೆಲವರು ತಮ್ಮ ಬೈಕ್‌ಗಳಲ್ಲಿ ತನ್ನ ಮನೆವರೆಗೂ ನನ್ನನ್ನು ಹಿಂಬಾಲಿಸಿದ್ದರು ಎಂದು ವರುಣ್ ಹೇಳಿದ್ದಾರೆ.

Varun Chakravarthy Scripts History
Champions Trophy: ಭಾರತದ 'ಪ್ಲೇಯರ್ ಆಫ್ ಟೂರ್ನಮೆಂಟ್' ಕೊಹ್ಲಿ, ವರುಣ್, ರೋಹಿತ್ ಅಲ್ವೇ ಅಲ್ಲ! ಹಾಗಾದ್ರೆ ಆ Silent Hero ಯಾರು?

'ಇದು ನನಗೆ ಕರಾಳ ಸಮಯವಾಗಿತ್ತು. ವಿಶ್ವಕಪ್‌ಗೆ ಆಯ್ಕೆಯಾದ ನಂತರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ನಾನು ಖಿನ್ನತೆಗೆ ಒಳಗಾಗಿದ್ದೆ. ಒಂದೇ ಒಂದು ವಿಕೆಟ್ ಕೂಡ ಪಡೆಯದಿದ್ದಕ್ಕೆ ವಿಷಾದಿಸಿದೆ. ಅದಾದ ನಂತರ, ಮೂರು ವರ್ಷಗಳ ಕಾಲ ನನ್ನನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ. ಹೀಗಾಗಿ, ತಂಡಕ್ಕೆ ಮರಳುವುದು ನನ್ನ ಚೊಚ್ಚಲ ಪ್ರವೇಶಕ್ಕಿಂತಲೂ ಕಠಿಣವಾಗಿತ್ತು ಎಂದು ನಾನು ಭಾವಿಸುತ್ತೇನೆ' ಎಂದು ಯೂಟ್ಯೂಬ್‌ನಲ್ಲಿ ನಡೆದ ಚಾಟ್‌ನಲ್ಲಿ ಗೋಬಿನಾಥ್‌ಗೆ ತಿಳಿಸಿದ್ದಾರೆ.

'2021ರ ವಿಶ್ವಕಪ್ ನಂತರ, ನನಗೆ ಬೆದರಿಕೆ ಕರೆಗಳು ಬಂದವು. ಜನರು, 'ಭಾರತಕ್ಕೆ ಬರಬೇಡಿ. ಒಂದು ವೇಳೆ ನೀವು ಪ್ರಯತ್ನಿಸಿದರೆ, ಅದು ನಿಮಗೆ ಸಾಧ್ಯವಾಗುವುದಿಲ್ಲ' ಎಂದು ಹೇಳಿದರು. ಕೆಲವರು ನನ್ನ ಮನೆಗೆ ಬಂದಿದ್ದರು ಮತ್ತು ನಾನು ಕೆಲವೊಮ್ಮೆ ಅಡಗಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ನಾನು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ, ಕೆಲವು ಜನರು ತಮ್ಮ ಬೈಕ್‌ಗಳಲ್ಲಿ ನನ್ನನ್ನು ಹಿಂಬಾಲಿಸಿದರು. ಇದು ಕೆಲವೊಮ್ಮೆ ಸಂಭವಿಸುತ್ತದೆ. ಏಕೆಂದರೆ, ಅಭಿಮಾನಿಗಳು ಭಾವನಾತ್ಮಕವಾಗಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಅವರು ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್ ಪಡೆದ ವರುಣ್ ಚಕ್ರವರ್ತಿ, 2021ರ ಟಿ20 ವಿಶ್ವಕಪ್ ಸೋಲಿನ ನಂತರ ತಮ್ಮನ್ನು ತಾವು ಬಹಳಷ್ಟು ಬದಲಾಯಿಸಿಕೊಳ್ಳಬೇಕಾಯಿತು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com